ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆಯು ರೈಲು ಸಂಖ್ಯೆ 16205/16206 ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ರೈಲುಗಳ (Express Train) ಹಳೆಯ ಮಾದರಿಯ ಐಸಿಎಫ್ ಬೋಗಿಗಳನ್ನು ತೆಗೆದುಹಾಕಿ, ಅವುಗಳ ಬದಲಿಗೆ ಅತ್ಯಾಧುನಿಕ ಲಿಂಕ್ ಹಾಫ್ಮನ್ ಬುಶ್ (LHB) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga-Live-Number-1-Website

ಸುಧಾರಿತ ಬೋಗಿಗಳ ಸೇವೆಯು ಏಪ್ರಿಲ್ 8 ರಿಂದ ತಾಳಗುಪ್ಪ ಮತ್ತು ಮೈಸೂರು ಎರಡೂ ನಿಲ್ದಾಣಗಳಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ. ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ನಂತರ ಈ ರೈಲು ಒಟ್ಟು 18  ಎಲ್‌ಹೆಚ್‌ಬಿ  ಬೋಗಿಗಳೊಂದಿಗೆ ಸಂಚರಿಸಲಿದೆ.

ಇದರಲ್ಲಿ ಒಂದು ಎಸಿ ಚೇರ್ ಕಾರ್, ಐದು ದ್ವಿತೀಯ ದರ್ಜೆ ಚೇರ್ ಕಾರ್ ಬೋಗಿಗಳು ಹಾಗೂ ಹತ್ತು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಇರಲಿವೆ. ಇದರೊಂದಿಗೆ ದಿವ್ಯಾಂಗ ಸ್ನೇಹಿ ಸೌಲಭ್ಯವನ್ನು ಹೊಂದಿರುವ ದ್ವಿತೀಯ ದರ್ಜೆ ಮತ್ತು ಲಗೇಜ್ ಬ್ರೇಕ್ ವ್ಯಾನ್ ಹಾಗೂ ಇನ್ನೊಂದು ಲಗೇಜ್-ಕಮ್-ಬ್ರೇಕ್ ವ್ಯಾನ್ ಈ ರೈಲಿನ ಸಂಯೋಜನೆಯಲ್ಲಿ ಇರಲಿವೆ.

Electric-Locomotive-train-for-Shimoga

ಈ ಆಧುನಿಕೀಕರಣದಿಂದಾಗಿ ಪ್ರಯಾಣಿಕರು ಇನ್ನು ಮುಂದೆ ಮೈಸೂರು ಮತ್ತು ತಾಳಗುಪ್ಪ ನಡುವೆ ಸುಲಲಿತ, ಸುರಕ್ಷಿತ ಹಾಗೂ ಅತ್ಯಂತ ಆರಾಮದಾಯಕ ಪ್ರಯಾಣವನ್ನು ನಿರೀಕ್ಷಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನಿದು LHB ಬೋಗಿ?

ಭಾರತೀಯ ರೈಲ್ವೆಯ ಲಿಂಕ್ ಹಾಫ್ಮನ್ ಬುಶ್ (LHB) ಬೋಗಿಗಳು ಆಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕರ ಸುರಕ್ಷತೆಗೆ ಹೆಸರುವಾಸಿ. ಜರ್ಮನ್‌ ತಂತ್ರಜ್ಞಾನದ ಆಧಾರದ ಮೇಲೆ ಈ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್‌

ಹಳೆಯ ಐಸಿಎಫ್ (ICF) ಬೋಗಿಗಳಿಗಿಂತ LHB ಬೋಗಿಗಳು ಹಗುರವಾಗಿರಲಿದೆ. ಅಲ್ಲದೆ ಗಂಟೆಗೆ 160 ರಿಂದ 200 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಅಪಘಾತದ ಸಂದರ್ಭ ಇವುಗಳು ಒಂದರ ಮೇಲೊಂದು ಏರದಂತೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಪ್ರಾಣಹಾನಿ ಕಡಿಮೆ ಮಾಡುತ್ತದೆ. ಉತ್ತಮ ಬ್ರೇಕಿಂಗ್ ವ್ಯವಸ್ಥೆ, ಕಡಿಮೆ ಶಬ್ದ ಮತ್ತು ವಿಶಾಲವಾದ ಕಿಟಕಿಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ : ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಯಾವ ಎಕ್ಸ್‌ಪ್ರೆಸ್‌ ರೈಲಿಗೆ ಅಳವಡಿಕೆ?

ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16205/16206) ರೈಲಿಗೆ LHB ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ರೈಲು ಪ್ರತಿದಿನ ಮಧ್ಯಾಹ್ನ 2:30ಕ್ಕೆ ತಾಳಗುಪ್ಪದಿಂದ ಹೊರಟು ಶಿವಮೊಗ್ಗ, ಹಾಸನ ಮಾರ್ಗವಾಗಿ ರಾತ್ರಿ 10:30ಕ್ಕೆ ಮೈಸೂರು ತಲುಪುತ್ತದೆ. ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಟು ಹಾಸನ, ಶಿವಮೊಗ್ಗ ಮಾರ್ಗವಾಗಿ ಮಧ್ಯಾಹ್ನ 1:25ಕ್ಕೆ ತಾಳಗುಪ್ಪ ತಲುಪುತ್ತದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 6, 2026

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Leave a Comment