ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಶಿವಮೊಗ್ಗದ ಜಿಲ್ಲೆ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ರೈಲ್ವೆ ಸಂಪರ್ಕ (SHIMOGA RAILWAY) ಹೊಂದಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆ ಮಲೆನಾಡಿನ ಪ್ರಮುಖ ರೈಲ್ವೆ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಮೊದಲು ಶಿವಮೊಗ್ಗ – ಬೆಂಗಳೂರು ನಡುವೆ ಮಾತ್ರ ರೈಲ್ವೆ ಸಂಪರ್ಕವಿತ್ತು. ಈಗ ಹಲವು ಜಿಲ್ಲೆಗಳಿಗೆ ಶಿವಮೊಗ್ಗದಿಂದ ನೇರವಾಗಿ ರೈಲಿನಲ್ಲಿ ಸಂಚರಿಸಬಹುದಾಗಿದೆ. ಶಿವಮೊಗ್ಗದಿಂದ ಯಾವ್ಯಾವ ಜಿಲ್ಲೆಗೆ ರೈಲಿನಲ್ಲಿ ಪ್ರಯಾಣಿಸಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಚಿಕ್ಕಮಗಳೂರಿಗೆ ರೈಲು
ಶಿವಮೊಗ್ಗ ಚಿಕ್ಕಮಗಳೂರು ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲಾಗಿದೆ. ವಾರದ ಎಲ್ಲಾ ದಿನ ಚಿಕ್ಕಮಗಳೂರಿಗೆ ರೈಲು ಸಂಚರಿಸಲಿದೆ. ಸಂಜೆ 6.30ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ರಾತ್ರಿ 9.40ಕ್ಕೆ ಚಿಕ್ಕಮಗಳೂರು ತಲುಪಲಿದೆ. ಸಂಜೆ ವೇಳೆ ಸಂಚರಿಸುವುದರಿಂದ ಈ ರೈಲಿಗೆ ಉತ್ತಮ ಸ್ಪಂದನೆ ಇದೆ.
(SHIMOGA RAILWAY)
ಹಾಸನ ಜಿಲ್ಲೆಗೆ ರೈಲು
ಶಿವಮೊಗ್ಗದಿಂದ ಈಗ ಹಾಸನ ಜಿಲ್ಲೆಗು ನೇರವಾಗಿ ರೈಲಿನಲ್ಲಿ ಸಂಚರಿಸಬಹುದಾಗಿದೆ. ಶಿವಮೊಗ್ಗ – ಮೈಸೂರು ರೈಲುಗಳು ಹಾಸನ ಜಿಲ್ಲೆಯನ್ನು ಹಾದು ಹೋಗಲಿವೆ.
ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಡುವ ಕುವೆಂಪು ಎಕ್ಸೆ ಪ್ರೆಸ್ ರೈಲು ಬೆಳಗ್ಗೆ 7.55ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 8.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಮಧ್ಯಾಹ್ನ 12.28ಕ್ಕೆ ಹಾಸನ ರೈಲ್ವೆ ನಿಲ್ದಾಣದ ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಪ್ರಯಾಣಿಕರೆ ಗಮನಿಸಿ – ರಾತ್ರಿ ಸಂಚರಿಸುವವರಿಗೆ ರೈಲ್ವೆ ಇಲಾಖೆಯಿಂದ ಅಲರಾಂ ಸೌಲಭ್ಯ, ಏನಿದು?
ತಾಳಗುಪ್ಪ ಮೈಸೂರು ಇಂಟರ್ ಸಿಟಿ ರೈಲು ಕೂಡ ಹಾಸನ ಜಿಲ್ಲೆಯನ್ನು ಹಾದು ಹೋಗಲಿದೆ. ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ಶಿವಮೊಗ್ಗದಿಂದ ಸಂಜೆ 4.50ಕ್ಕೆ ಹೊರಡಲಿದೆ. ರಾತ್ರಿ. 7.38ಕ್ಕೆ ಹಾಸನ ರೈಲ್ವೆ ನಿಲ್ದಾಣ ತಲುಪಲಿದೆ.
ಶಿವಮೊಗ್ಗ – ಮೈಸೂರು ರೈಲು ಮೂಲಕ ನೇರವಾಗಿ ಹಾಸನ ತಲುಪಬಹುದಾಗಿದೆ. ಬೆಳಗ್ಗೆ 11.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಮಧ್ಯಾಹ್ನ 2.05ಕ್ಕೆ ಹಾಸನ ರೈಲ್ವೆ ನಿಲ್ದಾಣ ತಲುಪಲಿದೆ. (SHIMOGA RAILWAY)
ತುಮಕೂರು ಜಿಲ್ಲೆಗೆ
ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳು ತುಮಕೂರು ಜಿಲ್ಲೆಯೊಂದಿಗೆ ಸಂಪರ್ಕ ಕಲ್ಪಿಸಲಿವೆ. ಮತ್ತೊಂದೆಡೆ ಶಿವಮೊಗ್ಗ – ತುಮಕೂರು ನಡುವೆ ಪ್ರತ್ಯೇಕವಾಗಿ ಎರಡು ರೈಲು ಸೇವೆ ಆರಂಭಿಸಲಾಗಿದೆ.
ಶಿವಮೊಗ್ಗ – ತುಮಕೂರು ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 4 ಗಂಟೆಗೆ ಹೊರಟು ಬೆಳಗ್ಗೆ 9.25ಕ್ಕೆ ತುಮಕೂರು ತಲುಪಲಿದೆ. ಇನ್ನು, ಜನ ಶತಾಬ್ದಿ ರೈಲು ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 8.18ಕ್ಕೆ ತುಮಕೂರು ತಲುಪಲಿದೆ. ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ರೈಲು ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ, ಬೆಳಗ್ಗೆ 7.05ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 10.20ಕ್ಕೆ ತುಮಕೂರು ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಮೈಸೂರು – ಶಿವಮೊಗ್ಗ – ತಾಳಗುಪ್ಪ ಮಧ್ಯೆ ಎಷ್ಟು ರೈಲುಗಳು ಸಂಚರಿಸುತ್ತಿವೆ? ಟೈಮಿಂಗ್ ಏನು?
ಶಿವಮೊಗ್ಗ – ತುಮಕೂರು ಡೆಮು ರೈಲು ಮಧ್ಯಾಹ್ನ 1.30ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಸಂಜೆ 5.30ಕ್ಕೆ ತುಮಕೂರು ತಲುಪಲಿದೆ. ಇನ್ನು, ಶಿವಮೊಗ್ಗ – ಯಶವಂತಪುರ ರೈಲು ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಸಂಜೆ 6.30ಕ್ಕೆ ತುಮಕೂರು ತಲುಪಲಿದೆ.
ತಾಳಗುಪ್ಪ – ಶಿವಮೊಗ್ಗ – ಮೈಸೂರು ಎಕ್ಸ್ ಪ್ರೆಸ್ ರೈಲು ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ರಾತ್ರಿ 11.06ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ರಾತ್ರಿ 3.28ಕ್ಕೆ ತುಮಕೂರು ತಲುಪಲಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಶಿವಮೊಗ್ಗ ಯಶವಂತಪುರ ಎಕ್ಸ್ ಪ್ರೆಸ್ ರೈಲು ಕೂಡ ತುಮಕೂರಿಗೆ ತೆರಳಲಿದೆ. ರಾತ್ರಿ 11.55ಕ್ಕೆ ಶಿವಮೊಗ್ಗದಿಂದ ಹೊರಡುವ ಈ ರೈಲು ರಾತ್ರಿ 3.38ಕ್ಕೆ ತುಮಕೂರು ತಲುಪಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಮಾತ್ರ ಸಂಚರಿಸಲಿದೆ.
ಮೈಸೂರು ಜಿಲ್ಲೆಗೆ ರೈಲು
ತಾಳಗುಪ್ಪ – ಶಿವಮೊಗ್ಗ – ಮೈಸೂರು (ಕುವೆಂಪು ಎಕ್ಸ್ ಪ್ರೆಸ್ ರೈಲು) ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಬೆ.8.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ತುಲುಪಲಿದೆ.
ತಾಳಗುಪ್ಪ – ಶಿವಮೊಗ್ಗ – ಮೈಸೂರು ಇಂಟರ್ ಸಿಟಿ ರೈಲು ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ಶಿವಮೊಗ್ಗದಿಂದ ಸಂಜೆ 4.50ಕ್ಕೆ ಹೊರಡಲಿದೆ. ರಾತ್ರಿ 10.15ಕ್ಕೆ ಮೈಸೂರು ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಯಾವೆಲ್ಲ ಸಮಯದಲ್ಲಿ ಸಂಚರಿಸುತ್ತವೆ?
ಶಿವಮೊಗ್ಗ – ಮೈಸೂರು ರೈಲು ಬೆಳಗ್ಗೆ 11.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಸಂಜೆ 4.50ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ.
ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲು ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಬೆಂಗಳೂರು ಮೂಲಕ ಈ ರೈಲು ಹಾದು ಹೋಗಲಿದೆ.
ಚಿತ್ರದುರ್ಗ, ಬಳ್ಳಾರಿಗೆ ರೈಲು
ಶಿವಮೊಗ್ಗದಿಂದ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗು ನೇರವಾಗಿ ರೈಲು ಸಂಪರ್ಕವಿದೆ. ಶಿವಮೊಗ್ಗ -ರೇಣಿಗುಂಟ – ಚೆನ್ನೈ ವಿಶೇಷ ರೈಲು ಮೂಲಕ ಇವೆರಡು ಜಿಲ್ಲೆಗಳಿಗೆ ತೆರಳಬಹುದಾಗಿದೆ. ರಾತ್ರಿ 7 ಗಂಟೆಗೆ ಶಿವಮೊಗ್ಗದಿಂದ ರೈಲು ಹೊರಡಲಿದೆ. ರಾತ್ರಿ 10.18ಕ್ಕೆ ಚಿತ್ರದುರ್ಗ ನಿಲ್ದಾಣ ತಲುಪಲಿದೆ. ರಾತ್ರಿ 1.55ಕ್ಕೆ ಬಳ್ಳಾರಿ ಜಂಕ್ಷನ್ ತಲುಪಲಿದೆ. ಭಾನುವಾರ ಮತ್ತು ಮಂಗಳವಾರ ಮಾತ್ರ ಈ ರೈಲು ಸಂಚರಿಸಲಿದೆ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.