ಸದ್ಯದಲ್ಲೇ ಶಿವಮೊಗ್ಗ ಕೋರ್ಟ್‌ ಕಲಾಪಗಳು ಯು ಟ್ಯೂಬ್‌ನಲ್ಲಿ ನೇರ ಪ್ರಸಾರ, ಯಾವಾಗ ಶುರು?

Shivamogga-Court-Balaraja-Urs-Road

ಶಿವಮೊಗ್ಗ : ಹೈಕೋರ್ಟ್‌ ಕಲಾಪಗಳ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಕಲಾಪಗಳನ್ನು ಇನ್ಮುಂದೆ ಲೈವ್‌ (Live) ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ನ್ಯಾಯಾಲಯದಲ್ಲಿನ ವಿಚಾರಣೆಗಳನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದಾಗಿದೆ. ಶಿವಮೊಗ್ಗ ನ್ಯಾಯಾಲಯದ ಮೂರು ಕೋರ್ಟ್‌ ಹಾಲ್‌ಗಳಲ್ಲಿನ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿ, ಮುಖ್ಯ ನ್ಯಾಯಿಕ ನ್ಯಾಯಾಧೀಶರ ಹಾಲ್‌ ಮತ್ತು ಪ್ರಧಾನ ಸಿವಿಲ್‌ ನ್ಯಾಯಾಧೀಶರ ಹಾಲ್‌ನ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲೈವ್‌ಗೆ ಸಿದ್ಧತೆ ಹೇಗಿದೆ? ಮೂರು … Read more