ರಸ್ತೆ ಪಕ್ಕ ನಿಂತಿದ್ದ ಬೈಕಿಗೆ ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ, ಯುವತಿ ಕಾಲಿಗೆ ಗಂಭೀರ ಗಾಯ

Hunasekatte-Junction-Bhadravathi-Umblebyle

BHADRAVATHI | ಪೆಟ್ರೋಲ್ (PETROL) ಖಾಲಿ ಆಗಿದ್ದರಿಂದ ರಸ್ತೆ ಪಕ್ಕ ಬೈಕ್ ನಿಲ್ಲಿಸಿಕೊಂಡು ಪರಿಶೀಲಿಸುತ್ತಿದ್ದಾಗ, ಹಿಂಬದಿಯಿಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯುವತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಭದ್ರಾವತಿ ತಾಲೂಕು ಜಂಕ್ಷನ್ ಸಮೀಪ ಘಟನೆ ಸಂಭವಿಸಿದೆ. ಗೋಣಿಬೀಡು ಗ್ರಾಮದ ಅರುಂಧತಿ ಅವರು ಗಾಯಗೊಂಡಿದ್ದಾರೆ. ಹೇಗಾಯ್ತು ಘಟನೆ? (PETROL) ಅರುಂಧತಿ ಅವರು ತಮ್ಮ ಸಂಬಂಧಿ ಅಭಿಷೇಕ್ ಎಂಬುವವರೊಂದಿಗೆ ಶಿವಮೊಗ್ಗದಿಂದ ತಮ್ಮೂರಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಜಂಕ್ಷನ್ ಸಮೀಪ ಬೈಕ್ ಪೆಟ್ರೋಲ್ (PETROL) ಖಾಲಿಯಾಗಿತ್ತು. ಹಾಗಾಗಿ ಬೈಕನ್ನು ರಸ್ತೆ ಪಕ್ಕಕ್ಕೆ … Read more

ಪೊಲೀಸರನ್ನು ಕಂಡು ತೊದಲುತ್ತ ಮಾತನಾಡಿದ ಇಬ್ಬರಿಗೆ ವೈದ್ಯಕೀಯ ಪರೀಕ್ಷೆ, ಬಳಿಕ ಅರೆಸ್ಟ್

Kote Police station building

SHIMOGA | ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ (medical test) ನಡೆಸಿದರು. ಗಾಂಜಾ ಸೇವನೆ ದೃಢವಾದ ಹಿನ್ನೆಲೆ ಇಬ್ಬರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ. ವಿದ್ಯಾನಗರದ ಮತ್ತೂರು ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಮಂಜುನಾಥ್ (30) ಮತ್ತು ಸುಮಂತ (27) ಬಂಧಿತರು. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಂಜುನಾಥ್ ಮತ್ತು ಸುಮಂತ ಏರುಧ್ವನಿಯಲ್ಲಿ ಮಾತನಾಡುತ್ತ, ಅಮಲಿನಲ್ಲಿ ತೇಲಾಡುತ್ತಿದ್ದರು. ಪೊಲೀಸರು ವಿಚಾರಿಸಿದಾಗ ತೊದಲುತ್ತ ಮಾತನಾಡಿದ್ದು, ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ್ದಾರೆ. ಇಬ್ಬರನ್ನು … Read more

‘ಮುಂದೆ ಆ ರೈತರ ಮಕ್ಕಳು ಬಂದೂಕು ಹಿಡಿದರೆ ಆರಗ ಜ್ಞಾನೇಂದ್ರ ಅವರೇ ಕಾರಣರಾಗುತ್ತಾರೆ’

KP-Sripal-Advocate-Shimoga

SHIMOGA | ನಕ್ಸಲರು (NAXAL) ಬಂದೂಕು ಹಿಡಿದು ಓಡಾಡಿದ ಜಾಗದಲ್ಲಿಯೆ ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಅವರ ಮಕ್ಕಳು ಬಂದೂಕು ಹಿಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೆ ಕಾರಣರಾಗುತ್ತಾರೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಎಚ್ಚರಿಸಿದರು. ಭೂತಾನ್ ಅಡಕೆ ಆಮದು, ಎಲೆ ಚುಕ್ಕಿ ರೋಗದ ಕುರಿತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಕೀಲ ಕೆ.ಪಿ.ಶ್ರೀಪಾಲ್ ಅವರು, ರೈತರ ಕಡಗಣನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. … Read more

ಭೂತಾನ್ ಅಡಕೆ ಭೀತಿ, ಎಲೆ ಚುಕ್ಕಿ ರೋಗದಿಂದ ಫಜೀತಿ, ಶಿವಮೊಗ್ಗದಲ್ಲಿ ಬೀದಿಗಿಳಿದ ಬೆಳೆಗಾರರು

Protest-against-Bhootan-Areca-in-Shimoga.

SHIMOGA | ಭೂತಾನ್ ದೇಶದಿಂದ (BHUTAN ADIKE) ಅಡಕೆ ಆಮದು ರದ್ದುಗೊಳಿಸಬೇಕು. ಎಲೆ ಚುಕ್ಕಿ ಬಾಧಿತ ತೋಟದ ರೈತರಿಗೆ ಪರಿಹಾರ ನೀಡಬೇಕು. ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ, ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. (BHUTAN ADIKE) ಅಡಕೆ ಧಾರಣೆ ಕುಸಿತದ … Read more

ಗ್ರಾಮ ಪಂಚಾಯಿತಿ ಒಂದು ಸ್ಥಾನಕ್ಕೆ ಉಪ ಚುನಾವಣೆ, ಶಿವಮೊಗ್ಗ ಡಿಸಿಯಿಂದ ಅಧಿಸೂಚನೆ

sagara graphics

SAGARA | ಅರಳಗೋಡು ಗ್ರಾಮ ಪಂಚಾಯಿತಿಯ ಕರುಮನೆ ಕ್ಷೇತ್ರದ ಉಪ ಚುನಾವಣೆಗೆ (BY ELECTION) ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅ.28ರಂದು ಮತದಾನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಕರುಮನೆ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎಸ್.ರಾಮಸ್ವಾಮಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಕರುಮನೆ ಕ್ಷೇತ್ರದ ಉಪ ಚುನಾವಣೆಗೆ (BY ELECTION) ದಿನಾಂಕ ನಿಗದಿಪಡಿಲಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | GOOD NEWS | ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಇಬ್ಬರಿಗೆ ಸ್ಥಾನ … Read more

GOOD NEWS | ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಇಬ್ಬರಿಗೆ ಸ್ಥಾನ

Two-Lecturers-on-Top-Scientists-list

SHANKARAGHATTA | ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿವಿ ಹೊರತಂದಿರುವ ವಿಶ್ವದ ಟಾಪ್ ಶೇ.2 ವಿಜ್ಞಾನಿಗಳ (TOP SCIENTISTS) ಪಟ್ಟಿಯಲ್ಲಿ ಕುವೆಂಪು ವಿವಿ ಸಹ ಪ್ರಾಧ್ಯಾಪಕರಾದ ಡಾ.ಬಿ.ಜೆ. ಗಿರೀಶ್ ಮತ್ತು ಡಾ.ಬಿ.ಇ. ಕುಮಾರಸ್ವಾಮಿ ಮತ್ತೊಮ್ಮೆ ಸ್ಥಾನ ಪಡೆದಿದ್ದಾರೆ. ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್‌ಫೋರ್ಡ್ ವಿವಿಯ ಜೆರೋಯಿನ್ ಬಾಸ್, ಕೆವಿನ್ ಬೋಯಾಕ್ ಮತ್ತು ಡಾ.ಜಾನ್ ಇವೊನ್ನಿಡಿಸ್ ಸಂಶೋಧನಾ ತಂಡ ಅ.10ರಂದು ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ (TOP SCIENTISTS) ಡೇಟಾಬೇಸ್ ಬಿಡುಗಡೆ ಮಾಡಿದೆ. ಕ್ಲಿಕ್ ಮಾಡಿ ಇದನ್ನೂ ಓದಿ |  JNN ಇಂಜಿನಿಯರಿಂಗ್ … Read more

ಶಿವಮೊಗ್ಗದಲ್ಲಿ 7 ಚಕ್ರದ ಆಟೋ, ಒಳಗೆ ಎಲ್ಲವೂ ಹೈಟೆಕ್, ಹೇಗಿದೆ? ಏನೇನೆಲ್ಲ ಇದೆ?

Seven-Wheels-Auto-in-Shimoga

SHIMOGA | ಇದು ಶಿವಮೊಗ್ಗದ ಹೈಟೆಕ್ ಆಟೋ (Hi tech Auto). ಇದಕ್ಕೆ ಏಳು ಚಕ್ರವಿದೆ. ಒಳಗೆ ಏರಿದರೆ ಐಷಾರಾಮಿ ಕಾರಿನಲ್ಲಿ ಕುಳಿತಷ್ಟೆ ಹಿತ. ಆದರೆ ಈ ವಿಶೇಷ ಆಟೋ ರಸ್ತೆಗಿಳಿಯುವುದು ಕೆಲವೆ ಕೆಲವು ಸಂದರ್ಭದಲ್ಲಿ ಮಾತ್ರ. ಇದು ಟಿಪ್ಪು ನಗರದ 7ನೇ ಅಡ್ಡರಸ್ತೆಯಲ್ಲಿ ಬಾಬಾ ಕಿಂಗ್ ಎಂದು ಕರೆಯಿಸಿಕೊಳ್ಳುವ ಸಯ್ಯದ್ ಅಶ್ರಫ್ ಎಂಬುವವರಿಗೆ ಸೇರಿದ ಆಟೋ. ಲಕ್ಷ ಲಕ್ಷ ರುಪಾಯಿ ಖರ್ಚು ಮಾಡಿ, ಈ ಆಟೋಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ನಗರದಲ್ಲಿ ನಡೆದ ಈದ್ ಮಿಲಾದ್ … Read more