ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜಕ್ಕೆ ಬೆಂಕಿ, ಶಿವಮೊಗ್ಗದಲ್ಲಿ ಕುರುಬ ಸಮಾಜದ ಆಕ್ರೋಶ

181221 Kuruba Sanga Protest against sangolli rayanna pratime distraction

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಖಂಡಿಸಿ ಶಿವಮೊಗ್ಗದಲ್ಲಿ ಜಿಲ್ಲಾ ಯುವ ಕುರುಬರ ಬಳಗ ಪ್ರತಿಭಟನೆ ನಡೆಸಿತು. ಎಂಇಎಸ್ ಗೂಂಡಾಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಲಾಗಿದೆ. ನಾಲ್ಕು ದಿನದ ಹಿಂದೆ ಕರ್ನಾಟಕದ ಧ್ವಜ ಸುಡಲಾಗಿತ್ತು. ಇಷ್ಟಾದರೂ ಎಂಇಎಸ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ. ಧ್ವಜ ಸುಟ್ಟ ಪ್ರಕರಣ ಸಂಬಂಧ ಹೋರಾಟ ನಡೆಸಿದ ಕನ್ನಡಿಗರ ವಿರುದ್ಧವೇ ಕೇಸ್ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಉಪಮೇಯರ್ ಪಾಲಾಕ್ಷಿ ಅವರು, ನಾಲ್ಕು ದಿನದ ಹಿಂದೆ ಕರ್ನಾಟಕದ ಧ್ವಜ ಸುಟ್ಟಿದ್ದಾರೆ. ಈಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ. ಎಂಇಎಸ್ ಅನ್ನುವುದು ದೇಶದ್ರೋಹಿ ಸಂಘಟನೆಯಾಗಿದೆ. ಇದನ್ನ ಕೂಡಲೆ ನಿಷೇಧ ಮಾಡಬೇಕು. ಈ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

AVvXsEiYLxBEz05sXnF6VEPhBn g8YV0KTMqq9s4nelteMD8pHEYYR7ErEsRAk1Py Sv48 g93 0fWACivs8CsvisUgH8PZ0 5P6SmXqWcElXkvePufgp4c2KGMT O5 h2YUd6BXdf3QD6YtPqLSgtlqzGDWFnRhhxEM r4AywcgEHFM7ePY4yHjsj5J7 QRA=s926

AVvXsEj3 6UCzNipQY1pIPsl1vK7zlyzLBzWp R01ChQe0QbvkIXiJTL5 hZiVJL hBZeVY5LjYdOiz2GuBktOGA2YDuGI489 V EV1xxpiDldyz lsuiAlFHFqjJxXI6tEBkxsSouhTfc7Yh8ii1hU kzWWp4UQUi6rS2kPomPLSOKS2DhrAyNcYTGM98ziog=s926

Read more

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಂಜಿನ ಮೆರವಣಿಗೆ

200921 Panjina Meravanige at Thirthahalli by RM Manjunatha Gowda

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 20 ಸೆಪ್ಟೆಂಬರ್ 2021 ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲವು ನೀತಿಗಳ ವಿರುದ್ಧ ತೀರ್ಥಹಳ್ಳಿ ಪಟ್ಟಣದಲ್ಲಿ ಇವತ್ತು ಪಂಜಿನ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಮುಂಭಾಗದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಕೇಂದ್ರ ಸರ್ಕಾರ, ಹಿಂದೂ ದೇಗುಲಗಳನ್ನು ಕೆಡವಿ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ರಾಜ್ಯ ಸರ್ಕಾರ … Read more