ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಶಿವಮೊಗ್ಗ ಮಾಜಿ ಎಂಎಲ್ಎ

181218 Yedyurappa at Shivamogga BSY 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಸೆಪ್ಟಂಬರ್ 2020 ಕರೋನ ನೆಪದಲ್ಲಿ ಸಾಮಾನ್ಯ ಕಾಯಿಲೆ ಹೊಂದಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಹಾಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಐಸಿಯು ಕೊರತೆ ಇದೆ. ಕರೋನ ಪರೀಕ್ಷೆ ನೆಪದಲ್ಲಿ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿಲ್ಲ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕಿದೆ. … Read more

ಕರೋನ ಕಾರಣದಿಂದ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಭದ್ರಾವತಿಯಲ್ಲಿ ಮೆಸ್ಕಾಂ ಶಾಕ್

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟಂಬರ್ 2020 ಕರೋನ ನೆಪದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರಿಗೆ ಮೆಸ್ಕಾಂ ಶಾಕ್ ನೀಡಿದೆ. ಭದ್ರಾವತಿಯಲ್ಲಿ ಬಿಲ್ ಪಾವತಿಸದ ಗ್ರಾಹಕರ ವಿದ್ಯುತ್ ಕಡಿತ ಮಾಡುವ ಎಚ್ಚರಿಕೆ ನೀಡಿದೆ. ಕರೋನ ಕಾರಣ ಮೆಸ್ಕಾಂನಲ್ಲಿ ಕಂದಾಯ ವಸೂಲಾತಿ ಕುಂಠಿತವಾಗಿದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರು ಕೂಡಲೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದೆ. ಒಂದು ವೇಳೆ ಬಿಲ್ ಪಾವತಿಸದಿದ್ದರೆ, ಸೆಪ್ಟೆಂಬರ್ 21ರಿಂದ 30ರವರೆಗೆ ಸಾಮೂಹಿಕವಾಗಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ … Read more

ಭದ್ರಾವತಿ ಶಾಸಕ ಸಂಗಮೇಶ್ವರ್ ಅವರಿಗೆ ಕರೋನ ಪಾಸಿಟವ್

BK Sangameshwara Bhadravathi BDVT 1

ಶಿವಮೊಗ್ಗ ಲೈವ್.ಕಾಂ | BHADRAVATHI / SHIMOGA NEWS | 20 ಸೆಪ್ಟಂಬರ್ 2020 ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಸಂಗಮೇಶ್ವರ್, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಕುಟುಂಬದ ಕೆಲವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಹಾಗಾಗಿ ಶಾಸಕ ಸಂಗಮೇಶ್ವರ್ ಅವರ ಮನೆಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಮಾಧ್ಯಮಗಳಿಗೆ ಫೋನ್ ಮೂಲಕ ಪ್ರತಿಕ್ರಿಯೆ … Read more

ಶಿವಮೊಗ್ಗದಲ್ಲಿ ಸರಳ ದಸರಾ, ಬನ್ನಿ ಮಂಟಪ್ಪಕ್ಕೆ ಸಚಿವ ಈಶ್ವರಪ್ಪ ಬರಲ್ಲ, ಯಾವೆಲ್ಲ ಆಚರಣೆಗಳಿರ್ತವೆ? ಏನಿರಲ್ಲ?

160920 Eshwarappa Dasara Meeting 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020 ಕರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬ ಆಚರಿಸಲಾಗುವುದು ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕರೋನಾ ಎಲ್ಲೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ನಾವು ಈಗಾಗಲೇ ಹಲವಾರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಜನರನ್ನು ಸೇರಿಸಿ ಕರೋನಾ ಹರಡಲು ನಾವು ಯಾವುದೇ ಕಾರಣಕ್ಕೂ … Read more

ಶಿವಮೊಗ್ಗದ ಇನ್ಸ್‌ಪೆಕ್ಟರ್‌, ನಿವೃತ್ತ ಸಬ್ ಇನ್ಸ್‌ಪೆಕ್ಟರ್‌ ಫೇಸ್ ಬುಕ್ ಹ್ಯಾಕ್, ಸ್ನೇಹಿತರಿಂದ ಹಣಕ್ಕೆ ಡಿಮಾಂಡ್

police cap

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020 ಪೊಲೀಸರ ಫೇಸ್‍ಬುಕ್ ಖಾತೆ ಮೇಲೆ ಖದೀಮರ ಕಣ್ಣು ಬಿದ್ದಿದೆ. ಕೆಲವರ ಫೇಸ್‍ಬುಕ್‍ ಖಾತೆ ಹ್ಯಾಕ್ ಮಾಡಿ, ಇನ್ನೂ ಕೆಲವರ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವರ ಪರಿಚಿತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಖದೀಮರ ಹಾವಳಿಯಿಂದ ಪೊಲೀಸರು ಮುಜುಗರಕ್ಕೀಡಾಗಿದ್ದಾರೆ. ಯಾರೆಲ್ಲರ ಫೇಸ್‍ಬುಕ್‍ ಹ್ಯಾಕ್ ಆಗಿದೆ? ಕೇಸ್ 1 ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಭಯ ಪ್ರಕಾಶ್ ಅವರ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಲಾಗಿದೆ. … Read more

ಇವತ್ತು ಶಿವಮೊಗಕ್ಕೆ ಸಚಿವ ಈಶ‍್ವರಪ್ಪ, ಕರೋನದಿಂದ ಆಯನೂರು ಮಂಜುನಾಥ್ ಗುಣ

140720 KS Eshwarappa Press Meet After Covid test 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಸೆಪ್ಟಂಬರ್ 2020 ಕರೋನ ಸೋಂಕಿನಿಂದ ಗುಣಮುಖರಾಗಿ ಒಂದು ವಾರ ಕ್ವಾರಂಟೈನ್‍ನಲ್ಲಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾರೆ. ಇವತ್ತು ರಾತ್ರಿ ಶಿವಮೊಗ್ಗಕ್ಕೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಕರೋನ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಕ್ವಾರಂಟೈನ್ ಅವಧಿ ಮುಗಿಸಿ ಜಿಲ್ಲೆಗೆ ಹಿಂತಿರುಗುತ್ತಿದ್ದಾರೆ. ಸೆಪ್ಟೆಂಬರ್ 18ರವರೆಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕರೋನ, ಯಾವ್ಯಾವಾಗ ಎಷ್ಟು ಮಂದಿ ಮೃತರಾಗಿದ್ದಾರೆ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟಂಬರ್ 2020 ಶಿವಮೊಗ್ಗದಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾದಂತೆ, ಕೋವಿಡ್‍ನಿಂದ ಮೃತರಾಗುತ್ತಿರುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಭಾನುವಾರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿನಿಂದ ಮೃತರಾದವರ ಸಂಖ್ಯೆ ದ್ವಿಶತಕ ತಲುಪಿದೆ. ಸೆಪ್ಟೆಂಬರ್ 13ರಂದು 6 ಮಂದಿ ಕೋವಿಡ್‍ ಸೋಂಕಿನಿಂದ ಮೃತರಾಗಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೂ ಕರೋನಾಗೆ ಮೃತರಾದವರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಮೊದಲ ಸಾವು ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಕರೋನ ಪಾಸಿಟಿವ್ … Read more

ಅಪ್ಪಾಜಿಗೌಡ ಸಾವಿನ ಕುರಿತು ಮಾಜಿ ಸಿಎಂ ಅನುಮಾನ, ಅವರಿಗೆ ಕರೋನ ಬಂದಿರಲಿಲ್ಲ ಅಂದರು ಅಪ್ಪಾಜಿ ಪುತ್ರ

130920 Kumaraswamy Visit Appaji Gowda House 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನದ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ. ಅಪ್ಪಾಜಿಗೌಡ ಅವರಿಗೆ ಆಗದವರು ಅವರ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಅಪ್ಪಾಜಿಗೌಡ ಅವರ ಪುಣ್ಯ ಸ್ಮರಣೆ ಕಾರ್ಯಕ್ಕೆ ಭದ್ರಾವತಿಗೆ ಆಗಮಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ಪಾಜಿಗೌಡ ಅವರ ಸಾವಿನ ಕುರಿತು ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಜನಪ್ರತಿನಿಧಿಯೊಬ್ಬರಿಗೆ ವೆಂಟಿಲೇಟರ್ ಸಿಗಲಿಲ್ಲ ಅಂದರೆ … Read more

ಶಿವಮೊಗ್ಗದಲ್ಲಿ 10 ಸಾವಿರ ಗಡಿ ದಾಟಿದ ಕರೋನ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯು ಏರಿಕೆ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020 ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನ ಆರ್ಭಟ ಹೆಚ್ಚಾಗುತ್ತಿದೆ. ಈಗ ಹತ್ತು ಸಾವಿರದ ಗಡಿ ದಾಟಿದ ಜಿಲ್ಲೆಗಳ ಪಟ್ಟಗೆ ಶಿವಮೊಗ್ಗ ಸೇರ್ಪಡೆಯಾಗಿದೆ. ಸೆ.9ರಂದು 335 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,333ಕ್ಕೆ ಏರಿಕೆಯಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಸೋಂಕಿತರು? 1454 ಮಂದಿಗೆ ಮನೆಯಲ್ಲಿ ಚಿಕಿತ್ಸೆ ಮನೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದೆ. ಇವತ್ತಿನವರೆಗೆ 1454 ಮಂದಿ ಕರೋನಾಗೆ ಮನೆಯಲ್ಲಿ ಚಿಕಿತ್ಸೆ … Read more

ಭದ್ರಾವತಿಯಲ್ಲಿ ಆಯುಕ್ತರಿಗೆ ಕರೋನ ಪಾಸಿಟಿವ್, ಎರಡು ದಿನ ನಗರಸಭೆ ಬಂದ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 ಸೆಪ್ಟಂಬರ್ 2020 ಆಯುಕ್ತರಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಭದ್ರಾವತಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗುತ್ತಿದೆ. ನಗರಸಭೆ ಆವರಣವನ್ನು ಸ್ಯಾನಿಟೈಸ್ ಮಾಡಿ, ಸೀಲ್‍ಡೌನ್ ಮಾಡಲಾಗಿದೆ. ಕೋವಿಡ್ ಪರೀಕ್ಷೆಗೆ ಒಳಗಾದಾಗ ಆಯುಕ್ತರಿಗೆ ಕರೋನ ಇರುವುದು ದೃಢವಾಗಿದೆ. ಅವರು ತಮ್ಮ ಮನೆಯಲ್ಲೇ 14 ದಿನ ಕ್ವಾರಂಟೈನ್‍ಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗಿದೆ. ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. … Read more