ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 24 JUNE 2022 | WORK FROM HOME SCAM
ಎಷ್ಟೇ ಸಂಬಳ ಬಂದರೂ ಕಡಿಮೆ ಅನಿಸುವ ಜಮಾನ ಇದು. ಹಾಗಾಗಿಯೇ ಬಹುತೇಕರು PART TIME JOB, WORK FROM HOMEಗಳ ಹುಡುಕಾಟದಲ್ಲಿರುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡು, ಜನರನ್ನು ವಂಚಿಸುವ ಜಾಲಗಳು ಕಾರ್ಯಪ್ರವೃತ್ತವಾಗಿವೆ. ಇವರ ಬಲೆಗೆ ಬಿದ್ದವರು ಅದರಿಂದ ಹೊರ ಬರುವುದು ಅಷ್ಟು ಸುಲಭವಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
WORK FROM HOME ಜಾಲಕ್ಕೆ ಸಿಲುಕಿ ಶಿವಮೊಗ್ಗದ ಮಹಿಳೆಯೊಬ್ಬರು 1.35 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿದೆ. ಅದನ್ನು ಓದಲು ಇಲ್ಲಿರುವ ಲಿಂಕ್ ಕ್ಲಿಕ್ ಮಾಡಿ – ಮಹಿಳೆಯರೆ ಹುಷಾರ್, WORK FROM HOME ಹೆಸರಲ್ಲಿ ನಡೆಯುತ್ತಿದೆ ವಂಚನೆ, ಶಿವಮೊಗ್ಗದಲ್ಲಿ ಕೇಸ್
ಯಾರೆಲ್ಲ ಈ ಜಾಲದಲ್ಲಿ ಸಿಕ್ಕಿ ಬೀಳುತ್ತಾರೆ?
WORK FROM HOME ನೆಪದಲ್ಲಿ ವಂಚಕರ ಜಾಲ ಸಕ್ರಿಯವಾಗಿವೆ. ಇವರು ಬೀಸುವ ಬಲೆಗೆ ಬಡ, ಮಧ್ಯಮ ವರ್ಗದ ಜನರೆ ಸುಲಭವಾಗಿ ಟಾರ್ಗೆಟ್ ಆಗುತ್ತಾರೆ. ಯಾರೆಲ್ಲ ಈ ಬಲೆಗೆ ಬೀಳುತ್ತಾರೆ ಅಂದರೆ.
ಬಲೆಗೆ ಬೀಳುವವರು 1 – ಈಗಿರುವ ಕೆಲಸದಲ್ಲಿ ಕೈಗೆ ಬರುವ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ತಿಂಗಳ ಕೊನೆಗೆ ಬೇರೊಬ್ಬರ ಬಳಿ ಸಾಲಕ್ಕೆ ಕೈವೊಡ್ಡಬೇಕಾಗಿರುತ್ತದೆ.
ಬಲೆಗೆ ಬೀಳುವವರು 2 – ಮನೆ ಕೆಲಸಗಳೆಲ್ಲ ಬೇಗ ಮುಗಿಯುತ್ತದೆ. ಉಳಿದ ಸಮಯದಲ್ಲಿ ಟಿವಿ ನೋಡುವುದು, ಕಾಲ ಹರಣ ಮಾಡುವುದೇಕೆ? ಮನೆಯಿಂದಲೆ ಕೆಲಸ ಮಾಡುವ ಅವಕಾಶ ಸಿಕ್ಕರೆ, ಖರ್ಚಿಗೆ ಕಾಸಾಗುತ್ತದೆ ಎಂದು ಯೋಚಿಸುವ ಗೃಹಿಣಿಯರು.
ಬಲೆಗೆ ಬೀಳುವವರು 3 – ಪದವಿ ಮುಗಿಸಿ ಕಾಲೇಜಿನಿಂದ ಹೊರ ಬಂದ ಬಳಿಕ ಉದ್ಯೋಗ ಸಿಕ್ಕಿರುವುದಿಲ್ಲ. ಅಥವಾ, ಕರೋನ ಸಂಕಷ್ಟದಿಂದ ಕೆಲಸ ಕಳೆದುಕೊಂಡು, ಬೇರೆ ಕೆಲಸ ಸಿಗದೆ ಪರದಾಡುತ್ತಿರುವವರು. ಇಂತಹವರೆ ಸುಲಭವಾಗಿ WORK FROM HOME ವಂಚಕರ ಜಾಲಕ್ಕೆ ಬೀಳುತ್ತಾರೆ.
ಹೇಗೆ ಬಲೆ ಬೀಸುತ್ತಾರೆ ವಂಚಕರು?
ಬಣ್ಣ ಬಣ್ಣದ ಆಸೆ ಹುಟ್ಟಿಸಿ ಉದ್ಯೋಗ, ಹಣದ ನಿರೀಕ್ಷೆಯಲ್ಲಿರುವವರನ್ನು ಬಲೆಗೆ ಕೆಡವಿಕೊಳ್ಳುತ್ತಾರೆ.
GOOGLE – ಈಗಂತೂ ಇಂಟರ್ ನೆಟ್ ಯುಗ. ಸಣ್ಣಪುಟ್ಟದ್ದಕ್ಕು ಗೂಗಲ್’ನಲ್ಲಿಯೆ ಹುಡುಕಾಟ ನಡೆಯುತ್ತದೆ. WORK FROM HOME ವಿಚಾರದಲ್ಲೂ ಅಷ್ಟೆ. ಬಹುತೇಕರು GOOGLEನಲ್ಲಿ ಸರ್ಚ್ ಮಾಡುತ್ತಾರೆ. ಹೆಚ್ಚು ಸಂಬಳ, ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ಲಿಂಕ್ ಕ್ಲಿಕ್ ಮಾಡುವಂತೆ ವಂಚಕರು ನೋಡಿಕೊಳ್ಳುತ್ತಾರೆ.
MESSAGE – ಎಸ್.ಎಂ.ಎಸ್, ವಾಟ್ಸಪ್ ಮೆಸೇಜುಗಳ ಮೂಲಕವು ವಂಚಕರು ಗಾಳ ಹಾಕುತ್ತಾರೆ. ‘ಮನೆಯಿಂದಲೆ ಕೆಲಸ ಮಾಡಿ, ದಿನಕ್ಕೆ ಸಾವಿರ ಸಾವಿರ ಸಂಪಾದಿಸಿ’, ‘FREE TIMEಲ್ಲಿ ಮನೆಯಿಂದಲೆ ಕೆಲಸ ಮಾಡಿ, ಶ್ರೀಮಂತರಾಗಿ’ ಎಂದು ಆಮಿಷ ಒಡ್ಡುತ್ತಾರೆ.
ಪೋಸ್ಟರ್’ಗಳು / ಜಾಹೀರಾತುಗಳು – ಬಸ್ ನಿಲ್ದಾಣಗಳು, ವಿದ್ಯುತ್ ಕಂಬಗಳು, ಗೂಡಂಗಡಿಗಳ ಮುಂದೆ, ಹೀಗೆ ಎಲ್ಲೆಂದರಲ್ಲಿ ಪೋಸ್ಟರ್’ಗಳನ್ನು ಅಂಟಿಸುತ್ತಾರೆ. ಪತ್ರಿಕೆಗಳಲ್ಲಿಯು ಜಾಹೀರಾತು ಪ್ರಕಟಿಸುತ್ತಾರೆ. ಸಂಪರ್ಕ ಸಂಖ್ಯೆಯನ್ನು ಕೂಡ ಹಾಕಿರುತ್ತಾರೆ. ಫೋನ್ ಮಾಡಿದವರನ್ನು ಸುಲಭವಾಗಿ ಬಲೆಗೆ ಬೀಳಿಸುತ್ತಾರೆ.
ಹೇಗೆ ವಂಚನೆ ಮಾಡುತ್ತಾರೆ?
ಆಮಿಷ : ಬಹುತೇಕ ಸಂದರ್ಭದಲ್ಲಿ, ‘ಕಡಿಮೆ ಅವಧಿಯ ಕೆಲಸ, ಹೆಚ್ಚು ಸಂಬಳ’ ಎಂದು ಆಮಿಷ ಒಡ್ಡುತ್ತಾರೆ. ಒಂದೇ ದಿನದಲ್ಲಿ ಸಾವಿರ ಸಾವಿರ ಗಳಿಸಬಹುದು, ಪ್ರತಿ ತಿಂಗಳು ಲಕ್ಷ ಲಕ್ಷ ಸಂಪಾದಿಸಬಹುದು ಎಂದು ಆಮಿಷ ಒಡ್ಡುತ್ತಾರೆ.
ಮಾಹಿತಿ ಸಂಗ್ರಹ : WORK FROM HOME ಅವಕಾಶ ಬೇಕಿದ್ದರೆ ಸಂಪೂರ್ಣ ವಿವರ ಒದಗಿಸುವುದು ಕಡ್ಡಾಯಗೊಳಿಸುತ್ತಾರೆ. ಹೆಸರು, ವಿಳಾಸ, ಪ್ಯಾನ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ, ಕೆಲವು ಸಂದರ್ಭ ಎಟಿಎಂ ಕಾರ್ಡ್ ನಂಬರ್’ಗಳನ್ನು ಪಡೆದುಕೊಳ್ಳುತ್ತಾರೆ.
ಹಣ ಕಟ್ಟಬೇಕು : WORK FROM HOMEಗೆ ಅಗತ್ಯವಿರುವ ಕಿಟ್ ಕೊಡುತ್ತೇವೆ ಅಥವಾ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾರೆ. ಇದಕ್ಕಾಗಿ ಸಣ್ಣ ಮೊತ್ತ ಪಾವತಿ ಮಾಡಬೇಕು ಎಂದು ಸೂಚಿಸುತ್ತಾರೆ. ಕೆಲವೊಮ್ಮೆ ಸಣ್ಣ ಮೊತ್ತದ ಹಣ ಪಡೆದು ವಂಚಿಸುತ್ತಾರೆ. ಹಲವು ಭಾರಿ ದೊಡ್ಡ ಮೊತ್ತದ ಹಣವನ್ನು ನಮ್ಮದೆ ಬ್ಯಾಂಕ್ ಖಾತೆಯಿಂದ ಬಾಚಿಕೊಳ್ಳುತ್ತಾರೆ.
ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
WORK FROM HOME ವಂಚಕರ ಬಲೆಗೆ ಬೀಳುವುದರಿಂದ ತಪ್ಪಿಸಿಕೊಳ್ಳುವುದು ಸುಲಭ.
ಪಾಯಿಂಟ್ 1 – ವಿದ್ಯಾರ್ಹತೆ ಅಥವಾ ನಮ್ಮ ಅರ್ಹತೆ ಮೀರಿದ ಕೆಲಸ ಮತ್ತು ಸಂಬಳ ಆಫರ್ ನೀಡಿದಾಗ ಎಚ್ಚರದಿಂದ ಇರಬೇಕು.
ಪಾಯಿಂಟ್ 2 – ಉದ್ಯೋಗದ ಆಮಿಷ ಒಡ್ಡುವ ಕಂಪನಿಯ ಮಾಹಿತಿ ಇಲ್ಲದಿರುವುದು. ಕಂಪನಿಯ ಮುಖ್ಯಸ್ಥರು ಸೇರಿದಂತೆ ಪ್ರಮುಖ ಮಾಹಿತಿಗಳೆ ಇಲ್ಲದಿರುವುದು. ಅಲ್ಲದೆ ಕಂಪನಿಯನ್ನು ಸಂಪರ್ಕಿಸುವ ಯಾವುದೆ ವಿವರ ಇಲ್ಲದಿರುವುದು.
ಪಾಯಿಂಟ್ 3 – ತಕ್ಷಣ ಕೆಲಸ ಆರಂಭಿಸಿ ಎಂದು ಒತ್ತಾಯಿಸುವುದು, ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ ಹಣ ಪಾವತಿಸಬೇಕು ಎಂದು ತಿಳಿಸಿದಾಗ ಎಚ್ಚೆತ್ತುಕೊಳ್ಳಬೇಕು.
WORK FROM HOME ಹೆಸರಿನಲ್ಲಿ ಇಂಟರ್ ನೆಟ್’ಲ್ಲಿ ಹಲವು ರೀತಿ ವಂಚನೆಗಳಾಗುತ್ತಿವೆ. ವಂಚನೆಗೊಳಗಾದ ಕೆಲವೇ ಕೆಲವು ಮಂದಿ ಮಾತ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗುತ್ತಿದ್ದಾರೆ. ಬಹುತೇಕರು ಮರ್ಯಾದೆ ಪ್ರಶ್ನೆ ಎಂದು ಹಿಂದೇಟು ಹಾಕುತ್ತಿದ್ದಾರೆ. ಇದು ವಂಚಕರಿಗೆ ಮತ್ತಷ್ಟು ಇಂಬು ನೀಡುತ್ತಿದೆ.