ಕೋವಿಡ್ ಡ್ಯೂಟಿ ಮಾಡುತ್ತಲೇ ಕರೋನಾಗೆ ಬಲಿ, ಆದರೂ ಇವರು ವಾರಿಯರ್ ಅಲ್ಲ, ಕುಟುಂಬಕ್ಕೆ ಪರಿಹಾರವು ಇಲ್ಲ

311020 Papa Naik Corona Death News 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2020 ಕರೋನದಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಕೊನೆಗೆ ಅದೆ ಕಾಯಿಲೆಗೆ ತುತ್ತಾಗಿ ಮೃತಪಟ್ಟರು. ಆದರೆ ಆತನನ್ನು ಕರೋನ ವಾರಿಯರ್ ಎಂದು ಒಪ್ಪುತ್ತಿಲ್ಲ ಸರ್ಕಾರ. ಇದು ಶಿವಮೊಗ್ಗದ ಪಾಪನಾಯ್ಕ ಅವರ ದುರಂತ ಕಥೆ. ಅನಿಲ ಚಿತಾಗಾರದ ಹೊರಗುತ್ತಿಗೆ ನೌಕರರಾಗಿದ್ದರು ಪಾಪನಾಯ್ಕ. ಸುಮಾರು ಒಂದು ವರ್ಷದಿಂದ ಈ ಕೆಲಸ ಮಾಡುತ್ತಿದ್ದರು. ಇದೆ ಕೆಲಸದಲ್ಲಿದ್ದಾಗ ಕರೋನಾಗೆ ತುತ್ತಾಗಿ ಮೃತರಾದರು. ಕರೋನ ಡ್ಯೂಟಿ ವೇಳೆ ಸೋಂಕು ಕರೋನ … Read more

ಕಾಂಗ್ರೆಸ್ ಪಕ್ಷದ ಕರೋನ ವಾರಿಯರ್ಸ್ಗೆ ಬಾಂಡ್, ಆರೋಗ್ಯ ಅಭಯ ಹಸ್ತ ಯಶಸ್ವಿ

181020 Congress Covid Bond for Warriors 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಅಕ್ಟೋಬರ್ 2020 ಕಾಂಗ್ರೆಸ್ ಪಕ್ಷ ಕೊರೊನಾ ನಿರ್ಮೂಲನೆಗಾಗಿ ‘ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್‍.ಎಸ್.ಸುಂದರೇಶ್, ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ವಾರಿಯರ್ಸ್‍ಗಳಾಗಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಪರೀಕ್ಷೆ, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಬಗ್ಗೆ ತಿಳಿವಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೇವೆ ನಿರ್ವಹಿಸುತ್ತಿರುವ … Read more

GOOD NEWS | ದೇಶದಲ್ಲೇ ಮೊದಲು, ಮೆಗ್ಗಾನ್ ಆಸ್ಪತ್ರೆಯ ಕರೋನ ವಾರ್ಡ್‍ನಲ್ಲಿ ಮತ್ತೊಂದು ವಿಭಿನ್ನ ಪ್ರಯೋಗ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2020 ಕೋವಿಡ್ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಸಲುವಾಗಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಆಸ್ಪತ್ರೆಯೊಂದರ ಕೋವಿಡ್‍ ವಾರ್ಡ್‍ನಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಗ್ರಂಥಾಲಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಷಡಾಕ್ಷರಿ, ಗ್ರಂಥಾಲಯದಿಂದ ಕೋವಿಡ್ ರೋಗಿಗಳ ಮಾನಸಿಕ ಒತ್ತಡ ದೂರವಾಗುವುದಲ್ಲದೆ ವಿಶೇಷ ಪುಸ್ತಕಗಳ ಓದಿನಿಂದ ಜ್ಞಾನವೂ ಹೆಚ್ಚಾಗುವುದು ಎಂದರು. … Read more

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕರೋನ ಪಾಸಿಟಿವ್

111020 Kagodu Thimmappa General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2020 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಗರದಲ್ಲಿದ್ದ ವೇಳೆ ಕಾಗೋಡು ತಿಮ್ಮಪ್ಪ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಕೂಡಲೆ ಅವರನ್ನು ಬೆಂಗಳೂರಿಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಕಾಗೋಡು ತಿಮ್ಮಪ್ಪ ಅವರಿಗೆ ಜ್ವರ ಕಡಿಮೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶಿವಮೊಗ್ಗ … Read more

ಶಿವಮೊಗ್ಗದ ಮತ್ತೊಬ್ಬ ಶಾಸಕರಿಗೆ ಕರೋನ ಪಾಸಿಟಿವ್, ಮನೆಯಲ್ಲೇ ಚಿಕಿತ್ಸೆ

KB Ashok Naik BJP MLA Shimoga Rural 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಅಕ್ಟೋಬರ್ 2020 ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರಿಗೆ ಕರೋನಾ ಪಾಸಿಟಿವ್ ಬಂದಿದೆ. ಅವರು ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಪೇಜಲ್ಲಿ ಬರೆದುಕೊಂಡಿರುವ ಅವರು, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ 2ನೆಯ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದರು. ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕದಲ್ಲಿದ್ದ ಎಲ್ಲರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ. ಶಿವಮೊಗ್ಗ … Read more

GOOD NEWS | ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‌ನಲ್ಲಿ ಡಿಫರೆಂಟ್ ಪ್ರಯೋಗ

011020 Sagara Hospital Corona Ward Library 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020 ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‍ನಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆ ನೌಕರರು ಗ್ರಂಥಾಲಯ ಆರಂಭಿಸಿ, ಕರೋನ ಸೋಂಕಿತರಿಗೆ ಚಿಕಿತ್ಸೆ ವೇಳೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಮನೋಲ್ಲಾಸ ನೀಡುವ ಪುಸ್ತಕಗಳು ಗ್ರಂಥಾಲಯದಲ್ಲಿ ಮನೋಲ್ಲಾಸ ನೀಡುವ ಪುಸ್ತಕಗಳನ್ನು ಇರಿಸಲಾಗುತ್ತಿದೆ. ಚಿಕಿತ್ಸೆಗೆ ದಾಖಲಾದವರು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ. ಇದರಿಂದ ಚಿಕಿತ್ಸೆ ಅವಧಿಯಲ್ಲಿ ಬೇಸರ ಕಳೆಯಲಿದೆ. ಅಲ್ಲದೆ ಅನ್ಯ ಯೋಚನೆಗಳಿಂದ ಮಾನಸಿಕವಾಗಿ ಕುಗ್ಗುವುದು ತಪ್ಪಲಿದೆ. ಎಂಎಲ್‍ಎ, … Read more

ಶಿವಮೊಗ್ಗ ನಗರದ 11 ಕಾಲೇಜಿನಲ್ಲಿ ಭಾನುವಾರ ಕೆಸೆಟ್ ಪರೀಕ್ಷೆ

Kuvempu-University

ಶಿವಮೊಗ್ಗ ಲೈವ್.ಕಾಂ | SHANKARAGATTA NEWS | 26 ಸೆಪ್ಟಂಬರ್ 2020 ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ, ಕೆಸೆಟ್-2020 (KSET-2020) ಪರೀಕ್ಷೆಯು, ಸೆಪ್ಟೆಂಬರ್ 27ರಂದು ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ 11 ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ. ಶಿವಮೊಗ್ಗ ನಗರದ 11 ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಅಭ್ಯರ್ಥಿಗಳು ಪ್ರವೇಶ ಪತ್ರ, ಭಾವಚಿತ್ರವುಳ್ಳ ಗುರುತಿನ ಪತ್ರ ಹಾಗೂ ಕೋವಿಡ್-19 ಸಂಬಂಧ ಮುನ್ನೆಚ್ಚರಿಕೆಯೊಂದಿಗೆ ಹಾಜರಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕೆಸೆಟ್ ಸಂಯೋಜನಾಧಿಕಾರಿ‌ … Read more

ಕರೋನಾಗೆ ತುತ್ತಾಗಿದ್ದ ಶಿವಮೊಗ್ಗದ ಪೊಲೀಸ್ ಎಎಸ್ಐ ಸಾವು

260920 ASI Manjunath Dies of Corona 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಕರೋನಾಗೆ ತುತ್ತಾಗಿದ್ದ ಶಿವಮೊಗ್ಗದ ಪೊಲೀಸ್ ಅಧಿಕಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಲವು ವರ್ಷ ಶಿವಮೊಗ್ಗದ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಎಎಸ್‍ಐ ಮಂಜುನಾಥ್ ಮೃತರು. ಎಎಸ್‍ಐ ಮಂಜುನಾಥ್ (58), ಅವರು ಶಿವಮೊಗ್ಗದ ಸಿಇಎನ್‍ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ದಿನದ ಹಿಂದೆ ಕರೋನ ಸೋಂಕಿಗೆ ತುತ್ತಾಗಿದ್ದ ಮಂಜುನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಮಂಜುನಾಥ್ ಅವರು ಮೃತರಾಗಿದ್ದಾರೆ. ಶಿವಮೊಗ್ಗದ … Read more

ಮಾಸ್ಕ್ ಧರಿಸದವರಿಗೆ ಶಿವಮೊಗ್ಗ ಪೊಲೀಸರಿಂದ ದಂಡದ ಬಿಸಿ, ಎಷ್ಟು ಕೇಸ್ ದಾಖಲಿಸಲಾಗಿದೆ? ವಿಧಿಸಲಾದ ದಂಡವೆಷ್ಟು?

police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಕರೋನ ವ್ಯಾಪಕವಾಗಿ ಹರಡುತ್ತಿದೆ. ಹಾಗಿದ್ದೂ ಮಾಸ್ಕ್ ಧರಿಸದೆ ಓಡಾಡುವವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ದಂಡ ಹಾಕುತ್ತಿದ್ದಾರೆ. ಜಿಲ್ಲೆಯಾದ್ಯಂತ ಹಲವು ಕಡೆ  ದಿಢೀರ್ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹಲವರಿಗೆ ದಂಡ ಹಾಕಿದ್ದಾರೆ. ಸೆಪ್ಟೆಂಬರ್ 24 ಮತ್ತು 25ರಂದು ಕಾರ್ಯಾಚರಣೆ ನಡೆಸಿ ಒಟ್ಟು 1225 ಪ್ರಕರಣ ದಾಖಲಿಸಿ, 1,84,600 ರೂ. ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 24ರಂದು 477 ಪ್ರಕರಣ ದಾಖಲಿಸಿ, 81,400 … Read more

ಇನ್ನು 15 ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ ವ್ಯಾಪಕ ಕರೋನ ಪರೀಕ್ಷೆ, ಎಲ್ಲೆಲ್ಲಿ ಪರೀಕ್ಷೆಯಾಗುತ್ತೆ? ದಿನಕ್ಕೆಷ್ಟು ಪರೀಕ್ಷೆಯಾಗಬೇಕು?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟಂಬರ್ 2020 ಕರೋನಾ ನಿಯಂತ್ರಿಸುವ ಕ್ರಮವಾಗಿ ಮುಂದಿನ 15 ದಿನ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಕರೋನಾ ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸವೇಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್ ಮುಂದಿನ 15 ದಿನ ಪ್ರತಿದಿನ ಕನಿಷ್ಟ 3 ಸಾವಿರ ಜನರಿಗೆ ಕರೋನಾ ಪರೀಕ್ಷೆ ನಡೆಸಬೇಕು. ಪ್ರತಿದಿನ 2 ಸಾವಿರ RTPCR ಮತ್ತು 1 ಸಾವಿರ ರಾಪಿಡ್ ಆಂಟಿಜನ್ … Read more