ಹೊಸನಗರದಲ್ಲಿ ಕಾಳ್ಗಿಚ್ಚು, ಎಂಪಿಎಂ ನಡುತೋಪು ಭಸ್ಮ, ಧಗಧಗ ಉರಿದ ಅಡಕೆ, ತಾಳೆ ತೋಟ
ಶಿವಮೊಗ್ಗ ಲೈವ್.ಕಾಂ | 22 ಫೆಬ್ರವರಿ 2019 ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾ ಮತ್ತು ಹೊನ್ನೆಕೊಪ್ಪ ಗ್ರಾಮದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ ಎಂಪಿಎಂ ಆರಣ್ಯ ವ್ಯಾಪ್ತಿ ಮತ್ತು ಕೃಷಿ ಜಮೀನು ಬೆಂಕಿಗೆ ಆಹುತಿಯಾಗಿದೆ. ಗುರುವಾರ ಮಧ್ಯಾಹ್ನ ಸುತ್ತಾ ಗ್ರಾಮದ ವ್ಯಾಪ್ತಿಯಲ್ಲಿರುವ ಎಂಪಿಎಂ ಅರಣ್ಯದಲ್ಲಿ ಬೆಂಕಿ ಕಾಣಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದಾಗಿ ಎಂಪಿಎಂ ನೆಡುತೋಪಿಗೆ ಹಾನಿಯಾಗಿದೆ. ಇದಾದ ಕೆಲವೇ ಕ್ಷಣದಲ್ಲಿ ಹೊನ್ನೆಕೊಪ್ಪ ಗ್ರಾಮದಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಬಾಳೆಕೊಪ್ಪ … Read more