ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ನೀಲಿ ಬಣ್ಣದ ಕಾರು

ACCIDENT-NEWS-GENERAL-IMAGE.

ಶಿವಮೊಗ್ಗ: ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಬೈಕಿನಲ್ಲಿದ್ದ (Bike) ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಸರ್ಕಾರಿ ಶಾಲೆ ಬಳಿ ಘಟನೆ ಸಂಭವಿಸಿದೆ. ಬಿದರೆಯ ಆದರ್ಶ ಮತ್ತು ಗಿರೀಶ್‌ ಗಾಯಗೊಂಡಿದ್ದಾರೆ. ಇಬ್ಬರು ಅಡಿಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ಹಸೂಡಿಗೆ ತೆರಳಿದ್ದರು. ಮಧ್ಯಾಹ್ನ ಬಿದರೆಗೆ ಮರಳುವಾಗ ವೇಗವಾಗಿ ಬಂದ ನೀಲಿ ಬಣ್ಣದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ … Read more

ಭದ್ರಾವತಿಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿ, ಚಾಲಕನ ಕಾಲಿಗೆ ಗಂಭೀರ ಗಾಯ

ACCIDENT-NEWS-GENERAL-IMAGE.

ಭದ್ರಾವತಿ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ (Collision) ಐದು ಮಂದಿ ಗಾಯಗೊಂಡಿದ್ದಾರೆ. ಒಂದು ಕಾರಿನ ಚಾಲನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿಯ ಪೇಪರ್‌ ಟೌನ್‌ ಸರ್ಕಲ್‌ ಬಳಿ ಘಟನೆ ಸಂಭವಿಸಿದೆ. ಶಿವಕುಮಾರ್‌, ಅಂಬರೀಷ, ಶಿವಶಂಕರ, ಪ್ರದೀಪ, ಮಂಜುನಾಥ ಎಂಬುವವರು ಗಾಯಗೊಂಡಿದ್ದಾರೆ. ಅಂತರಗಂಗೆಯ ಪ್ರದೀಪ, ಅಂಬರೀಷ ಮತ್ತು ಶಿವಕುಮಾರ್‌ ಎಂಬುವವರು ಉಜ್ಜನಿಪುರ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದರು. ತರೀಕೆರೆ ಕಡೆಯಿಂದ ಬಂದ ಕಾರೊಂದು ಇವರ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಪ್ರದೀಪ … Read more

ತೀರ್ಥಹಳ್ಳಿ – ಶಿವಮೊಗ್ಗ ಹೆದ್ದಾರಿಯಲ್ಲಿ ಟಿಪ್ಪರ್‌, ಪಿಕ್‌ಅಪ್‌ ವಾಹನ ಡಿಕ್ಕಿ, ಟಿಪ್ಪರ್‌ ಪಲ್ಟಿ

Truck-and-pickup-mishap-at-gabadi-in-Thirthahalli-

ತೀರ್ಥಹಳ್ಳಿ: ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಬಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಮತ್ತು ಪಿಕ್‌ಅಪ್ ವ್ಯಾನ್ ನಡುವೆ ಅಪಘಾತ (Collision) ಸಂಭವಿಸಿದೆ. ಈ ಘಟನೆಯಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನ ಮಗುಚಿ ಬಿದ್ದಿದೆ. ಅದರ ಮುಂಭಾಗದ ಚಕ್ರಗಳು ಚೆಲ್ಲಾಪಿಲ್ಲಿಯಾಗಿದೆ. ಪಿಕ್‌ಅಪ್ ವ್ಯಾನ್‌ನ ಮುಂಭಾಗಕ್ಕೂ ಹಾನಿಯಾಗಿದ್ದು, ಅದೃಷ್ಟವಶಾತ್ ಎರಡೂ ವಾಹನಗಳ ಚಾಲಕರು ಸೇರಿದಂತೆ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಇದನ್ನೂ ಓದಿ » ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗೆ ಮೆಸೇಜ್‌ ಮಾಡಿದ್ದ ಟೀಚರ್‌ಗೆ ಕಾದಿತ್ತು ಆಘಾತ, ಠಾಣೆಗೆ ದೌಡು, ಆಗಿದ್ದೇನು?

ತೀರ್ಥಹಳ್ಳಿ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದ ಕಿಯಾ ಕಾರು

Thirthahalli-News-Update

ತೀರ್ಥಹಳ್ಳಿ: ಎರಡು ಕಾರುಗಳು ಮುಖಾಮುಖಿ (head-on) ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಹೊಸ ಅಗ್ರಹಾರ ಸಮೀಪ ಘಟನೆ ಸಂಭವಿಸಿದೆ. ಅಕ್ಲಾಪುರದ ಹುಲ್ಲತ್ತಿಯ ಸುರೇಶ್‌, ಸುರೇಖಾ ಮತ್ತು ರಾಜಕಮಲ್‌ ಎಂಬುವವರು ಗಾಯಗೊಂಡಿದ್ದಾರೆ. ತಮ್ಮೂರಿನಿಂದ ಕಮ್ಮರಡಿಗೆ ಕಾರಿನಲ್ಲಿ ತೆರಳುತ್ತಿದ್ದರು. ಹೊಸ ಅಗ್ರಹಾರ ಬಳಿ ಎದುರಿನಿಂದ ಬಂದ ಕಿಯಾ ಕಾರು ಸುರೇಶ್‌ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಸುರೇಶ್‌ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ … Read more