BREAKING NEWS | ಶಿವಮೊಗ್ಗದಲ್ಲಿ ಕರ್ಫ್ಯೂ ಅವಧಿ ಮತ್ತೊಂದು ದಿನಕ್ಕೆ ವಿಸ್ತರಣೆ

Police Bandobast at Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಅವಧಿಯನ್ನು ಮತ್ತೊಂದು ದಿನಕ್ಕೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಕರ್ಫ್ಯೂ ಅವಧಿಯನ್ನು ಫೆ.26ರ ಬೆಳಗ್ಗೆ 9 ಗಂಟೆವರೆಗೂ ವಿಸ್ತರಣೆ ಮಾಡಲಾಗಿದೆ. ಈ ಸಂಬಂಧ ಇವತ್ತು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಸೆಕ್ಷನ್ 144ರ ಅನ್ವಯ ಪ್ರತಿಬಂಧಕಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಮೊದಲು ಫೆ.25ರ ಬೆಳಗ್ಗೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಇದನ್ನೂ … Read more

ಇವತ್ತೂ ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧ, ಪ್ರಮುಖ ರಸ್ತೆಗಳೆಲ್ಲ ಬಂದ್

Shimoga-City-During-Curfew-Harsha-Murder-case

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಶಿವಮೊಗ್ಗ ನಗರ ಇವತ್ತು ಕೂಡ ಸ್ಥಬ್ಧವಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಇದೆ. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಮತ್ತು ಆ ಬಳಿಕ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ, ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂ ವಿಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಬುಧವಾರ ಬೆಳಗ್ಗೆ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಅಗತ್ಯ … Read more

ಹರ್ಷ ಕುಟುಂಬಕ್ಕೆ ಒಂದು ಲಕ್ಷದ ಚೆಕ್ ವಿತರಣೆ

CM-political-secretary-jeevaraj-visit-shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಮುಖ್ಯಂಮತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಭೇಟಿ ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಹಿಂದೂ ಸಮಾಜಕ್ಕೆ ಆಘಾತ ತಂದಿದೆ. ಈ ಬೆಳವಣಿಗೆ ಯಾಕೆ ನಡೆಯುತ್ತಿವೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಅನ್ನುವುದು ನೋಡಬೇಕಿದೆ ಎಂದರು. ಒಂದು ಲಕ್ಷದ ಚೆಕ್ ವಿತರಣೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಹರ್ಷ ಕುಟುಂಬಕ್ಕೆ … Read more

ಹರ್ಷ ಕುಟುಂಬದ ಜೊತೆ ಡಾ.ಸಂತೋಷ್ ಭಾರತಿ ಸ್ವಾಮೀಜಿ ಚರ್ಚೆ

Santosh-guruji-visit-harsha-home.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಹರ್ಷನನ್ನು ಕಳೆದುಕೊಂಡಿರುವುದು ಓರ್ವ ಯೋಧನನ್ನು ಕಳೆದುಕೊಂಡ ಹಾಗೆ ಆಗಿದೆ ಎಂದು ಡಾ.ಸಂತೋಷ್ ಭಾರತೀ ಶ್ರೀಪಾದ ಸ್ವಾಮೀಜಿ ಹೇಳಿದರು. ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆಗಾರರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಹರ್ಷ ನನ್ನ ಆತ್ಮೀಯ ಶಿಷ್ಯ, ಇಲ್ಲಿ ಸಂಘಟನೆ ಮಾಡುತ್ತಿದ್ದ. ಹರ್ಷನ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ತಿಳಿಸಿದರು. ಇದನ್ನೂ ಓದಿ | ಬಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ಚಕ್ರವರ್ತಿ ಸೂಲಿಬೆಲೆ

BREAKING NEWS | ಹರ್ಷ ಹತ್ಯೆ ಕೇಸ್, ಬಂಧಿತರ ಸಂಖ್ಯೆ ಆರಕ್ಕೆ, ಮತ್ತಷ್ಟು ಮಂದಿ ಅರೆಸ್ಟ್ ಸಾಧ್ಯತೆ

IPS office Lakshmi Prasad

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಈವರೆಗೂ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿಯಾದರೂ ಆಟೋ, ಬೈಕುಗಳಿಗೆ ಬೆಂಕಿ ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು … Read more

BREAKING NEWS | ಶಿವಮೊಗ್ಗದಲ್ಲಿ ಕರ್ಫೂ ವಿಸ್ತರಣೆ, ಶಾಲೆ, ಕಾಲೇಜಿಗೆ ರಜೆ

Shimoga Dc Dr.selvamani

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ  ಇನ್ನೆರಡು ದಿನ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಬುಧವಾರ ಬೆಳಗ್ಗೆವರೆಗೆ ಕರ್ಫ್ಯೂ ಇತ್ತು. ಆದರೆ ಕೆಲವು ಘಟನೆಗಳು ಹಿನ್ನೆಲೆ ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗುತ್ತಿದೆ. ಕರ್ಫ್ಯೂ ಜಾರಿಯಲ್ಲಿ ಇರುವ ಅವಧಿಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು, ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ … Read more

ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿಯಾದರೂ ಆಟೋ, ಬೈಕುಗಳಿಗೆ ಬೆಂಕಿ

Burnt Auto in Shimoga Tunga Nagara Station

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಕರ್ಫ್ಯೂ ಜಾರಿಯಾದರೂ ಶಿವಮೊಗ್ಗದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ ನಿಂತಿಲ್ಲ. ಮೂರು ಆಟೋ ರಿಕ್ಷಾ ಮತ್ತು ಎರಡು ಬೈಕ್’ಗೆ ಬೆಂಕಿ ಹಚ್ಚಲಾಗಿದೆ. ಇವತ್ತು ಬೆಳಗಿನ ಜಾವ ಟಿಪ್ಪುನಗರ ಮತ್ತು ಕೊರಮ ಕೇರಿಯಲ್ಲಿ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದನ್ನೂ ಓದಿ | ಶಿವಮೊಗ್ಗ ನಗರದಲ್ಲಿ ರಾತ್ರಿಯಿಂದ … Read more

ಶಿವಮೊಗ್ಗ ಸಿಟಿಯಲ್ಲಿ ದೊಡ್ಡ ಸಂಖ್ಯೆಯ ಪೊಲೀಸರ ನಿಯೋಜನೆ, ಎಷ್ಟು ಸಂಖ್ಯೆಯ ಸಿಬ್ಬಂದಿ ಬಂದಿದ್ದಾರೆ?

Police Bandobast at Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮತ್ತು ಪ್ರಕ್ಷುಬ್ದ ವಾತಾವರಣದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಿವಮೊಗ್ಗದ ಬಂದೋಬಸ್ತ್’ಗಾಗಿ ಮೂವರು ಎಸ್.ಪಿಗಳನ್ನು ನಿಯೋಜಿಸಲಾಗಿದೆ. ಒಬ್ಬರು ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್’ಪಿ, 39 ಇನ್ಸ್ ಪೆಕ್ಟರ್, 54 ಸಬ್ ಇನ್ಸ್ ಪೆಕ್ಟರ್, 48 ಎಎಸ್ಐ, 819 ಕಾನ್ಸ್ ಟೇಬಲ್’ಗಳು, 20 ಕೆ.ಎಸ್.ಆರ್.ಪಿ, 10 ಡಿಎಆರ್, 1 ಆರ್.ಎ.ಎಫ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಅಹಿತಕರ … Read more

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, 12 ಮಂದಿ ಪೊಲೀಸ್ ವಶಕ್ಕೆ

home minister aaraga gnanendra

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪ್ರಕರಣ ಸಂಬಂಧ 3 ಆರೋಪಿಗಳನ್ನು ಬಂಧಿಸಲಾಗಿದೆ. 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢವಾದರೆ ಬಂಧಿಸಲಾಗುತ್ತದೆ. ಅಲ್ಲದೆ ಈ ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ … Read more

ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನಟ ಪ್ರಥಮ್ ನೆರವು

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಅವರ ಕುಟುಂಬಕ್ಕೆ ನಟ, ನಿರ್ದೇಶಕ ಪ್ರಥಮ್ ನೆರವು ಘೋಷಿಸಿದ್ದಾರೆ.  ಈ ಸಂಬಂಧ ಫೇಸ್ ಬುಕ್’ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ. ತಮ್ಮ Olle Hudga Pratham ಫೇಸ್ ಬುಕ್ ಖಾತೆಯ ಮೂಲಕ ನೆರವು ಪ್ರಕಟಿಸಿದ್ದಾರೆ. ಅಲ್ಲದೆ ಎಲ್ಲರು ಹರ್ಷನ ಕುಟುಂಬಕ್ಕೆ ನೆರವಾಗುವಂತೆ ಪ್ರಥಮ್ ಮನವಿ ಮಾಡಿದ್ದಾರೆ.