SHIMOGA CRIME | ಡಾನ್ಸ್ ಮಾಸ್ಟರ್ ಜೀವನ್ ಹತ್ಯೆ ಕೇಸ್, ಮತ್ತೆ ಮೂವರು ಅರೆಸ್ಟ್

Doddapete police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 FEBRUARY 2021 ಡಾನ್ಸ್ ಮಾಸ್ಟರ್ ಜೀವನ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಈ ಕೇಸ್‍ನಲ್ಲಿ ಈತನಕ ಏಳು ಮಂದಿಯ ಬಂಧನವಾಗಿದೆ. ಈ ಸುದ್ದಿಯನ್ನೂ ಓದಿ | ಯುವಕನ ಬರ್ಬರ ಹತ್ಯೆ, ಮತ್ತೊಬ್ಬನಿಗೆ ಗಂಭೀರ ಗಾಯ, ತಡರಾತ್ರಿ ಕೃತ್ಯ ಆರ್‍ಎಂಎಲ್‍ ನಗರದ ಮುಜೀಬ್ ಉರ್ ರೆಹಮಾನ್, ಸಗೀರ್ ಮತ್ತು ಮಾರ್ನಮಿ ಬೈಲಿನ ಫರಾಜ್ ಎಂಬುವವರನ್ನು ಬಂಧಿಸಲಾಗಿದೆ. ಈ ಸುದ್ದಿಯನ್ನೂ ಓದಿ | ಬಾರ್‌ನಲ್ಲಿ ಕಿರಿಕ್ ಕೇಸ್, … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್ ತನಿಖೆ ಕಂದಾಯ ಇಲಾಖೆ ಕಾರ್ಯದರ್ಶಿ ಹೆಗಲಿಗೆ, ಸಿದ್ದರಾಮಯ್ಯ ವಿರೋಧ

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021 ಕಲ್ಲಗಂಗೂರು ಸ್ಪೋಟ ಪ್ರಕರಣದ ತನಿಖೆಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಹೆಗಲಿಗೆ ವಹಿಸಲಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ  ರಾಜ್ಯ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಸರ್ಕಾರದ ನಡೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಧಾನಸಭೆಯಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಇಲಾಖೆ ಕಾರ್ಯದರ್ಶಿಯಿಂದ ತನಿಖೆ ನಡೆಸಲಾಗುತ್ತದೆ. ಇದರ ಜೊತೆಗೆ ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆಯನ್ನು ಮಟ್ಟ … Read more

SHIMOGA | ಬಾರ್‌ನಲ್ಲಿ ಕಿರಿಕ್ ಕೇಸ್, ಯುವಕನ ಕೊಂದ ನಾಲ್ವರು ಅರೆಸ್ಟ್, ಯಾರನ್ನೆಲ್ಲ ಬಂಧಿಸಲಾಗಿದೆ?

Shimoga SP Shantharaj 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JANUARY 2021 ಕ್ಷುಲಕ ಕಾರಣಕ್ಕೆ ಯುವಕರ ನಡುವೆ ನಡೆದ ಗಲಾಟೆ ಮತ್ತು ಯುವಕನೊಬ್ಬನ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಒಂಭತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ರೌಡಿ ಶೀಟರ್‍ ಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ರೌಡಿ ಶೀಟರ್‍ ಗಳಾದ ಮಹಮದ್ ಸಮೀರ್ ಅಲಿಯಾಸ್ ಅಪ್ಪು, ಆದಿಲ್ ಪಾಷಾ ಎಂಬುವವರನ್ನು ಬಂಧಿಸಲಾಗಿದೆ. ಇವರೊಂದಿಗೆ ಪ್ರತಾಪ್ ಅಲಿಯಾಸ್ ಸಲೀಂ ಅಲಿಯಾಸ್ ಅಣ್ಣಾ, ಸಕ್ಲೈನ್ ಮುಸ್ತಾಕ್ ಎಂಬುವವರನ್ನು ಬಂಧಿಸಲಾಗಿದೆ ಎಂದು … Read more

ಕಲ್ಲಗಂಗೂರು ಗಣಿ ಸ್ಪೋಟ ಕೇಸ್, ಶಿವಮೊಗ್ಗ ಡಿಸಿ, ಎಸ್‌ಪಿ ಸೇರಿ ಏಳು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021 ಕಲ್ಲಗಂಗೂರು ಕಲ್ಲು ಕ್ವಾರೆಯಲ್ಲಿ ಸ್ಪೋಟ ಸಂಭವಿಸಿದ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸೇರಿ ಏಳು ಅಧಿಕಾರಿಗಳ ವಿರುದ್ಧ  ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಸ್ಥಳೀಯರಾದ ಸಂದೀಪ್ ಎಂಬುವವರು ಈ ದೂರು ಸಲ್ಲಿಸಿದ್ದಾರೆ. ನಿಯಮ ಬಾಹಿರವಾಗಿ ಕಲ್ಲು ಕ್ವಾರೆ, ಕ್ರಷರ್ ನಡೆಸುತ್ತಿರುವ ಸಂಬಂಧ ಸಂದೀಪ್ ಅವರು 2013ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. ಜನವರಿ 29ಕ್ಕೆ ಅಂತಿಮ ವಿಚಾರಣೆಗೆ … Read more

ಚಿಕಿತ್ಸೆ ನೆಪದಲ್ಲಿ ಭದ್ರಾವತಿಯಲ್ಲಿ ಯುವತಿಗೆ ವೈದ್ಯನಿಂದ ಲೈಂಗಿಕ ಕಿರುಕುಳ, ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 6 DECEMBER 2020 ಚಿಕಿತ್ಸೆ ನೆಪದಲ್ಲಿ ವೈದ್ಯರೊಬ್ಬರು ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವೈದ್ಯನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಭದ್ರಾವತಿಯ ಓಲ್ಡ್ ಟೌನ್‍ ಪೊಲೀಸ್ ಠಾಣೆ ವ್ಯಾಪ್ತಿಯ ಖಾಜಿ ಮೊಹಲ್ಲಾದ ಮೂಲವ್ಯಾಧಿ ವೈದ್ಯ ಡಾ.ಅನಿಮೇಶ್ ಬಿಸ್ವಾಸ್ ಬಂಧಿತ. ಚಿಕಿತ್ಸೆಗೆ ತೆರಳಿದ್ದ ವೇಳೆ ವೈದ್ಯರು ಬಟ್ಟೆ ಬಿಚ್ಚುವಂತೆ ಹೇಳಿ, ತಾವೆ ಬಟ್ಟೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ವೈದ್ಯರು … Read more

ಇಕ್ಕೇರಿ ಜೋಡಿ ಕೊಲೆ ಹಂತಕನ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಫೈರಿಂಗ್, ಹೇಗಾಯ್ತು ಗೊತ್ತಾ ಘಟನೆ?

201020 Sagara Police Firing in Ikkeri Double Murder Case 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಅಕ್ಟೋಬರ್ 2020 ಜಿಲ್ಲೆಯಲ್ಲಿ ಪೊಲೀಸರ ಬಂದೂಕು ಮತ್ತೊಮ್ಮೆ ಸದ್ದು ಮಾಡಿದೆ. ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಸಾಗರದಲ್ಲಿ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಆರೋಪಿ ಭರತ್‌ ಎಂಬಾತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿ ಭರತ್ ಪೊಲೀಸ್ ಸಿಬ್ಬಂದಿ ಒಬ್ಬರ ಮೇಲೆ ಹಲ್ಲೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಯಾರಿದು ಭರತ್? ಇಕ್ಕೇರಿ ಸಮೀಪ ಇತ್ತೀಚೆಗೆ ತಾಯಿ ಮತ್ತು ಮಗನ ಕೊಲೆಯಾಗಿತ್ತು. ಈ ಜೋಡಿ … Read more

BREAKING NEWS | ಶಿವಮೊಗ್ಗದಲ್ಲಿ ಮತ್ತೊಂದು ಕರೋನ ಪಾಸಿಟಿವ್ ಕೇಸ್ ಪತ್ತೆ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020 ಶಿವಮೊಗ್ಗದಲ್ಲಿ ಮತ್ತೊಂದು ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆರು ವರ್ಷದ ಬಾಲಕಿಯೊಬ್ಬಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕು ತಗುಲಿದ್ದು ಹೇಗೆ? ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ಶಿವಮೊಗ್ಗ ಜಿಲ್ಲೆಯ ಬಾಲಕಿಯೊಬ್ಬಳ್ಳಿಗೆ ಸೋಂಕು ತಗುಲಿರುವುದಾಗಿ ತಿಳಿಸಲಾಗಿದೆ. ಪೇಷೆಂಟ್ ನಂಬರ್ 3194ಗೆ ಕರೋನ ಪಾಸಿಟಿವ್ ಬಂದಿದೆ. ಆದರೆ ಈಕೆಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ಇನ್ನು ತಿಳಿದು ಬಂದಿಲ್ಲ. ಹಾಗಾಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು … Read more

ಶಿವಮೊಗ್ಗ DCC ಬ್ಯಾಂಕ್‌ಗೆ ಮತ್ತೊಮ್ಮೆ ಸಂಕಷ್ಟ, 95 ಕೋಟಿ ಸಾಲದ ಕೇಸ್ CBIಗೆ ವಹಿಸುವಂತೆ ನಿರ್ಣಯ, ಸಾಲ ಯಾರಿಗೆ ಕೊಟ್ಟಿದ್ದು?

DCC Bank Shivamogga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಮೇ 2020 ಶಿವಮೊಗ್ಗ ಡಿಸಿಸಿ ಬ್ಯಾಂಕ್‍ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಕೋಟಿ ಕೋಟಿಯ ಸಾಲ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‍ ಸಾಬ್ ಸಭಾಂಗಣದಲ್ಲಿ ಇವತ್ತು ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಿಬಿಐ ತನಿಖೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ಸಿಬಿಐ ತನಿಖೆಗೆ ಒತ್ತಾಯವೇಕೆ? ಶಿವಮೊಗ್ಗ ಜಿಲ್ಲಾ ಕೇಂದ್ರ … Read more

ಬೆಂಗಳೂರಿಂದ ಶಿವಮೊಗ್ಗ, ಸೊರಬಕ್ಕೆ ಆಂಬುಲೆನ್ಸ್‌ನಲ್ಲಿ ಬಂದ ಜನರು, ಆಂಬುಲೆನ್ಸ್ ಸೀಜ್, ಬಿತ್ತು ಕೇಸ್

130420 Ambulance Seized in Shimoga 1

ಶಿವಮೊಗ್ಗ ಲೈವ್.ಕಾಂ | SORABA | 13 ಏಪ್ರಿಲ್ 2020 ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಬೆಂಗಳೂರಿನಿಂದ ಜನರನ್ನು ಕರೆತಂದಿದ್ದ ಆಂಬುಲೆನ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಬುಲೆನ್ಸ್‌ ಚಾಲಕ ಮತ್ತು ಅದರಲ್ಲಿ ಬಂದಿದ್ದ ಮೂವರ ವಿರುದ್ಧ ಕೇಸ್‌ ಬಿದ್ದಿದೆ. ಯಾವ ಊರಿಗೆ ಬಂದಿದ್ದದರು? ಲಾಕ್‌ಡೌನ್‌ ಹಿನ್ನೆಲೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳುವುದು ನಿಷೇಧ. ಆದರೂ ಬೆಂಗಳೂರಿನಿಂದ ಸೊರಬದ ಕಾನಕೇರಿಗೆ ಮೂವರನ್ನು ಬಂದಿದ್ದರು. ಇವರೆಲ್ಲ ಭಾನುವಾರ ಆಂಬುಲೆನ್ಸ್‌ನಲ್ಲಿ ತಮ್ಮ ಊರಿಗೆ ಬಂದಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸೊರಬ ಠಾಣೆ ಪೊಲೀಸರು … Read more

ವಾಟ್ಸಪ್, ಫೇಸ್’ಬುಕ್’ನಲ್ಲಿ ವಿಡಿಯೋ, ಮೆಸೇಜ್ ಷೇರ್ ಮಾಡುವಾಗ ಹುಷಾರ್, ಗ್ರೂಪ್ ಅಡ್ಮಿನ್’ಗಳೇ ಎಚ್ಚರ, ಎಚ್ಚರ

Whatsapp-General-Image

ಶಿವಮೊಗ್ಗ ಲೈವ್.ಕಾಂ | SHIMOGA | 7 ಏಪ್ರಿಲ್ 2020 ಲಾಕ್’ಡೌನ್ ಸಂದರ್ಭ ವಾಟ್ಸಪ್, ಫೇಸ್’ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡುವ ಮೆಸೇಜುಗಳನ್ನು ಫಾರ್ವರ್ಡ್ ಮಾಡುತ್ತಿದ್ದ ಇಬ್ಬರ ವಿರುದ್ಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಧರ್ಮೀಯರ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಕೋಮು ಪ್ರಚೋದನಕಾರಿ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುವಂತಿಲ್ಲ. ಹೀಗೆ ಮಾಡಿ ಸಾಮಾಜಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ … Read more