SHIVAMOGGA LIVE NEWS | 1 NOVEMBER 2023
RAILWAY NEWS | ರಿಸರ್ವೇಷನ್ ಬೋಗಿಯಲ್ಲಿ ಕೊನೆ ಕ್ಷಣದಲ್ಲಿ ಯಾವೆಲ್ಲ ಸೀಟ್‌ಗಳು (SEATS) ಖಾಲಿಯಾಗಿವೆ. ಪ್ರಯಾಣಿಕರ ಚಾರ್ಟ್ ಸಿದ್ಧವಾದ ಮೇಲೆ ಯಾವೆಲ್ಲ ಸೀಟ್‌ನ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಅನ್ನುವುದನ್ನು ತಿಳಿಯುವುದು ಈಗ ಸುಲಭ. ರೈಲ್ವೆ ಇಲಾಖೆ ಇದಕ್ಕಾಗಿ ತನ್ನ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದೆ.
![]() |
ಕೊನೆ ಕ್ಷಣದಲ್ಲಿ ರೈಲು ಹತ್ತಬೇಕಾದ ತುರ್ತು ಎದುರಾದಾಗ ಪ್ರಯಾಣಿಕರು ಮೊದಲೆ ಯಾವೆಲ್ಲ ಸೀಟ್ ಖಾಲಿ ಇದೆ ಎಂದು ಪರಿಶೀಲಿಸಿ, TTE ಬಳಿ ಟಿಕೆಟ್ ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ- ಉಚಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸಲು ಬಂದಿದೆ app? ಏನಿದು ಕ್ರೆಡಿಟ್ ಸ್ಕೋರ್? ಪ್ರಯೋಜನವೇನು?
ಖಾಲಿ ಸೀಟ್ ಪತ್ತೆ ಹಚ್ಚೋದು ಹೇಗೆ?
ರೈಲ್ವೆ ಇಲಾಖೆಯ ಟಿಕೆಟ್ ಬುಕಿಂಗ್ ವೆಬ್‌ಸೈಟ್ IRCTCಯಲ್ಲಿ ಖಾಲಿ ಉಳಿದಿರುವ ಸೀಟ್‌ಗಳ ವಿವರ ಲಭ್ಯವಾಗಲಿದೆ. ವೆಬ್‌ಸೈಟ್‌ನಲ್ಲಿ ಟಿಕೆಟ್ PNR STATUS ಪರಿಶೀಲನೆಗೆ ಪ್ರತ್ಯೇಕ ಬಾಕ್ಸ್ ಇದೆ. ಇದರ ಪಕ್ಕದಲ್ಲಿ CHARTS / VACANCY ಎಂಬ ಕಾಲಂ ಇದೆ. ಅಲ್ಲಿ ಕ್ಲಿಕ್ ಮಾಡಬೇಕು.
ರೈಲಿನ ಸಂಖ್ಯೆ ಮತ್ತು ಪ್ರಯಾಣದ ದಿನಾಂಕ ದಾಖಲಿಸಬೇಕು. ಯಾವ ನಿಲ್ದಾಣದಿಂದ ಪ್ರಯಾಣ ಮಾಡಲಿದ್ದೀರಿ ಎಂಬುದು ಎಂಟ್ರಿ ಮಾಡಬೇಕು. ನಂತರ GET TRAIN CHART ಕ್ಲಿಕ್ ಮಾಡಬೇಕು.
ರೈಲ್ಲಿನಲ್ಲಿರುವ ಪ್ರತಿ ಬೋಗಿಯ ಕೋಡ್ ನೇಮ್‌ಗಳು ಕಾಣಿಸಲಿವೆ. ಬೋಗಿಯ ಕೋಡ್ ಮೇಲೆ ಕ್ಲಿಕ್ ಮಾಡಿದರೆ ಬುಕ್ ಆಗಿರುವ ಸೀಟ್‌ಗಳ ವಿವರ ಲಭ್ಯ. ರೈಲಿನಲ್ಲಿ ಪೂರ್ತಿ ಪ್ರಯಾಣಿಸುವ ಪ್ರಯಾಣಿಕರು. ಮಧ್ಯದಲ್ಲೇ ಯಾವುದೋ ನಿಲ್ದಾಣದಲ್ಲಿ ಇಳಿಯುವವರು. ಖಾಲಿ ಇರುವ ಸೀಟು ಎಂದು ಪ್ರತ್ಯೇಕ ಬಣ್ಣದಲ್ಲಿ ತೋರಿಸಲಾಗುತ್ತದೆ.
ತುರ್ತು ಪ್ರಯಾಣ ಮಾಡುವವರು ಮೊದಲೆ ಈ ವಿವರ ಪಡೆದು TTEಯನ್ನು ಸಂಪರ್ಕಿಸಿ ಹಣ ಪಾವತಿಸಿ ಟಿಕೆಟ್ ಪಡೆದು ಸೀಟ್ ಹಿಡಿದು ನೆಮ್ಮದಿಯಿಂದ ಪ್ರಯಾಣಿಸಬಹುದಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200