ಇನ್ಮುಂದೆ ಭಾರತೀಯ ಕಂಪನಿಯಿಂದಲೇ ಐ-ಫೋನ್‌ ಉತ್ಪಾದನೆ, ಬೆಂಗಳೂರಲ್ಲೇ ಘಟಕ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 29 OCTOBER 2023

ಐ-ಫೋನ್‌ (iphone) ಉತ್ಪಾದನೆ ಮಾಡುತ್ತಿದ್ದ ವಿಸ್ಟ್ರಾನ್‌ ಕಂಪನಿಯ ಭಾರತದ ಘಟಕವನ್ನು ಟಾಟಾ ಸಮೂಹ ಖರೀದಿಸಿದೆ. ಇನ್ಮುಂದೆ ಭಾರತೀಯ ಕಂಪನಿಯೆ ಭಾರತದಲ್ಲಿ ಐ-ಫೋನ್‌ ಉತ್ಪಾದಿಸಲಿದೆ. ತೈವಾನ್‌ ದೇಶದ ವಿಸ್ಟ್ರಾನ್‌ ಇನ್ಫೋಕಾಮ್‌ ಸಂಸ್ಥೆಯು ಬೆಂಗಳೂರಿನಲ್ಲಿ ಐ-ಫೋನ್‌ ಉತ್ಪಾದನಾ ಘಟಕ ಸ್ಥಾಪಿಸಿದೆ.

ಇದನ್ನೂ ಓದಿ- ಇನ್ಮುಂದೆ ಒಂದೆ whatsappನಲ್ಲಿ ಎರಡು ಅಕೌಂಟ್‌ ಬಳಸಬಹುದು, ಹೇಗೆ? ಬರ್ತಿದೆ ಹೊಸ update

ಈಚೆಗೆ ವಿಸ್ಟ್ರಾನ್‌ ಸಂಸ್ಥೆಯು ತನ್ನ ಘಟಕವನ್ನು ಮಾರಾಟ ಮಾಡಲು ಮುಂದಾಗಿತ್ತು. ಟಾಟಾ ಸಮೂಹ ಖರೀದಿಯ ಆಸಕ್ತಿ ತೋರಿತ್ತು. ಅದರಂತೆ 1040 ಕೋಟಿ ರೂ.ಗೆ ಘಟಕವನ್ನು ಖರೀದಿಸಲಾಗಿದೆ. ‘ಟಾಟಾ ಸಮೂಹ ಇನ್ನು ಎರಡೂವರೆ ವರ್ಷದಲ್ಲಿ ಐ-ಫೋನ್‌ಗಳನ್ನು (iphone) ಉತ್ಪಾದಿಸಲಿದೆ. ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳ ಮಾರಾಟವಾಗಲಿದೆʼ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment