ಶಿವಮೊಗ್ಗದಲ್ಲಿ ವರುಣನ ಅಬ್ಬರ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ಮಳೆ?

080822 Night Rain in Shimoga1

ಶಿವಮೊಗ್ಗ | ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಭಾರಿ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಆ.8ರಂದು ನಿರಂತರ ಮಳೆಯಾಗಿದೆ. ಕೆಲವು ಕಡೆ ಕ್ಷಣ ಹೊತ್ತೂ ಬಿಡುವು ನೀಡದೆ ವರುಣ ಅಬ್ಬರಿಸಿದ್ದಾನೆ. ಕಳೆದ 24 ಗಂಟೆ ಅವಧಿಯಲ್ಲಿ 71 ಮಿ.ಮೀ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ತಾಲೂಕಿನಲ್ಲಿ 118.8 ಮಿ.ಮೀ ಮಳೆ ಸುರಿದಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 98.2 ಮಿ.ಮೀ, ಸಾಗರದಲ್ಲಿ 80.5 ಮಿ.ಮೀ ಮಳೆಯಾಗಿದೆ. ಇನ್ನು, ಭದ್ರಾವತಿಯಲ್ಲಿ 41.8 … Read more

ಗಾಜನೂರು ತುಂಗಾ ಡ್ಯಾಂಗೆ ಇವತ್ತು ಎಷ್ಟಿದೆ ಒಳ, ಹೊರ ಹರಿವು?

Gajanur-Tunga-Dam-water-release.

ಶಿವಮೊಗ್ಗ | ತೀರ್ಥಹಳ್ಳಿ ತಾಲೂಕಿನಾದ್ಯಂತ ಮಳೆ ಬಿರುಸಾಗಿದೆ. ಹಾಗಾಗಿ ತುಂಗಾ ಜಲಾಶಯಕ್ಕೆ (TUNGA DAM) ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರಸ್ತುತ ತುಂಗಾ ಜಲಾಶಯಕ್ಕೆ 48,317 ಕ್ಯೂಸೆಕ್ ಒಳೆ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 21 ಗೇಟುಗಳನ್ನು ತೆಗೆದು ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, … Read more

ಭದ್ರಾ ಜಲಾಶಯಕ್ಕೆ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳ ಹರಿವು

Bhadra-Dam-gate-opened-2022

ಭದ್ರಾವತಿ | ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಪ್ರಸ್ತುತ ಭದ್ರಾ ಜಲಾಶಯಕ್ಕೆ 51,265 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಇಂದಿನ ನೀರಿನ ಮಟ್ಟ 183.8 ಅಡಿಯಷ್ಟು ನೀರಿನ ಸಂಗ್ರಹವಿದೆ. ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಇದನ್ನೂ ಓದಿ – ಲಿಂಗನಮಕ್ಕಿ ಡ್ಯಾಂಗೆ … Read more

ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು

-Linganamakki-Dam-General-Image

ಸಾಗರ | ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದ (LINGANAMAKKI DAM) ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಂದೇ ದಿನದಲ್ಲಿ ನೀರಿನ ಸಂಗ್ರಹ ಮಟ್ಟ ಎರಡೂವರೆ ಅಡಿಯಷ್ಟು ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 77,911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಪ್ರಮಾಣ ಹೆಚ್ಚಳವಾದರೆ ಒಳ ಹರಿವು ಮತ್ತಷ್ಟು ಏರಿಕೆಯಾಗಲಿದೆ. ಒಳ ಹರಿವು ಹೆಚ್ಚಳ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 2.4 ಅಡಿಯಷ್ಟು ಹೆಚ್ಚಳವಾಗಿದೆ. ಆ.8ರಂದು 1803.8 ಅಡಿಯಷ್ಟು ನೀರಿತ್ತು. ಇವತ್ತು … Read more

BREAKING NEWS | ಶಿವಮೊಗ್ಗ ಪಾಲಿಕೆ ಮಾಜಿ ಸದಸ್ಯೆಯ ಮನೆ ಕುಸಿತ

Former-corporator-house-collapse-in-Sheshadripuram.

ಶಿವಮೊಗ್ಗ | ಭಾರಿ ಮಳೆಗೆ ಶಿವಮೊಗ್ಗದಲ್ಲಿ ಕಳೆದ ರಾತ್ರಿ ಮಾಜಿ ಕಾರ್ಪೊರೇಟರ್ ಒಬ್ಬರ ಮನೆ ಕುಸಿದಿದೆ. ಆದರೆ ಈತನಕ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳ್ಯಾರು ಅವರ ನೆರವಿಗೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ನಗರದ ಶೇಷಾದ್ರಿಪುರಂನ 2ನೇ ಅಡ್ಡರಸ್ತೆಯಲ್ಲಿ ನಾಲ್ಕು ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾರಿಗೂ ಸಮಸ್ಯೆಯಾಗಿಲ್ಲ. ಮಾಜಿ ಕಾರ್ಪೊರೇಟರ್ ಮನೆ ಕುಸಿದ ನಾಲ್ಕು ಮನೆಗಳ ಪೈಕಿ ಒಂದು ಮನೆ ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅವರಿಗೆ ಸೇರಿದೆ. ಕಳೆದ ರಾತ್ರಿ ಮನೆ ಕುಸಿಯುತ್ತಿದ್ದಂತೆ ಮಾಜಿ … Read more

ಭಾರಿ ಮಳೆ, ಶಿವಮೊಗ್ಗ ಜಿಲ್ಲೆಯ ಹಲವು ಕಡೆ 100 ಮಿ.ಮೀಗಿಂತಲೂ ಹೆಚ್ಚು ವರ್ಷಧಾರೆ

Rain-at-Hosanagara

ಶಿವಮೊಗ್ಗ | ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (HEAVY RAIN) ಅಬ್ಬರಿಸಿದೆ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರು ಮಿಲಿ ಮೀಟರ್’ಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಹೊಸನಗರ ತಾಲೂಕಿನ ಮೇಲಿನಬೆಸಿಗೆ 220 ಮಿ.ಮೀ, ಸುಳಗೋಡು 143 ಮಿ.ಮೀ, ಕೋಡೂರು 128 ಮಿ.ಮೀ, ನಿಟಿರು 124 ಮಿ.ಮೀ, ಅಂಡಗದದೂರು 124 ಮಿ.ಮೀ, ಸೋನಲೆ 124 ಮಿ.ಮೀ, ತೀರ್ಥಹಳ್ಳಿಯ ಹೊನ್ನೇತಾಳು 127 ಮಿ.ಮೀ, ಹಾದಿಗಲ್ಲು 126 ಮಿ.ಮೀ, ಆರಗ 124 … Read more

ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾದಲ್ಲಿ ಮಳೆ ಅಬ್ಬರ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

rain in shimoga

ಹೊಸನಗರ | ಭಾರಿ ಮಳೆ ತಾಲೂಕಿನಾದ್ಯಂತ ಜಲಾಶಯಗಳಿಗೆ ಒಳ ಹರಿವು (DAM WATER) ಏರಿಕೆಯಾಗಿದೆ. ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾ ಮತ್ತು ಸಾವೇಹಕ್ಲು ಜಲಾಶಯ ವ್ಯಾಪ್ತಿಗಳಲ್ಲಿ ಭಾರಿ ಮಳೆಯಾಗಿದೆ. ಹೊಸನಗರ ತಾಲೂಕಿನ ಹುಲಿಕಲ್ ಮತ್ತು ಮಾಸ್ತಿಕಟ್ಟೆ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಬಿಡುವು ನೀಡದೆ ಮಳೆ ಅಬ್ಬರಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹುಲಿಕಲ್ ಭಾಗದಲ್ಲಿ 231 ಮಿ.ಮೀ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 230 ಮಿ.ಮೀ ಮಳೆ ಸುರಿದಿದೆ. ಯಡೂರಿನಲ್ಲಿ 165 ಮಿ.ಮೀ ಮಳೆ ಸುರಿದಿದೆ. ಜಲಾಶಯಗಳಿಗು ಹೆಚ್ಚಿನ ನೀರು ನಿರಂತರ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ದಿನಸಿ ಅಂಗಡಿಯಲ್ಲಿ ಬೆಂಕಿ, ವಸ್ತುಗಳು ಸುಟ್ಟು ಕರಕಲು

Fire-in-a-Shop-at-Nagendra-Colony

ಶಿವಮೊಗ್ಗ | ದಿನಸಿ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ವಸ್ತುಗಳು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ (FIRE) ಬೆಂಕಿ ನಂದಿಸಿದ್ದಾರೆ. ನಗರದ ನಾಗೇಂದ್ರ ಕಾಲೋನಿಯಲ್ಲಿ ಸದಾನಂದ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಬೆಂಕಿ ಹೊತ್ತುಕೊಂಡಿದೆ. ಅಂಗಡಿಯಲ್ಲಿದ್ದ ದಿನಸಿ ವಸ್ತುಗಳು ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿ ಬೆಂಕಿ ಕಾಣಿಸಿಕಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೆ ಅಗ್ನಿಶಾಮಕ (FIRE) ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. … Read more

BREAKING NEWS | ಭಾರಿ ಮಳೆಗೆ ಕುಸಿದ ಮನೆ ಗೋಡೆ, ಮಹಿಳೆ ಸ್ಥಳದಲ್ಲೇ ಸಾವು

breaking news graphics

ಭದ್ರಾವತಿ | ಭಾರಿ ಮಳೆಗೆ ಮನೆ ಗೋಡೆ (WALL) ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಭಾಗ್ಯಮ್ಮ (55) ಎಂಬವವರು ಮೃತ ದುರ್ದೈವಿ. ಗೋಡೆ ಕುಸಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಊಟ ಮುಗಿಸಿ ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಗೋಡೆ ಕುಸಿದಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಕೃಷ್ಣಮೂರ್ತಿ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗಂಟೆ ಗಂಟೆಗೂ … Read more