ಇನ್ಮುಂದೆ ವಾಟ್ಸಪ್‌ ಬಳಕೆ ಮಾಡಲು ಹಣ ಪಾವತಿಸಬೇಕು, ಏನಿದು? ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಟೆಕ್‌ ನ್ಯೂಸ್‌: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಶೀಘ್ರದಲ್ಲೇ ಹಣ ಪಾವತಿಸಿ ಬಳಸುವ ಸಬ್‌ಸ್ಕ್ರಿಪ್ಷನ್ ಮಾಡೆಲ್  ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇತ್ತೀಚಿನ ಕೆಲವು ವರದಿಗಳ ಪ್ರಕಾರ, ವಾಟ್ಸಾಪ್‌ನ ಹೊಸ ವರ್ಷನ್‌ನ ಕೋಡ್‌ಗಳಲ್ಲಿ ಸಬ್‌ಸ್ಕ್ರಿಪ್ಷನ್ ಮಾದರಿಯ ಸೂಚನೆಗಳು ಕಂಡುಬಂದಿವೆ. ಅದರಂತೆ ಬಳಕೆದಾರರು ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳದಿದ್ದರೆ, ವಾಟ್ಸಾಪ್ ಸ್ಟೇಟಸ್ ಮತ್ತು ಚಾನೆಲ್ ವಿಭಾಗಗಳಲ್ಲಿ ಪದೇ ಪದೇ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಮೆಟಾ ಕಂಪನಿಯು ಈಗಾಗಲೇ ಈ ಜಾಹೀರಾತುಗಳ ಪರೀಕ್ಷೆ ನಡೆಸಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.

JNNCE-COLLEGE-ADVT.

ಇದನ್ನೂ ಓದಿ – ಹೊಂಬುಜದಲ್ಲಿ ವಿಶೇಷ ಪೂಜೆ, ದಾಖಲೆ ಸೇರಿತು ಜಿನ ನಾಮಸ್ಮರಣೆ, ಏನಿದು?

ಜಾಹೀರಾತುಗಳ ಕಿರಿಕಿರಿ ಇಲ್ಲದೆ ವಾಟ್ಸಾಪ್ ಬಳಸಲು ಬಯಸುವವರು ಹಣ ನೀಡಿ ಸಬ್‌ಸ್ಕ್ರಿಪ್ಷನ್ ಪಡೆಯಬೇಕಾಗುತ್ತದೆ. ಸದ್ಯಕ್ಕೆ ಈ ಚಂದಾದಾರಾಗಲು ಬೆಲೆ ಎಷ್ಟು ಅಥವಾ ಈ ಫೀಚರ್‌ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಮೆಟಾ ಕಂಪನಿಯಿಂದ ಸ್ಪಷ್ಟತೆ ಲಭ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಜಾಹೀರಾತು ಸಹಿತ ಉಚಿತ ಆವೃತ್ತಿ ಮತ್ತು ಜಾಹೀರಾತು ರಹಿತ ಪಾವತಿ ಆವೃತ್ತಿ ಎಂಬ ಎರಡು ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿವೆ.

Shivamogga Live reached 2.8 million views in January-2026 - Editor : Nitin Kaidotlu

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment