ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 JULY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
RAILWAY NEWS : ಶಿವಮೊಗ್ಗ – ಚೆನ್ನೈ ಮಧ್ಯೆ ನೂತನ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ದಿನಾಂಕ (Time Table) ಪ್ರಕಟಿಸಿದೆ. ಜು.13ರಂದು ಸಂಜೆ 4.15ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರಾರಂಭದಲ್ಲಿ ವಾರಕ್ಕೆ ಒಮ್ಮೆ ಮಾತ್ರ ಈ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 12691 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ – ಶಿವಮೊಗ್ಗ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಸಂಖ್ಯೆ 12692 ಶಿವಮೊಗ್ಗ ನಿಲ್ದಾಣ – ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿದೆ.
ಚೆನ್ನೈ – ಶಿವಮೊಗ್ಗ ಎಲ್ಲೆಲ್ಲಿ ಸ್ಟಾಪ್ ಇದೆ?
ಶುಕ್ರವಾರ ರಾತ್ರಿ 11.30ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ರಾತ್ರಿ 12.23ಕ್ಕೆ ಅರಕೋಣಂ, ರಾತ್ರಿ 12.43ಕ್ಕೆ ಶೋಲಿಂಘುರ್, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.54ಕ್ಕೆ ಜೋಲಾರ್ಪೆಟ್ಟೈ ಜಂಕ್ಷನ್, ರಾತ್ರಿ 3.45ಕ್ಕೆ ಬಂಗಾರಪೇಟೆ , ರಾತ್ರಿ 4.39ಕ್ಕೆ ಕೃಷ್ಣರಾಜಪುರಂ, ಬೆಳಗ್ಗೆ 5.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಳಗ್ಗೆ 7.38ಕ್ಕೆ ತುಮಕೂರು, ಬೆಳಗ್ಗೆ 9.04ಕ್ಕೆ ತಿಪಟೂರು, ಬೆಳಗ್ಗೆ 9.30ಕ್ಕೆ ಅರಸೀಕೆರೆ, ಬೆಳಗ್ಗೆ 10.05ಕ್ಕೆ ಬೀರೂರು, ಬೆಳಗ್ಗೆ 10.20ಕ್ಕೆ ಕಡೂರು, ಬೆಳಗ್ಗೆ 10.47ಕ್ಕೆ ತರೀಕೆರೆ, ಬೆಳಗ್ಗೆ 11.33ಕ್ಕೆ ಭದ್ರಾವತಿ, ಮಧ್ಯಾಹ್ನ 12.20ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ.
ಶಿವಮೊಗ್ಗ – ಚೆನ್ನೈ, ಎಲ್ಲೆಲ್ಲಿ ಸ್ಟಾಪ್ ಇದೆ?
ಶನಿವಾರ ಸಂಜೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಸಂಜೆ 5.33ಕ್ಕೆ ಭದ್ರಾವತಿ, ಸಂಜೆ 5.53ಕ್ಕೆ ತರೀಕೆರೆ, ಸಂಜೆ 6.23ಕ್ಕೆ ಕಡೂರು, ಸಂಜೆ 6.34ಕ್ಕೆ ಬೀರೂರು, ರಾತ್ರಿ 7.10ಕ್ಕೆ ಅರಸೀಕೆರೆ, ರಾತ್ರಿ 7.36ಕ್ಕೆ ತಿಪಟೂರು, ರಾತ್ರಿ 8.28 ತುಮಕೂರು, ರಾತ್ರಿ 10.20ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ರಾತ್ರಿ 11.10ಕ್ಕೆ ಕೃಷ್ಣರಾಜಪುರಂ, ರಾತ್ರಿ 11.22ಕ್ಕೆ ಬಂಗಾರಪೇಟೆ , ರಾತ್ರಿ 12.27ಕ್ಕೆ ಜೋಲಾರ್ಪೆಟ್ಟೈ ಜಂಕ್ಷನ್, ರಾತ್ರಿ 1.23ಕ್ಕೆ ಕಾಟ್ಪಾಡಿ, ರಾತ್ರಿ 2.33ಕ್ಕೆ ಶೋಲಿಂಘುರ್, ರಾತ್ರಿ 3.03ಕ್ಕೆ ಅರಕೋಣಂ, ಬೆಳಗ್ಗೆ 4.13ಕ್ಕೆ ಪೆರಂಬೂರು, ಬೆಳಗ್ಗೆ 4.55ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ.
ರೈಲಿಗೆ ಎಷ್ಟು ಬೋಗಿಗಳಿವೆ?
ಶಿವಮೊಗ್ಗ – ಚೆನ್ನೈ ರೈಲಿನಲ್ಲಿ 22 ಬೋಗಿಗಳು ಇರಲಿವೆ. ಈ ಪೈಕಿ ಒಂದು ಎ.ಸಿ. ಬೋಗಿ, ಎರಡು 2 ಟೈರ್ ಎ.ಸಿ ಬೋಗಿ, ಆರು 3 ಟೈರ್ ಎ.ಸಿ. ಬೋಗಿ, ಆರು ಸ್ಲೀಪರ್ ಬೋಗಿ, ಎರಡು ಸಕೆಂಡ್ ಸಿಟ್ಟಿಂಗ್, ಒಂದು ಎಸ್ಎಲ್ಆರ್, ಒಂದು ಪವರ್ ಕಾರ್ ಬೋಗಿ ಇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ – ಶಂಕರಘಟ್ಟದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ, ಕುವೆಂಪು ವಿವಿಯಲ್ಲಿ ತರಗತಿ ಬಹಿಷ್ಕಾರ, ಮೆರವಣಿಗೆ