ತಂತಿ ಬೇಲಿ ಕರೆಂಟ್ ಶಾಕ್, ಕಾಡಾನೆಗಳ ಸಾವು, ಗ್ರಾಮಸ್ಥರು ಏನಂತಾರೆ? ಅರಣ್ಯಾಧಿಕಾರಿಗಳ ವಾದವೇನು?

Wild-elephants-death-near-Ayanur.

SHIMOGA | ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಎರಡು ಕಾಡಾನೆಗಳು (WILD ELEPHANTS) ಸಾವನ್ನಪ್ಪಿವೆ. ಘಟನೆ ಮಾಹಿತಿ ಲಭಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಮೀನು ಮಾಲೀಕನನ್ನು ವಶಕ್ಕೆ ಪಡೆಯದು, ವಿಚಾರಣೆ ನಡೆಸಲಾಗುತ್ತಿದೆ. ಆಯನೂರು ಸಮೀಪದ ಚನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಎರಡು ಗಂಡು ಕಾಡಾನೆಗಳು ಈ ಭಾಗದಲ್ಲಿ ಜೋಳದ ಹೊಲಕ್ಕೆ ನುಗ್ಗಲು ಯತ್ನಿಸಿವೆ. ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿವೆ. ಬೆಳೆ ರಕ್ಷಣೆಗೆ ಹಾಕಿದ್ದು ಜೀವ ತೆಗೆಯಿತು wild … Read more

ಶಿವಮೊಗ್ಗ – ಚೆನ್ನೈ ಎಕ್ಸ್ ಪ್ರೆಸ್ ರೈಲು ಕುರಿತು ರೈಲ್ವೆ ಇಲಾಖೆಯಿಂದ ಮಹತ್ವದ ಪ್ರಕಟಣೆ

Train engine and boggies

SHIMOGA | ಶಿವಮೊಗ್ಗ – ಚೆನ್ನೈ ಎಕ್ಸ್ ಪ್ರೆಸ್ (EXPRESS) ರೈಲು ಸೇವೆಯನ್ನು ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಈ ರೈಲು ಸೇವೆ ನಿಗದಿಯಾಗಿತ್ತು. ಈಗ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಶಿವಮೊಗ್ಗ – ಎಂಜಿಅರ್ ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ (EXPRESS)ರೈಲು ಸೇವಾವಧಿ ಸೆ.27ಕ್ಕೆ ಅಂತ್ಯವಾಗಲಿತ್ತು. ಇದನ್ನು 2022ರ ಡಿಸೆಂಬರ್ 27ರವರೆಗೆ ವಿಸ್ತರಣೆ ಮಾಡಲಾಗಿದೆ. ಅದೆ ರೀತಿ ಎಂಜಿರ್ ಚೆನ್ನೈ ಸೆಂಟ್ರಲ್ – ಶಿವಮೊಗ್ಗ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಡಿ.28ರವರೆಗೆ ವಿಸ್ತರಿಸಲಾಗಿದೆ. … Read more

ವಿಚಕ್ಷಣ ದಳ ಕಂಡು ಅಡ್ಡದಾರಿಯಲ್ಲಿ ಪರಾರಿಯಾದ ಪಿಕಪ್ ವಾಹನ, ಬೆನ್ನಟ್ಟಿದ ಸಿಬ್ಬಂದಿ

Anandapura Sagara Graphics

SAGARA| ವಾಹನ ತಪಾಸಣೆ (CHECKING) ವೇಳೆ ಅರಣ್ಯ ವಿಚಕ್ಷಣ ದಳದ ಅಧಿಕಾರಿಗಳನ್ನು ಕಂಡು ಅಡ್ಡದಾರಿಯಲ್ಲಿ ಸಾಗಿದ ಬೊಲೆರೋ ಪಿಕಪ್ ವಾಹನವನ್ನು ಬೆನ್ನಟ್ಟಿ, ಗೋವುಗಳ ರಕ್ಷಣೆ ಮಾಡಲಾಗಿದೆ. ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಆನಂದಪುರ ಸಮೀಪದ ಅಂದಾಸುರ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಅರಣ್ಯ ವಿಚಕ್ಷಣ ದಳದ ಅಧಿಕಾರಿಗಳು ಶನಿವಾರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ವಾಹನಗಳ ತಪಾಸಣೆ (CHECKING) ನಡೆಸುತ್ತಿದ್ದರು. ಈ ವೇಳೆ ಬಂದ ಬೊಲೆರೋ ಪಿಕಪ್ ವಾಹನ, ದಿಢೀರನೆ ಪಕ್ಕದ ಮಣ್ಣು ರಸ್ತೆಗೆ … Read more

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರಿಗಾಗಿ ಸ್ಮಾರ್ಟ್ ಕ್ಯಾಂಟೀನ್, 500 ವಸ್ತುಗಳಿಗೆ ಶೇ.20 ರಿಂದ 50ರಷ್ಟು ರಿಯಾಯಿತಿ

CS-Shadakshari-Government-Employees-Association.

SHIMOGA| ಸರ್ಕಾರಿ ನೌಕರರಿಗಾಗಿ ಜಿಲ್ಲೆಯಲ್ಲಿ ಸ್ಮಾರ್ಟ್ ಕ್ಯಾಂಟೀನ್ (SMART CANTEEN) ಆರಂಭಿಸಲಾಗುತ್ತಿದೆ. ಇಲ್ಲಿ ಶೇ.20ರಿಂದ 50ರ ರಿಯಾಯಿತಿಯಲ್ಲಿ 500ಕ್ಕೂ ಹೆಚ್ಚು ದಿನ ಬಳಕೆ ವಸ್ತುಗಳು ದೊರೆಯಲಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಷ್.ಷಡಾಕ್ಷರಿ ತಿಳಿಸಿದರು. ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಚೇರಿ ಹಿಂಭಾಗದಲ್ಲಿ ಸ್ಮಾರ್ಟ್ ಕ್ಯಾಂಟೀನ್ (SMART CANTEEN) ಆರಂಭಿಸಲಾಗುತ್ತದೆ. ಇನ್ನು ನಮ್ಮ … Read more

ಆನಂದಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು

Anandapura Sagara Graphics

SAGARA| ಆನಂದಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅವಿರೋಧವಾಗಿ (unanimous) ಆಯ್ಕೆ ಮಾಡಲಾಗಿದೆ. ನೇತ್ರಾವತಿ ಮಂಜುನಾಥ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರ ಯಾದವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೂರ್ವ ಒಪ್ಪಂದದಂತೆ ನವೀನ ರವೀಂದ್ರ ಅವರು ಅಧ್ಯಕ್ಷ ಸ್ಥಾನಕ್ಕೆ, ಮಹೋನ್ ಕುಮಾರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ (unanimous) ಆಯ್ಕೆ ಮಾಡಲಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ … Read more

ಭದ್ರಾವತಿ | ಸ್ಮಶಾನದಲ್ಲಿ ಜೂಜಾಟ, ಹಲವರ ವಿರುದ್ಧ ಕೇಸ್

Bhadravathi Name Graphics

BHADRAVATHI | ಸ್ಮಶಾನದಲ್ಲಿ ಹಣ ಕಟ್ಟಿ ಇಸ್ಪೀಟ್ ಜೂಜಾಟ (GAMBLING) ಆಡುತ್ತಿದ್ದವರ ವಿರದ್ಧ ಪ್ರಕರಣ ದಾಖಲಾಗಿದೆ. ಭದ್ರಾವತಿ ತಾಲೂಕು ರಂಗನಾಥಪುರ ಗ್ರಾದಮಲ್ಲಿ ಘಟನೆ ಸಂಭವಿಸಿದೆ. ಖಚಿತ ಮಾಹಿತಿ ಮೇರೆ ಪೊಲೀಸರು ಪರಿಶೀಲನೆ ನಡೆಸಿದಾಗ ರಂಗನಾಥಪುರ ಗ್ರಾಮದ ಸ್ಮಶಾನದಲ್ಲಿ ಇಸ್ಪೀಟ್ ಜೂಜಾಟ (GAMBLING) ಆಡುತ್ತಿರುವುದು ಗೊತ್ತಾಗಿದೆ. ಐದರಿಂದ ಆರು ಮಂದಿ ಗುಂಪುಗೂಡಿ ಜೂಜಾಟದಲ್ಲಿ ತೊಡಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಅತಿ … Read more

ಆನವಟ್ಟಿ – ಶಿರಾಳಕೊಪ್ಪ ರಸ್ತೆಯಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಟಾಟಾ ಏಸ್

soraba anavatti graphics

SORABA | ಶಾಲೆಗೆ ನಡೆದು ಹೋಗುತ್ತಿದ್ದ  ಬಾಲಕನಿಗೆ ಟಾಟಾ ಏಸ್ (TATA ACE) ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಗಾಯಗೊಂಡಿದ್ದಾನೆ. ಆತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರೀತಮ್ (7) ಗಾಯಾಳು. ಆನವಟ್ಟಿ – ಶಿರಾಳಕೊಪ್ಪ ಮುಖ್ಯ ರಸ್ತೆಯ ಹುಣಸವಳ್ಳಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಅತಿ ವೇಗದಿಂದ ಅವಘಡ, ವಿದ್ಯಾನಗರದಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಮಹಿಳೆ ಹುಣಸವಳ್ಳಿ ಗ್ರಾಮದ ಶಾಲೆಗೆ ಪ್ರೀತಮ್ ನಡೆದು ಹೋಗುತ್ತಿದ್ದಾಗ ಟಾಟಾ … Read more

ಅತಿ ವೇಗದಿಂದ ಅವಘಡ, ವಿದ್ಯಾನಗರದಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಮಹಿಳೆ

Vidyanagara-Smart-city-board

SHIMOGA | ರಸ್ತೆ ದಾಟುತ್ತಿದ್ದ ಮಹಿಳೆಗೆ (WOMAN) ಬೈಕ್ ಡಿಕ್ಕಿಯಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಘಟನೆಗೆ ಕಾರಣ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆ ಸಂಭವಿಸಿದೆ. ಲಲಿತಮ್ಮ (46) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? WOMAN ವಿದ್ಯಾನಗರ ನಿವಾಸಿ ಆಗಿರುವ ಲಲಿತಮ್ಮ (WOMAN) ಅವರು ಶಿವಮೊಗ್ಗ – ಭದ್ರಾವತಿ ಮುಖ್ಯ ರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ಹೊಳೆ ಬಸ್ ನಿಲ್ದಾಣದ ಕಡೆಯಿಂದ … Read more

ಶಿವಮೊಗ್ಗದ ಸ್ಪ್ಲೆಂಡರ್ ಬೈಕ್ ಮಾಲೀಕರೆ ಎಚ್ಚರ, ನಿಮ್ಮ ವಾಹನ ಎಲ್ಲೆಂದರಲ್ಲಿ ನಿಲ್ಲಿಸಬೇಡಿ

bike theft reference image

SHIMOGA | ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಹೊಟೇಲ್ ಒಂದರ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ (missing). ರಂಗನಾಥಪ್ಪ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಬಿ.ಹೆಚ್.ರಸ್ತೆಯಲ್ಲಿರುವ ಸಂತೃಪ್ತಿ ಹೊಟೇಲ್ ಮುಂಭಾಗ ತಮ್ಮ ಬೈಕ್ ನಿಲ್ಲಿಸಿದ್ದರು. ಭದ್ರಾವತಿಯಲ್ಲಿ ಕೆಲಸವಿದ್ದರಿಂದ ಅಲ್ಲಿಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ (missing). ಎಲ್ಲೆಡೆ ಹುಡುಕಾಡಿದ ರಂಗನಾಥಪ್ಪ ಅವರು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಈಚೆಗೆ ಸ್ಪ್ಲೆಂಡರ್ ಬೈಕುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ವಿವಿಧೆಡೆ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಅಧಿಕಾರಿಗಳ ತಂಡ, ಉದ್ಘಾಟನೆಗೆ ಬರ್ತಾರೆ ಪ್ರಧಾನಿ

Shimoga-Airport-Work-Construction

SHIMOGA| ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್ ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳು ನವೆಂಬರ್ ತಿಂಗಳ ಕೊನೆಯ ವೇಳೆಗೆ ಪೂರ್ಣಗೊಂಡು ವಿಮಾನ (FLIGHT) ನಿಲ್ದಾಣ ಲೋಕಾರ್ಪಣೆಗೆ ಸರ್ವ ಸನ್ನದ್ಧಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು. ಅವರು ಇಂದು ಸೋಗಾನೆ ವಿಮಾನ (FLIGHT) ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಉಷಾ … Read more