ಅಡಿಕೆ ಧಾರಣೆ | 25 ಏಪ್ರಿಲ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 25 APRIL 2024 ADIKE RATE : ಶಿವಮೊಗ್ಗ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಚಿತ್ರದುರ್ಗ ಮಾರುಕಟ್ಟೆ ಅಪಿ 52600 53000 ಕೆಂಪುಗೋಟು 30600 31000 ಬೆಟ್ಟೆ 36100 36500 ರಾಶಿ 52100 52500 ಚನ್ನಗಿರಿ ಮಾರುಕಟ್ಟೆ ರಾಶಿ 45309 53769 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 36500 ವೋಲ್ಡ್ ವೆರೈಟಿ 36500 44500 ಶಿವಮೊಗ್ಗ ಮಾರುಕಟ್ಟೆ ಗೊರಬಲು 20009 40869 … Read more

ಗಾಜನೂರಿನಲ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ ಸ್ಪೋಟ, ಕಾರಣವೇನು?

Gajanur-Congress-Party-workers-angry-over-leaders.

SHIVAMOGGA LIVE NEWS | 25 APRIL 2024 GAJANURU : ಪಕ್ಷದ ಮುಖಂಡರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಗಾಜನೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಗಾಜನೂರಿನ ಗ್ರಂಥಾಲಯ ಸಮೀಪ ಗಾಜನೂರು ನಾಗರಾಜ್‌, ಶಿವಕುಮಾರ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಗಾಜನೂರು ನಾಗರಾಜ್‌, ವಿಧಾನಸಭೆ ಚುನಾವಣೆ ಸಂದರ್ಭ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ಹಂಚಿದ್ದೆವು. ಈಗಲು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಹಾಗಿದ್ದೂ, ಕಳೆದ ಒಂದು ತಿಂಗಳಿಂದ ಪಕ್ಷದ ಬ್ಲಾಕ್‌ … Read more

ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು, ಒಬ್ಬ ಸಾವು, ಕಾರು ಸಂಪೂರ್ಣ ನಜ್ಜುಗುಜ್ಜು

Car-Incident-at-Ripponpete.

SHIVAMOGGA LIVE NEWS | 25 APRIL 2024 RIPPONPETE : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪ್ರಭೀನ್‌ (45) ಎಂಬುವವರು ಸಾವನ್ನಪ್ಪಿದ್ದಾರೆ. ಅರಸಾಳು ಸಮೀಪದ 9ನೇ ಮೈಲಿ ಕಲ್ಲು ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದೆ. ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನಿಸಲಾಗಿದೆ. ಪಿಎಸ್‌ಐ ನಿಂಗರಾಜ್‌ ಕೆ.ವೈ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡ ಪರಿಶೀಲಿಸಿದರು. ಇದನ್ನೂ … Read more

SHIMOGA JOBS | ಪ್ರತಿಷ್ಠಿತ ಶೋ ರೂಂನ ಶಿವಮೊಗ್ಗ, ಶಿರಸಿ ಬ್ರ್ಯಾಂಚ್‌ನಲ್ಲಿ ಕೆಲಸ ಖಾಲಿ ಇದೆ

Shimoga-Jobs-General-Image

SHIVAMOGGA LIVE NEWS | 25 APRIL 2024 SHIMOGA JOBS : ಪ್ರತಿಷ್ಠಿತ ರಾಯಲ್‌ ಎನ್‌ಫೀಲ್ಡ್‌ ಶೋ ರೂಂ ಅಪೋಲೋ ಎಂಟರ್‌ಪ್ರೈಸಸ್‌ನ ಶಿವಮೊಗ್ಗ ಮತ್ತು ಶಿರಸಿ ಶೋ ರೂಂನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಯಾವೆಲ್ಲ ಹುದ್ದೆಗಳಿವೆ? Sales executive 1 ಹುದ್ದೆ, Accountant 1 ಹುದ್ದೆ, Technician 4 ಹುದ್ದೆ, ಶಿರಸಿ ಶೋ ರೂಂನ ಮ್ಯಾನೇಜರ್‌ 1 ಹುದ್ದೆ ಖಾಲಿ ಇದೆ. ಆಸಕ್ತರು ಮೊಬೈಲ್‌ ಸಂಖ್ಯೆ 9916239855 ಸಂಪರ್ಕಿಸಬಹುದು. ಇದನ್ನೂ ಓದಿ – ಶಿವಮೊಗ್ಗ ಲೋಕಸಭೆಗೆ … Read more

ಶಿವಮೊಗ್ಗ ಲೋಕಸಭೆಗೆ ಮತದಾನ ಶುರು, ಮನೆಯಲ್ಲೆ ಹಕ್ಕು ಚಲಾಯಿಸಿದ ಹಿರಿಯ ನಾಗರಿಕ, ವಿಶೇಷ ಚೇತನರು

vote-from-home-begins-in-Shimoga

SHIVAMOGGA LIVE NEWS | 25 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಗರದ ಮೂವರು ಮತದಾರರು ಇವತ್ತು ಪೋಸ್ಟಲ್‌ ಬ್ಯಾಲೆಟ್‌ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಮನೆಗೆ ತೆರಳಿ ಮತ ಪಡೆದ ಅಧಿಕಾರಿಗಳು ಶರಾವತಿ ನಗರದ 91 ವರ್ಷದ ಚಂದ್ರಶೇಖರಪ್ಪ, ಕೋಟೆ ರಸ್ತೆಯ 90 ವರ್ಷದ ಅನ್ನಪೂರ್ಣಮ್ಮ ಹಾಗೂ ಹೊಸಮನೆಯ ವಿಶೇಷ ಚೇತನ ಮತದಾರರ ಹನುಮಂತರಾಯಪ್ಪ ಅಂಚೆ ಮತದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ … Read more

ಹೊಟ್ಟೆನೋವು ಅಂತಾ ಸಾಗರದ ಆಸ್ಪತ್ರೆಗೆ ಬಂದ ಮಹಿಳೆಗೆ 2 ಗಂಟೆ ಶಸ್ತ್ರಚಿಕಿತ್ಸೆ, ಹೊರ ಬಂತು ಕೆ.ಜಿ.ಗಟ್ಟಲೆ ಗೆಡ್ಡೆ

Operation-Theater-AI-Image-Medical-Purpose

SHIVAMOGGA LIVE NEWS | 25 APRIL 2024 SAGARA : ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 7 ಕೆ.ಜಿ ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಹೊಸನಗರ ತಾಲೂಕು ಜಯನಗರ ನಿವಾಸಿ ಶಶಿಕಲಾ ಎಂಬುವವರಿಗೆ ಸಾಗರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರು 2 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದರು. ಶಶಿಕಲಾ ಅವರು ಕೆಲವು ಸಮಯ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವುದು ಗೊತ್ತಾಗಿದೆ. ವೈದ್ಯರಾದ ನಾಗೇಂದ್ರಪ್ಪ, ಪ್ರತಿಮಾ, ಶರ್ಮಿತಾ, ಬಿ.ಜಿ.ಸಂಗಮ್, … Read more

ಪುರಲೆಯಿಂದ ಫೋನ್‌ ಕಾಲ್‌‌, ಹೊನ್ನಾಳಿಗೆ ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್‌, ಕೂಡಲೆ ಶಿವಮೊಗ್ಗಕ್ಕೆ ದೌಡು

crime name image

SHIVAMOGGA LIVE NEWS | 25 APRIL 2024 SHIMOGA : ಮನೆಯೊಂದರ ಬಾಗಲಿನ ಬೀಗ ಒಡೆದು ನಗದು, ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಪುರಲೆಯ ಒಕ್ಕಲಿಗ ರಸ್ತೆಯ ನಿವಾಸಿ ಸುರೇಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸುರೇಶ್‌ ಅವರು ಕುಟುಂಬದೊಂದಿಗೆ ಹೊನ್ನಾಳಿಯ ಸಂಬಂಧಿ ಮನೆಗೆ ತೆರಳಿದ್ದರು. ಆಗ ಮನೆಯ ಬಾಗಿಲಿನ ಲಾಕ್‌ ಮುರಿಯಲಾಗಿದೆ. ರೂಂನಲ್ಲಿದ್ದ ಬೀರುವಿನ ಬೀಗ ಮುರಿದು 25 ಸಾವಿರ ರೂ. ನಗದು, 10 ಗ್ರಾಂ ತೂಕದ ಬಂಗಾರದ ಸರ, 5 ಗ್ರಾಂ ತೂಕದ ಒಂಗಾರದ … Read more

ಶಿವಮೊಗ್ಗದಲ್ಲಿ ಮುಂದುವರೆದ ಒಣ ಹವೆ, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-GENERAL-IMAGE.webp

SHIVAMOGGA LIVE NEWS | 25 APRIL 2024 WEATHER REPORT : ಶಿವಮೊಗ್ಗ ಜಿಲ್ಲೆಯಾದ್ಯಂತ ಒಣ ಹವೆ ಮುಂದುವರೆದಿದೆ. ಬಿಸಿಲಿನ ಝಳದಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಇವತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 25.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಬೆಳಗ್ಗೆ 9ಕ್ಕೆ 31.9 ಡಿಗ್ರಿ, ಬೆಳಗ್ಗೆ 11ಕ್ಕೆ 36.6 … Read more