ರೈಲ್ವೆ ಇಲಾಖೆಯ ಮತ್ತೊಂದು ವಿಭಿನ್ನ ಫೀಚರ್, ಈಗ ಮೊಬೈಲ್ ನಲ್ಲೇ ರೈಲು ಎಲ್ಲಿದೆ ಅಂತಾ ಗೊತ್ತಾಗುತ್ತೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

SHIVAMOGGA LIVE NEWS | 2 NOVEMBER 2022

ಶಿವಮೊಗ್ಗ | ಟೈಮಾಯ್ತು ಅಂತಾ ಒಂದೆ ಉಸಿರಲ್ಲಿ ಪ್ಲಾಟ್ ಫಾರಂಗೆ ಓಡೋಡಿ ಬಂದ ದೀಪಿಕಾ ಗಾಬರಿಯಾದಳು. ನಿಗದಿತ ಪ್ಲಾಟ್ ಫಾರಂನಲ್ಲಿ ರೈಲೆ ಇರಲಿಲ್ಲ. ‘ಅರೆ ರೈಲು ಹೋಗೆಬಿಟ್ಟಿದ್ದೆಯಾ’ ಅಂತಾ ಮನಸಲ್ಲೇ ಕೇಳಿಕೊಂಡು ಬೇಜಾರಾದಳು. ಅಷ್ಟರಲ್ಲೇ ಪರಿಚಯದವರು ಸಿಕ್ಕರು. ಅವರೊಂದಿಗೆ ಮಾತನಾಡಿದಾಗಲೆ ರೈಲು ಇನ್ನು ಬಂದಿಲ್ಲ ಅನ್ನೋದು ಗೊತ್ತಾಗಿದ್ದು. LIVE TRAIN RUNNING STATUS

➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

Shimoga Nanjappa Hospital

ಪರಿಚಿತ ವ್ಯಕ್ತಿ ಮೊಬೈಲ್ ಮೂಲಕ ರೈಲನ್ನು ಟ್ರ್ಯಾಕ್ ಮಾಡುತ್ತಿದ್ದರು. ಮೆಜೆಸ್ಟಿಕ್ ನಿಲ್ದಾಣಕ್ಕೆ ರೈಲು ತಲುಪಲು ಇನ್ನೂ ಅರ್ಧ ಗಂಟೆಯಾಗಲಿದೆ ಎಂದು ನಿಖರವಾಗಿ ಹೇಳಿದರು. ಆತನಕ ಗೊಂದಲದಲ್ಲಿದ್ದ ದೀಪಿಕಾಳ ಮುಖ ಕುತೂಹಲದಿಂದ ಪರಿಚಿತ ವ್ಯಕ್ತಿಯ ಮೊಬೈಲ್ ಕಡೆ ಹೊರಳಿತು. ಮೊಬೈಲ್ ಮೂಲಕ ಪರಿಚಿತ ವ್ಯಕ್ತಿ ರೈಲನ್ನು ಟ್ರ್ಯಾಕ್ ಮಾಡುತ್ತಿದ್ದದ್ದು ಹೇಗೆ ವಿಚಾರಿಸಲು ಆರಂಭಿಸಿದಳು.

PRAYANIKARE-GAMANISI logo

ಮೊಬೈಲ್ ನಲ್ಲೇ ರೈಲನ್ನು ಟ್ರ್ಯಾಕ್ ಮಾಡಿ

ರೈಲ್ವೆ ಇಲಾಖೆ TECHNOLOGYಯನ್ನು ಸದ್ಬಳಕೆ ಮಾಡಿಕೊಂಡು ಪ್ರಯಾಣಿಕರ ಸುಖ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಿದೆ. LIVE TRAIN RUNNING STATUS ಎಂಬ FEATURE ಇದಕ್ಕೆ ಉತ್ತಮ ಉದಾಹರಣೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ ಜಿಲ್ಲೆಯಿಂದ ರಾಜ್ಯದ ಯಾವೆಲ್ಲ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕವಿದೆ ಗೊತ್ತಾ?

ನೀವು ಪ್ರಯಾಣ ಮಾಡಬೇಕಿರುವ ರೈಲು ನಿಲ್ದಾಣಕ್ಕೆ ಬಂದಿದೆಯಾ? ನಿಖರವಾಗಿ ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ತಲುಪುತ್ತೆ ಅನ್ನೋದನ್ನು LIVE TRAIN RUNNING STATUS ಮೂಲಕ CHECK ಮಾಡಿಕೊಳ್ಳಬಹುದಾಗಿದೆ.

ರೈಲನ್ನು ಟ್ರ್ಯಾಕ್ ಮಾಡುವುದು ಹೇಗೆ?

ರೈಲ್ವೆ ಇಲಾಖೆಯ WEBSITE ಮೂಲಕ ಎಲ್ಲಾ ರೈಲುಗಳನ್ನು ಪ್ರಯಾಣಿಕರು ಟ್ರ್ಯಾಕ್ ಮಾಡಬಹುದಾಗಿದೆ. https://enquiry.indianrail.gov.in/mntes/ ಈ ಲಿಂಕ್ ಕ್ಲಿಕ್ ಮಾಡಿ. ನೀವು ಪ್ರಯಾಣಿಸಬೇಕಿರುವ ರೈಲಿನ ಸಂಖ್ಯೆ ಅಥವಾ ಹೆಸರು, ಸ್ಟೇಷನ್ ನಮೂದು ಮಾಡಿ, ಕೆಳಗೆ ದಿನಾಂಕ ಕ್ಲಿಕ್ ಮಾಡಿದರೆ ಸಾಕು.

ರೈಲು ಎಲ್ಲಿಂದ ಹೊರಡಲಿದೆ. ಎಲ್ಲಿಗೆ ತಲುಪಲಿದೆ. ನಿಮ್ಮ ನಿಲ್ದಾಣಕ್ಕೆ ತಲುಪಲು ಬೇಕಾದ ಅಂದಾಜು ಸಮಯ, ಪ್ಲಾಟ್ ಫಾರಂ ನಂಬರ್ ಸೇರಿದಂತೆ 10 ಮಾಹಿತಿ ಮೊಬೈಲ್ ಪರದೆ ಮೇಲೆ ಕಾಣಸಿಗಲಿದೆ.

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Leave a Comment