ಭದ್ರಾ ನಾಲೆಯಲ್ಲಿ ಒಬ್ಬರ ಮೃತದೇಹ ಪತ್ತೆ, ನಾಪತ್ತೆಯಾದ ಮೂವರಿಗೆ ಶೋಧ
ಹೊಳೆಹೊನ್ನೂರು: ಅರಬಿಳಚಿ ಕ್ಯಾಂಪ್ ಬಳಿ ಬಟ್ಟೆ ತೊಳೆಯಲು ಹೋಗಿ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ನಾಲ್ವರಲ್ಲಿ ಓರ್ವ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರವಿಕುಮಾರ್ (22) ಎಂದು ಗುರುತಿಸಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ (Eshwar Malpe) ಅವರು ನಾಲೆಯ ನೀರಿನಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ನಾಲೆಯಲ್ಲಿ ನೀರುಪಾಲಾಗಿದ್ದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿತ್ತು. ಸದ್ಯ ರವಿಕುಮಾರ್ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಉಳಿದ ಮೂವರಾದ ನೀಲಾಬಾಯಿ, ಅವರ ಮಗಳು ಶ್ವೇತಾ ಮತ್ತು ಅಳಿಯ ಪರಶುರಾಮ್ ಪತ್ತೆಗಾಗಿ … Read more