ಶಿವಮೊಗ್ಗ ಲೈವ್.ಕಾಂ | 22 ಫೆಬ್ರವರಿ 2019
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾ ಮತ್ತು ಹೊನ್ನೆಕೊಪ್ಪ ಗ್ರಾಮದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ ಎಂಪಿಎಂ ಆರಣ್ಯ ವ್ಯಾಪ್ತಿ ಮತ್ತು ಕೃಷಿ ಜಮೀನು ಬೆಂಕಿಗೆ ಆಹುತಿಯಾಗಿದೆ.
ಗುರುವಾರ ಮಧ್ಯಾಹ್ನ ಸುತ್ತಾ ಗ್ರಾಮದ ವ್ಯಾಪ್ತಿಯಲ್ಲಿರುವ ಎಂಪಿಎಂ ಅರಣ್ಯದಲ್ಲಿ ಬೆಂಕಿ ಕಾಣಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದಾಗಿ ಎಂಪಿಎಂ ನೆಡುತೋಪಿಗೆ ಹಾನಿಯಾಗಿದೆ.
ಇದಾದ ಕೆಲವೇ ಕ್ಷಣದಲ್ಲಿ ಹೊನ್ನೆಕೊಪ್ಪ ಗ್ರಾಮದಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಬಾಳೆಕೊಪ್ಪ ಕುಮಾರ್ ಅವರಿಗೆ ಸೇರಿದ 400 ಅಡಕೆ, ಸುಮಾರು 150 ತಾಳೆ ಗಿಡ, ಉಮೇಶ್ ಎಂಬುವವರಿಗೆ ಸೇರಿದ ಸುಮಾರು 4 ಎಕರೆ ತಾಳೆ ತೋಟಕ್ಕೆ ಬೆಂಕಿ ತಗುಲಿ, ಹಾನಿಯಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]