ನವುಲೆ ಬಳಿ ರಸ್ತೆ ಡಿವೈಡರ್ ಮೇಲಿನ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳಿಗೆ ಚಾಲನೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಸೆಪ್ಟೆಂಬರ್ 2021 ಶಿವಮೊಗ್ಗದ ನವುಲೆ ಬಳಿ ರಸ್ತೆ ಮಧ್ಯೆ ಅಳವಡಿಸಲಾಗಿರುವ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಶಿವಮೊಗ್ಗದ ಎಲ್.ಬಿ.ಎಸ್ ನಗರದಿಂದ ಒಂದು ಕಿ.ಮೀ.ವರೆಗೆ ರಸ್ತೆಯ ಡಿವೈಡರ್ ಮೇಲೆ ಅಲಂಕಾರಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆಕರ್ಷಕ ವಿದ್ಯುತ್ ದೀಪಗಳಿಗೆ ಇವತ್ತು ಸಂಜೆಯಿಂದ ಚಾಲನೆ ಸಿಕ್ಕಿದೆ. 59 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ. … Read more