ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | MADE IN SHIMOGA
SHIKARIPURA : ಆವತ್ತು ಉಪ್ಪಿನಕಾಯಿ ಮಾರಾಟಕ್ಕೆ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ಗೇಲಿ ಮಾಡಿದವರು, ಆಡಿಕೊಂಡವರು, ತಿರಸ್ಕರಿಸಿದವರು ಒಬ್ಬಿಬ್ಬರಲ್ಲ. ಇವತ್ತು ಅದೆ ಉಪ್ಪಿನಕಾಯಿ ದೊಡ್ಡ ಉದ್ಯಮವಾಗಿದೆ. ಹೆಸರಾಂತ ಬ್ರಾಂಡ್ ಆಗಿ ಬೆಳೆದು ನಿಂತಿದೆ. ತಾಲೂಕು, ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿ, ಕೋಟ್ಯಂತರ ಜನರ ಬಾಯಲ್ಲಿ ನೀರೂರಿಸುತ್ತಿದೆ. ಈ ಉಪ್ಪಿನಕಾಯಿ (Pickles) ಬ್ರಾಂಡ್ ನಮ್ಮ ಜಿಲ್ಲೆಯದ್ದು ಎಂಬುದು ನಮ್ಮ ಹೆಮ್ಮೆ.
ಶಿರಾಳಕೊಪ್ಪದ ಎಂ.ಎನ್.ಪಿಕಲ್ಸ್ (Pickles) ಇವತ್ತು ದೇಶಾದ್ಯಂತ ಬ್ರಾಂಡ್ ಆಗಿದೆ. ರಾಜ್ಯದ ವಿವಿಧೆಡೆ ಶೋ ರೂಂಗಳನ್ನು ಹೊಂದಿದೆ. ದೊಡ್ಡ ದೊಡ್ಡ ಕಂಪನಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ಒಡ್ಡುತ್ತಿದೆ.
ನಮ್ಮೂರಿನದ್ದೆ ಬ್ರಾಂಡ್
ನಾಲ್ಕು ದಶಕದಲ್ಲಿ ಹೆಮ್ಮರ
40 ವರ್ಷದಲ್ಲಿ ಎಂ.ಎನ್.ಪಿಕಲ್ಸ್ ಹೆಮ್ಮರವಾಗಿ ಬೆಳೆದು ನಿಂತಿದೆ. ಹಲವು ವೆರೈಟಿ ಉಪ್ಪಿನಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ. ಮಾವಿನ ಕಾಯಿ, ಲಿಂಬು, ಮಿಕ್ಸೆಡ್, ಎರಳೇ ಕಾಯಿ, ಹಾಟ್ ಅಂಡ್ ಸ್ವೀಟ್ ಲಿಂಬು, ಮಿಡಿ ಮಾವಿನ ಕಾಯಿ, ಅಪ್ಪೆ ಮಿಡಿ, ಮಾವಿನ ಶುಂಠಿ ಉಪ್ಪಿನಕಾಯಿಗಳು ಲಭ್ಯವಿದೆ. ಸಣ್ಣ ಬಾಟಲಿಯಿಂದ 5 ಕೆ.ಜಿ.ವರೆಗೆ ಉಪ್ಪಿನಕಾಯಿ ಸಿಗಲಿದೆ.
ಉಪ್ಪಿನಕಾಯಿ ಮಾತ್ರವಲ್ಲ, ಇನ್ನಷ್ಟು ವೆರೈಟಿ ಇದೆ
ಕಾಲಕ್ಕೆ ತಕ್ಕ ಹಾಗೆ ಹೊಸ ಆಲೋಚನೆ ಮತ್ತು ಯೋಜನೆಗಳು ರೂಪಿಸಬೇಕು ಅನ್ನುವುದು ಬಿಸ್ನೆಸ್ ಮಂತ್ರ. ಎಂ.ಎನ್.ಪಿಕಲ್ಸ್ ಸಂಸ್ಥೆಯು ಇದೆ ತಂತ್ರ ಅನುಸರಿಸುತ್ತಿದೆ. ಎಂ.ಎನ್.ಪಿಕಲ್ಸ್ ಸಂಸ್ಥೆ ಉಪ್ಪಿನಕಾಯಿಗೆ ಸೀಮಿತವಾಗದೆ ಇತರೆ ಆಹಾರ ಪದಾರ್ಥಗಳ ಉತ್ಪಾದನೆಯತ್ತಲು ಹೆಜ್ಜೆ ಹಾಕಿದೆ.
‘ಉಪ್ಪಿನಕಾಯಿ ಜೊತೆಗೆ ನಾವು ಮಸಾಲೆ ಪುಡಿ, ಕಷಾಯ ಪುಡಿ, ಪುಳಿಯೊಗರೆ ಗೊಜ್ಜು, ಪುಳಿಯೊಗರೆ ಪುಡಿ, ಮಜ್ಜಿಗೆ ಮೆಣಸು ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿದ್ದೇವೆ’ ಅನ್ನುತ್ತಾರೆ ಎಂ.ಆರ್.ಸತೀಶ್.
ಎಂ.ಎನ್.ಪಿಕಲ್ಸ್ ಸಂಸ್ಥೆಯು ಇವತ್ತು 72 ವಿವಿಧ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚಟ್ನಿ ಪುಡಿ, ಮಸಾಲೆ ಪುಡಿ, ಉಪ್ಪಿನಕಾಯಿ, ಹಪ್ಪಳ, ಕಷಾಯ ಪುಡಿಗಳನ್ನು ಈ ಬ್ರಾಂಡ್ ನೇಮ್ ನಲ್ಲಿ ಹೊರ ತರಲಾಗುತ್ತಿದೆ. ಲೋಕಲ್ ಟೇಸ್ಟ್ ಮತ್ತು ಫ್ಲೇವರ್ ಇರುವುದರಿಂದ ಎಂ.ಎನ್.ಪಿಕಲ್ಸ್ ಬ್ರಾಂಡ್ ಆಹಾರ ಪದಾರ್ಥಕ್ಕೆ ರಾಜ್ಯಾದ್ಯಂತ ಉತ್ತಮ ರೆಸ್ಪಾನ್ಸ್ ಇದೆ.
ಹೊರ ರಾಜ್ಯ, ದೇಶದವರು ರುಚಿ ಕಂಡಿದ್ದಾರೆ
ಎಂ.ಎನ್.ಪಿಕಲ್ಸ್ ಕರ್ನಾಟಕಕ್ಕಷ್ಟೆ ಸೀಮಿತವಲ್ಲ. ಹೊರ ರಾಜ್ಯದ ಜನರು ಇದರ ರುಚಿ ನೋಡಿದ್ದಾರೆ. ವಿದೇಶಗಳಿಗು ಎಂ.ಎನ್.ಪಿಕಲ್ಸ್ ತಲುಪಿದ್ದಿದೆ. 1999ರಲ್ಲಿ 3 ಕ್ವಿಂಟಾಲ್ ಮಾವಿನ ಮಿಡಿ ಅಮೆರಿಕ ದೇಶಕ್ಕೆ ರವಾನೆಯಾಗಿತ್ತು. ಅಮೆರಿಕ, ಕೆನಡಾ, ಬ್ರಿಟನ್, ಮಲೇಷಿಯಾ, ಸಿಂಗಪೂರ್, ಅರಬ್ ರಾಷ್ಟ್ರಗಳು, ನ್ಯೂಜಿಲ್ಯಾಂಡ್ ಸೇರಿ ಹಲವು ದೇಶಗಳಿಗು ಎಂ.ಎನ್.ಪಿಕಲ್ಸ್ ತಲುಪಿದೆ. ‘ಗುಣಮಟ್ಟ, ಶುಚಿ, ರುಚಿಗೆ ಆದ್ಯತೆ ನೀಡುವುದರಿಂದಲೆ ನಮ್ಮ ಉತ್ಪನ್ನಗಳನ್ನು ಜನರು ಪದೇ ಪದೆ ಖರೀದಿ ಮಾಡಲು ಕಾರಣ’ ಅನ್ನುತ್ತಾರೆ ಎಂ.ಆರ್.ಸತೀಶ್.
ವಿವಿಧೆಡೆ ಶೋ ರೂಂ ಸ್ಥಾಪನೆ
ನಮ್ಮೂರಿನ ಈ ಬ್ರಾಂಡ್ ರಾಜ್ಯದ ಎಲ್ಲಾ ಅಂಗಡಿಗಳಿಗು ತಲುಪುತ್ತಿದೆ. ಅಷ್ಟೆ ಅಲ್ಲ, ಎಂ.ಎನ್.ಸಂಸ್ಥೆಯ ಉತ್ಪನ್ನಗಳು ಒಂದೇ ಕಡೆ ಸಿಗುವಂತಾಗಲಿ ಎಂದು ಶೋ ರೂಂಗಳನ್ನೆ ಸ್ಥಾಪಿಸಲಾಗಿದೆ. ಶಿರಾಳಕೊಪ್ಪದ ಎಸ್.ಎಸ್.ಎಸ್ ರೋಡ್, ಶಿವಮೊಗ್ಗ ಬಿ.ಹೆಚ್.ರಸ್ತೆಯ ಚರ್ಚ್ ಕಾಂಪ್ಲೆಕ್ಸ್, ಸವಳಂಗ ರಸ್ತೆಯ ವಿಜಯಾ ಕಾಂಪ್ಲೆಕ್ಸ್, ಸಾಗರದ ಜೆ.ಸಿ.ರೋಡ್ ಸಾಗರ ಹೊಟೇಲ್ ಕಾಂಪ್ಲೆಕ್ಸ್, ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಎಂ.ಎನ್.ಪಿಕಲ್ಸ್ ಶೋರೂಂಗಳಿವೆ.
ಮನಸಿದ್ದರೆ ಮಾರ್ಗ
ಮಾಸೂರು ನಾರಾಯಣಪ್ಪ ಅವರ ದೃಢ ನಿರ್ಧಾರ, ಶ್ರಮ ವಹಿಸಿ ಸ್ಥಾಪಿಸಿದ ಸಂಸ್ಥೆಯನ್ನು ಅವರ ಕುಟುಂಬದವರು ಮುನ್ನಡೆಸುತ್ತಿದ್ದಾರೆ. ನಾರಾಯಣಪ್ಪ ಅವರ ಮೊಮ್ಮಕ್ಕಳು ಸಂಸ್ಥೆ ನಡೆಸುತ್ತಿದ್ದಾರೆ. ಈಗ ಎಂ.ಎನ್.ಪಿಕಲ್ಸ್ ದೊಡ್ಡ ಸಂಖ್ಯೆ ಗ್ರಾಹಕರನ್ನು ಹೊಂದಿದೆ. ಉದ್ಯಮ ಸ್ಥಾಪನೆಯ ಕನಸು ಹೊತ್ತವರಿಗೆ ನಮ್ಮೂರಿನ ಎಂ.ಎನ್.ಪಿಕಲ್ಸ್ ಮಾದರಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422