ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | NAMMURU SHIVAMOGGA | 2 ಅಕ್ಟೋಬರ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬ್ರಿಟೀಷರ ವಿರುದ್ಧ ಹೋರಾಟ ಸುಲಭದ್ದಾಗಿರಲಿಲ್ಲ. ಚಳವಳಿ ರೂಪಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದೇಶ ಸುತ್ತುತ್ತಿದ್ದರು. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಗೂ ಮಹಾತ್ಮ ಗಾಂಧೀಜಿ ಬಂದಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಇವೆ ಎರಡು ತೆಂಗಿನ ಮರಗಳು.
1927ರಲ್ಲಿ ಮಹಾತ್ಮ ಗಾಂಧೀಜಿ ಅವರು ಪತ್ನಿ ಕಸ್ತೂರ ಬಾ ಅವರೊಂದಿಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಗೋಪಿ ಸರ್ಕಲ್ ಸಮೀಪ ಪ್ರಧಾನ ಅಂಚೆ ಕಚೇರಿ ಮುಂಭಾಗ ಇದ್ದ ನ್ಯಾಷನಲ್ ಲಾಡ್ಜ್‍ನಲ್ಲಿ ಒಂದು ವಾರ ತಂಗಿದ್ದರು.
ಖ್ಯಾತ ವಕೀಲ ವೆಂಕಟಸುಬ್ಬಶಾಸ್ತ್ರಿ ಅವರು ಗಾಂಧೀಜಿ ಅವರನ್ನು ಶಿವಮೊಗ್ಗಕ್ಕೆ ಕರೆ ತಂದಿದ್ದರು.
ನ್ಯಾಷನಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಸಂದರ್ಭ, ಗಾಂಧೀಜಿ ಅವರ ಭೇಟಿಯನ್ನು ಚಿರಸ್ಥಾಯಿಗೊಳಿಸಲು ಲಾಡ್ಜ್ ಮಾಲೀಕರು ಎರಡು ತೆಂಗಿನ ಸಸಿಗಳನ್ನು ನೆಡಿಸಿದ್ದರು.
ಈಗಲು ಇದೆ ತೆಂಗಿನ ಮರಗಳು
ಸ್ವಲ್ಪ ವರ್ಷದ ಬಳಿಕ ನ್ಯಾಷನಲ್ ಲಾಡ್ಜ್ ಬೃಂದಾವನ ಹೊಟೇಲ್ ಎಂದು ಬದಲಾಯಿತು. ಬಹು ವರ್ಷದ ಬಳಿಕ ಬೃಂದಾವನ ಹೊಟೇಲ್ ಕಟ್ಟಡ ಶಿಥಿಲವಾಗಿದೆ ಎಂದು ಅದನ್ನು ಕೆಡವಲಾಯಿತು. ಆ ಸೈಟ್ ಈಗಲು ಖಾಲಿ ಇದೆ. ಆದರೆ ಗಾಂಧೀಜಿ ದಂಪತಿ ನೆಟ್ಟ ಸಸಿಗಳು ಹೆಮ್ಮರವಾಗಿ ರಸ್ತೆಗೆ ಕಾಣುವಂತೆ ನಿಂತಿವೆ.
ಹೆಚ್.ಪಿ.ಸಿ. ಟಾಕೀಸ್ ಪಕ್ಕದ ಖಾಲಿ ಸೈಟ್‍ನ ಕಾಂಪೌಂಡ್ ಪಕ್ಕದಲ್ಲಿರುವ ಮೂರು ತೆಂಗಿನ ಮರಗಳ ಪೈಕಿ ಎರಡು ಗಾಂಧೀಜಿ ದಂಪತಿ ನೆಟ್ಟ ಸಸಿಗಳು.
ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ, ಗಾಂಧೀಜಿ ಅವರು ಆನಂದಪುರ, ಸಾಗರ, ಹೊಸನಗರದ ನಗರ, ತೀರ್ಥಹಳ್ಳಿಯ ವಿವಿಧೆಡೆ ಪ್ರವಾಸ ಮಾಡಿದರು. ಹಲವರ ಮನೆಗಳು, ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ, ಸಭೆಗಳಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಭಾಷಣ ಮಾಡಿದ್ದರು. ಸಾಮಾಜಿಕ ಜಾಲತಾಣಗಳಿಲ್ಲದ ಯುಗದಲ್ಲಿ ಗಾಂಧೀಜಿ ಅವರ ಭೇಟಿಯ ವಿಚಾರ ತಿಳಿದು ಸಾವಿರಾರು ಜನರು ಸಭೆಗಳಲ್ಲಿ ಭಾಗಹಿಸಿದ್ದರು.
ಓದುಗರ ಗಮನಕ್ಕೆ : ಶಿವಮೊಗ್ಗ ಜಿಲ್ಲೆಯ ಕುರಿತು ಹಲವು ಕುತೂಹಲಕಾರಿ, ಐತಿಹಾಸಿಕ ಸಂಗತಿಗಳು ಇನ್ಮುಂದೆ ಪ್ರತಿ ವಾರ ‘ನಮ್ಮೂರು ಶಿವಮೊಗ್ಗ’ ಅಂಕಣದಲ್ಲಿ ಪ್ರಕಟವಾಗಲಿವೆ. ಈ ಕೆಳಗಿನ ಈ ಮೇಲ್ ಮತ್ತು ವಾಟ್ಸಪ್ ನಂಬರ್‍ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಪ್ರತಿದಿನವೂ ಅದೇ ರಸ್ತೆಯಲ್ಲಿ ಓಡಾಡಿದ್ದರೂ ಈ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಧನ್ಯವಾದಗಳು ಈ ಮಾಹಿತಿ ನೀಡಿದ್ದಕ್ಕೆ. ಮುಂದೆಯೂ ಇಂತಹ ಕುತೂಹಲಕರ ಮಾಹಿತಿಗಳು ನಮಗೆ ಸಿಗುವಂತಾಗಲಿ.
ಅನಿಲ್ ಸಾಗರ್
ಕಾಚಿನಕಟ್ಟೆ
ನಿಮ್ಮ ಅಭಿಮಾನಿ
ಹೀಗೆ ಒಳ್ಳೆ ಒಳ್ಳೆ ವಿಷಯಗಳನ್ನು ಬರಿಯುತ್ತಿರಿ.