ಅಡಿಕೆ ಧಾರಣೆ | 7 ಜುಲೈ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 18001 29299 ಬೆಟ್ಟೆ 53099 60609 ರಾಶಿ 46858 56899 ಸರಕು 55000 97796 ಸಾಗರ ಮಾರುಕಟ್ಟೆ ಕೆಂಪುಗೋಟು 14699 27500 ಕೋಕ 9100 22599 ಚಾಲಿ 18699 36699 ಬಿಳೆ ಗೋಟು 13099 25599 ರಾಶಿ 23099 56370 ಸಿಪ್ಪೆಗೋಟು 6099 18899 ಇದನ್ನೂ ಓದಿ » ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್‌ ಟೆಸ್ಟ್‌ … Read more

ಸಿಗಂದೂರು ಸೇತುವೆ, ‘ನಮ್ಮ ಭೇಟಿಯ ಬಳಿಕವೇ ಉದ್ಘಾಟನೆ ದಿನಾಂಕ ನಿಗದಿʼ

Beluru-Gopalakrishna-in-a-press-meet

ಸಾಗರ: ಬಹುನಿರೀಕ್ಷಿತ ಅಂಬಾರಗೋಡ್ಲು-ಕಳಸವಳ್ಳಿಯ ಸಿಗಂದೂರು ಸೇತುವೆಯನ್ನು (Bridge) ಜುಲೈ 14 ರಂದು ಉದ್ಘಾಟಿಸಲು ದಿನಾಂಕ ನಿಗದಿಪಡಿಸಿರುವುದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಐದು ದಶಕಗಳ ಕಾಲದ ಶರಾವತಿ ಹಿನ್ನೀರು ಸಂತ್ರಸ್ತರ ಕನಸಿಗೆ ನಿಜವಾದ ಸಮಯ. ಸೇತುವೆ ನಿರ್ಮಾಣಕ್ಕಾಗಿ ನಡೆದ ದೀರ್ಘಕಾಲದ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಸೇತುವೆ ಕಾಮಗಾರಿ ವೀಕ್ಷಿಸಲು ಸ್ಥಳಕ್ಕೆ ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೇತುವೆ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಹೇಳಿಕೆ … Read more

ಕೊಡಚಾದ್ರಿ ಇ.ಡಿ.ಸಿ ಸಮಿತಿ ಸದಸ್ಯ ಸುಬ್ರಹ್ಮಣ್ಯ, ಪತ್ನಿ ಮೇಲೆ ಹಲ್ಲೆ, ಕಲ್ಲು ತೂರಾಟ

HOSANAGARA-NEWS-GENERAL

ಹೊಸನಗರ: ತಾಲ್ಲೂಕಿನ ಕಟ್ಟಿನಹೊಳೆ ನಿವಾಸಿ ಹಾಗೂ ಕೊಡಚಾದ್ರಿ (Kodachadri) ಇ.ಡಿ.ಸಿ ಸಮಿತಿ ಅಧ್ಯಕ್ಷ ಕೆ.ಟಿ.ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಮೀನಾಕ್ಷಿ ಅವರ ಮೇಲೆ ಶನಿವಾರ ರಾತ್ರಿ ಹಲ್ಲೆ ಹಾಗೂ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಸುಬ್ರಹ್ಮಣ್ಯ ಅವರ ತಲೆಗೆ ಗಾಯವಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುಬ್ರಹ್ಮಣ್ಯ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಸಂಬಂಧಿಗಳಿಬ್ಬರು ಅತಿಕ್ರಮವಾಗಿ ಮನೆ ಪ್ರವೇಶಿಸಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆಯೇ ಇಬ್ಬರೂ ತಮ್ಮ … Read more

ಆಯನೂರಿನಲ್ಲಿ ಇಂದು ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಜನಸ್ಪಂದನಾ ಕಾರ್ಯಕ್ರಮ

Ayanur Graphics

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದ ಶಾಸಕಿ (MLA) ಶಾರದಾ ಪೂರ್ಯಾನಾಯ್ಕ ಅವರು ತಾಲ್ಲೂಕಿನ ಕುಂಸಿ, ಆಯನೂರು ಮತ್ತು ಹಾರನಹಳ್ಳಿ ಹೋಬಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜುಲೈ 7ರಂದು ಆಯನೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಜನಸ್ಪಂದನ ಸಭೆ ನಡೆಸಲಿದ್ದಾರೆ. ಈ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ವಿ.ಎಸ್.ರಾಜೀವ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

Bhadra-Dam-General-Image.

ಭದ್ರಾವತಿ: ಮಳೆ ಮುಂದುವರೆದಿದ್ದು ಭದ್ರಾ ಜಲಾಶಯದ (Dam Level) ಒಳ ಹರಿವು ತುಸು ಏರಿಕೆಯಾಗಿದೆ. ಇವತ್ತು ಜಲಾಶಯಕ್ಕೆ 20,626 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಭದ್ರಾ ಜಲಾಶಯದ ನೀರಿನ ಮಟ್ಟ 170.9 ಅಡಿಗೆ ತಲುಪಿದೆ. ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇವತ್ತು ಜಲಾಶಯದಿಂದ 5198 ಕ್ಯೂಸೆಕ್‌ ಹೊರ ಹರಿವು ಇದೆ. ಇದನ್ನೂ ಓದಿ » ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮಿನಿ ಬಸ್‌ ಪಲ್ಟಿ

ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮಿನಿ ಬಸ್‌ ಪಲ್ಟಿ

Amir-Ahmed-mini bus-incident.

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್‌ (Mini Bus) ಪಲ್ಟಿಯಾಗಿದೆ. ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಎ.ಎ. ಸರ್ಕಲ್‌ ಬಳಿ ಬಸ್‌ ಬರುವಾಗ ಆಟೋವೊಂದು ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್‌ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರಾರೂ ಇರಲಿಲ್ಲ. ಚಾಲಕ ಒಬ್ಬರೆ ಇದ್ದರು. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ … Read more