ಬೆಳಗ್ಗೆ 6 ಗಂಟೆಗೆ ಮದ್ಯದಂಗಡಿ ಓಪನ್, ದೇವಸ್ಥಾನಗಳಿಗೆ ಯಾಕಿಲ್ಲ ಪರ್ಮಿಷನ್, ದೇವರ ದರ್ಶನದ ಅವಕಾಶಕ್ಕೆ ಆಗ್ರಹ
ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ವಿಪ್ರ ವೈದಿಕ ಪರಿಷತ್ ಮತ್ತು ತ್ರಿಮತಸ್ಥ ಬ್ರಾಹ್ಮಣ ಅರ್ಚಕರು, ಪುರೋಹಿತರ ಪರಿಷತ್ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪರಿಷತ್ ಸದಸ್ಯರು, 45 ದಿನದಿಂದ ದೇವಸ್ಥಾನಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈಗ ರಾಜ್ಯದಲ್ಲಿ ಕರೋನ ಸೋಂಕು ಇಳಿಮುಖವಾಗಿದೆ. ದೇವಸ್ಥಾನ ಬಾಗಿಲು ತೆಗೆಯಲು ಅವಕಾಶ ನೀಡಬೇಕು … Read more