ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019

ಶಿವಮೊಗ್ಗ ದಸರಾದ ಜಂಬೂ ಸವಾರಿಯಲ್ಲಿ ಇದೆ ಮೊದಲ ಬಾರಿಗೆ ವಿವಿಧ ಇಲಾಖೆಗಳ ಸ್ಥಬ್ಧ ಚಿತ್ರಗಳು ಭಾಗವಹಿಸಿದ್ದವು. ಆಯಾ ಇಲಾಖೆ ಸಿಬ್ಬಂದಿಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು, ಜನರಲ್ಲಿ ಜಾಗೃತಿ ಮೂಡಿಸಿದರು.
ಸೈಬರ್ ಕ್ರೈಂ ಕುರಿತು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಬ್ಧಚಿತ್ರ ರೂಪಿಸಿ ಜಾಗೃತಿ ಮೂಡಿಸಿದರು. ಸ್ಥಬ್ಧಚಿತ್ರದ ಜೊತೆಗೆ ಜಂಬೂ ಸವಾರಿ ವೀಕ್ಷಣೆಗೆ ಬಂದಿದ್ದ ಜನರಿಗೆ ಕರಪತ್ರಗಳನ್ನು ನೀಡಿ, ಸಿಇಎನ್ ಪೊಲೀಸರು ಜಾಗೃತಿ ಮೂಡಿಸಿದರು.

ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣೆ ಜಾಗೃತಿ, ಆರೋಗ್ಯ ಇಲಾಖೆಯ ಸ್ಥಬ್ಧಚಿತ್ರ, ರಕ್ತದಾನದ ಮಹತ್ವ ಸಾರಲು ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ವತಿಯಿಂದ ಜಾಗೃತಿ ಮೂಡಿಸಲಾಯಿತು. ಇನ್ನು ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]