ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
RAILWAY NEWS, 20 NOVEMBER 2024 : ನಿಡವಂದ ಯಾರ್ಡ್ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ 3 ರೈಲು (Train) ಸಂಚಾರ ರದ್ದುಗೊಳಿಸಿದ್ದು, ಕೆಲ ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ರೈಲುಗಳು ಇದ್ದಾವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಯಾವೆಲ್ಲ ರೈಲು ಸಂಚಾರ ರದ್ದು?
ನ.23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (ಸಂಖ್ಯೆ 06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ಪ್ರೆಸ್ (16239) ಮತ್ತು ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ಪ್ರೆಸ್ (16240) ರೈಲುಗಳು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದಾದ ರೈಲುಗಳು
ನ.23 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ದೊಡ್ಡಬೆಲೆ-ತುಮಕೂರು ಮಧ್ಯೆ, ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06576) ಸೇವೆಯನ್ನು ತುಮಕೂರು-ದೊಡ್ಡ ಬೆಲೆ ನಿಲ್ದಾಣದ ಮಧ್ಯೆ ಭಾಗಶಃ ರದ್ದು ಮಾಡಲಾಗಿದೆ.
ನ.23 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06575) ರೈಲು ದೊಡ್ಡಬೆಲೆ-ತುಮಕೂರು ಮಧ್ಯೆ, ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ತುಮಕೂರು-ದೊಡ್ಡಬೆಲೆ ನಿಲ್ದಾಣದ ಮಧ್ಯೆ ಸಂಚರಿಸುವುದಿಲ್ಲ.
ಕೆಲವು ರೈಲುಗಳು ನಿಯಂತ್ರಣ
ನ.22 ರಂದು ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ (17392) 20 ನಿಮಿಷ, ನ.24 ರಂದು ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ (20652) 30 ನಿಮಿಷ, ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ಪ್ರೆಸ್ ರೈಲು (17326) ರೈಲನ್ನು ಎರಡು ಗಂಟೆ ನಿಯಂತ್ರಿಸಲಾಗುತ್ತದೆ.
ತಡವಾಗಿ ಆರಂಭವಾಗಲಿರುವ ರೈಲುಗಳು
ನ.24 ರಂದು ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಎಕ್ಸ್ಪ್ರೆಸ್ (12725) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ 30 ನಿಮಿಷ, ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ್ಪ್ರೆಸ್ (16579) ಯಶವಂತಪುರದಿಂದ 90 ನಿಮಿಷ ತಡವಾಗಿ ಹೊರಡಲಿದೆ.
ಇದನ್ನೂ ಓದಿ » ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿ ಲಾಡ್ಜ್ನಲ್ಲಿ ನೇಣಿಗೆ ಶರಣು
Train
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422