ಶಿವಮೊಗ್ಗದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಉಪಟಳ

Wild-Elephant-at-veeragarana-byranakoppa

SHIMOGA NEWS, 20 NOVEMBER 2024 : ಶಿವಮೊಗ್ಗ ತಾಲೂಕಿನ ವಿವಿಧೆಡೆ ಪುನಃ ಕಾಡಾನೆಗಳು (Wild Elephant) ಪ್ರತ್ಯಕ್ಷವಾಗಿವೆ. ತೋಟ, ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡಿವೆ. ಶೆಟ್ಟಿಹಳ್ಳಿ ಅಭ್ಯಯಾರಣ್ಯ ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲೂಕಿನ ಹಲವು ಗ್ರಾಮದಲ್ಲಿ ನಿನ್ನೆ ರಾತ್ರಿ ಕಾಡಾನೆಗಳು ದಾಳಿ ಮಾಡಿದ್ದು, ಬೆಳೆ ನಾಶ ಮಾಡಿವೆ. ತಾಲೂಕಿನ ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು, ಅಡಿಕೆ ಗಿಡಗಳನ್ನು ಮುರಿದು, ಕಿತ್ತು ಬಿಸಾಡಿವೆ. ಆಡಿನಕೊಟ್ಟಿಗೆಯ ಗಿರೀಶ್, ಹೊನ್ನಪ್ಪ, ಸಂತೋಷ್ … Read more

ಬೆಂಬಲ ಬೆಲೆಗೆ ಭತ್ತ ಖರೀದಿ, ನ.15ರಿಂದ ರೈತರ ಹೆಸರು ನೋಂದಣಿ

Agriculture-News-Farmer

SHIMOGA, 14 NOVEMBER 2024 : ಕನಿಷ್ಠ ಬೆಂಬಲ ಬೆಲೆಗೆ 2.24 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು (Paddy) ರಾಜ್ಯದ ರೈತರಿಂದ ಖರೀದಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಸಾಮಾನ್ಯ ಭತ್ತಕ್ಕೆ 2300 ರೂ., ಎ  ಗ್ರೇಡ್ ಭತ್ತಕ್ಕೆ 2320 ರೂ. ದರ ನಿಗದಿ ಮಾಡಿದೆ. ನ.15ರಿಂದ ನೋಂದಣಿ ಅರಂಭವಾಗಲಿದೆ. ರೈತರು ಕೃಷಿ ಇಲಾಖೆಯ ಫ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ರೈತರಿಂದ ಕನಿಷ್ಟ ಬೆಂಬಲ ಬೆಲೆಗೆ ಭತ್ತ ಖರೀದಿಸಲು … Read more

ಸಿಗಂದೂರು ಲಾಂಚ್‌, ಹೊಳೆಬಾಗಿಲಲ್ಲಿ ರೈತರಿಂದ ಪ್ರತಿಭಟನೆ, ಕಾರಣವೇನು?

-farmers-protest-against-launch-and-taxi.

SAGARA NEWS, 12 NOVEMBER 2024 : ಸಿಗಂದೂರು ಲಾಂಚ್‌ನಲ್ಲಿ (Launch) ರೈತ ಮುಖಂಡರೊಬ್ಬರ ವಿರುದ್ಧ ಲಾಂಚ್‌ ಮತ್ತು ಟ್ಯಾಕ್ಸಿ ಚಾಲಕರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ (ಹೆಚ್.ಗಣಪತಿಯಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ಹೊಳೆಬಾಗಿಲು ಲಾಂಚ್‌ ತಟದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಆರೋಪವೇನು? ಜಿಲ್ಲಾ ರೈತ ಸಂಘದ ಮುಖಂಡರೊಬ್ಬರು ಹೊಳೆಬಾಗಿಲು ಮೂಲಕ ಬ್ಯಾಕೋಡಿಗೆ ಶನಿವಾರ ಬಂದು, ಪುನಃ ಮರಳುವಾಗ ಅವರ ವಾಹನವನ್ನು ಲಾಂಚ್‌ಗೆ ಹಾಕುವ ವಿಚಾರದಲ್ಲಿ ಸ್ಥಳೀಯ ವಾಹನ ಚಾಲಕರು ಮತ್ತು … Read more

ರೈತರಿಗೆ ಸಹಾಯಧನ, ಎಲೆಚುಕ್ಕೆ ರೋಗದ ಔಷಧಕ್ಕೆ ಅರ್ಜಿ ಆಹ್ವಾನ

Agriculture-News-Farmer

THIRTHAHALLI NEWS, 10 NOVEMBER 2024 : ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿಗೆ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗೆ ಅರ್ಹ ಫಲಾನುಭವಿಗಳಿಂದ ಅಡಿಕೆ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಪಡೆಯಲು ಅರ್ಜಿ (Application) ಆಹ್ವಾನಿಸಲಾಗಿದೆ. ಬೆಳೆಗಳ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚ ನೀಡಲಾಗುತ್ತಿದ್ದು, ನೀರಾವರಿ ಸೌಲಭ್ಯ, ಜಾಬ್ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅಡಿಕೆ, ತೆಂಗು, ಗೇರು, ಮಾವು, ಸಪೋಟ, ಚಕ್ಕೆ, ಲವಂಗ, ಸೀತಾಫಲ, ನುಗ್ಗೆ, ಕೋಕೋ, … Read more

ಕೃಷಿಕ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನ

Agriculture-News-Farmer

SHIMOGA NEWS, 30 OCTOBER 2024 : ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ ಆಸಕ್ತ ರೈತರಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ (Award) ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆತ್ಮ ಯೋಜನೆಯಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ, ವೈಜ್ಞಾನಿಕ ಯಂತ್ರೋಪಕರಣ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಹಸಿರುಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, … Read more

ಲಿಂಗನಮಕ್ಕಿ ಚಲೋ, ಕಾರ್ಗಲ್‌ನಲ್ಲಿ ರೈತರು ಪೊಲೀಸ್‌ ವಶಕ್ಕೆ

Linganamakki-chalo-minister-madhu-bangarappa

SAGARA NEWS, 26 OCTOBER 2024 : ಭೂ ಹಕ್ಕಿಗಾಗಿ ಆಗ್ರಹಿಸಿ ಸಾಗರದಿಂದ ಪಾದಯಾತ್ರೆ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು (Farmers) ಕಾರ್ಗಲ್‌ನಲ್ಲಿ ಪೊಲೀಸರು ಬಂಧಿಸಿದರು. ಇದಕ್ಕು ಮುನ್ನ ಸಚಿವ ಮಧು ಬಂಗಾರಪ್ಪ ರೈತರನ್ನು ಭೇಟಿಯಾಗಿ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಭೇಟಿ, ಮನವಿ ಇನ್ನು, ಕಾರ್ಗಲ್‌ನ ಚೈನ್‌ ಗೇಟ್‌ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ರೈತರನ್ನು ಭೇಟಿಯಾಗಿ ಪ್ರತಿಭಟನೆ ಕೈ ಬಿಡುವಂತೆ ಮನವಿ … Read more

ವಿವಿಧ ಯೋಜನೆ, ರೈತರಿಂದ ಅರ್ಜಿ ಆಹ್ವಾನ

Agricultue-Department-in-Shimoga

SHIMOGA NEWS, 18 OCTOBER 2024 : ಕೃಷಿ ಇಲಾಖೆಯ ಕೃಷಿ (Farmers) ಸಂಸ್ಕರಣೆ ಯೋಜನೆಯಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಶಾವಿಗೆ ಯಂತ್ರ, ಭತ್ತದ ಮಿಲ್, ರೊಟ್ಟಿ ಮಾಡುವ ಯಂತ್ರ ಹಾಗೂ ಸಣ್ಣ ಎಣ್ಣೆ ಗಾಣಗಳು ಸರ್ಕಾರ ಸಹಾಯಧನದಲ್ಲಿ ಲಭ್ಯವಿದೆ. ಇದಕ್ಕೆ ರೈತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ರೈತರು ಸಮೀಪದ  ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ. ಅಲ್ಲಿಯೇ ಅರ್ಜಿ ಸಲ್ಲಿಸಿ … Read more

ಮಲೆನಾಡಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು, ಸತ್ಯಾಗ್ರಹಕ್ಕೆ ದಿನಾಂಕ ಫಿಕ್ಸ್‌

farmers-press-meet-about-sathyagraha

SHIMOGA NEWS, 16 OCTOBER 2024 : ಶರಾವತಿ, ಚಕ್ರಾ, ವಾರಾಹಿ, ಸಾವೆಹಕ್ಲು, ತುಂಗಾ, ಭದ್ರಾ ಅಣೆಕಟ್ಟೆಗಳಿಗೆ ಭೂಮಿ ತ್ಯಾಗ ಮಾಡಿದ ರೈತರಿಗೆ ಸರ್ಕಾರಗಳು ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿವೆ. ಈ ಭಾಗದ ರೈತರ ಭವಿಷ್ಯದ ಮೇಲೆ ತೂಗುಗತ್ತಿ ಇದೆ. ಹಾಗಾಗಿ ಪ್ರತ್ಯೇಕ ರಾಜ್ಯದ ಕೂಗೆದ್ದಿದೆ. ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಬೆಳಗಾವಿ ಸೇರಿದಂತೆ 12 ಜಿಲ್ಲೆಗಳನ್ನು ಒಳಗೊಂಡು ಪ್ರತ್ಯೇಕ ರಾಜ್ಯ (Malnad) ಸ್ಥಾಪನೆಯ ಕೂಗು ಎದ್ದಿದೆ. ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅ.21ರ ಬೆಳಗ್ಗೆ 11 … Read more

ಹಾಲು ಉತ್ಪಾದಕರಿಗೆ ಶಾಕ್‌ ನೀಡಿದ ಶಿಮುಲ್‌, ಖರೀದಿ ದರ ಕಡಿತ

Nandini-Milk-In-Shimoga-Shimul

SHIMOGA NEWS, 2 OCTOBER 2024 : ನಷ್ಟದ ಸುಳಿಗೆ ಸಿಲುಕಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟವು (ಶಿಮುಲ್), ರೈತರಿಂದ ಖರೀದಿಸುವ ಹಾಲಿನ (Milk) ದರವನ್ನು 90 ಪೈಸೆ ಇಳಿಸಿದೆ. ಈ ಕುರಿತು ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಶಿಮುಲ್ 7 ಕೋಟಿ ರೂ. ನಷ್ಟದಲ್ಲಿದೆ. ಅದರಿಂದ ಹೊರಬರಲು ಹಾಲು ಖರೀದಿ ದರ ಇಳಿಸಿದೆ. ನಷ್ಟದಿಂದ ಪಾರಾಗಲು ಹರ ಸಾಹಸ 2023ರಲ್ಲಿ ಹಾಲು ಮಾರಾಟದ ದರವನ್ನು ಮೂರು ರೂಪಾಯಿ ಏರಿಕೆ … Read more

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

VIDHANA-SOUDHA-GENERAL-IMAGE.jpg

JUST MAHITI : ಕೃಷಿ ಆಸಕ್ತ ಪುರುಷ ರೈತರು ಹಾಗೂ ರೈತ ಮಹಿಳೆಯರನ್ನು ಪ್ರೋತ್ಸಾಹಿಸಲು ಹಾಗೂ ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕ ಕೃಷಿ ಪಂಡಿತ ಪ್ರಶಸ್ತಿಗಾಗಿ (Award) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸೆ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಥವಾ ಜಂಟಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಬನಶಂಕರಿ, ಬೆಂಗಳೂರು- 70 ಅಥವಾ ದೂ: 080 2671 159 ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು … Read more