ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

SORABA-NEWS-UPDATE

ಸೊರಬ: ದಂಡಾವತಿ ನದಿಯಲ್ಲಿ ಮೀನು ಹಿಡಿಯಲು (Fishing) ಹೋಗಿದ್ದ ಪಟ್ಟಣದ ಕಾನುಕೇರಿ ಗ್ರಾಮದ ಕುಮಾರ್(40) ಎಂಬುವವರು ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗಿದ ಕುಮಾರ್‌ ಅವರನ್ನು ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ರಾಗಿಗುಡ್ಡ ESI ಆಸ್ಪತ್ರೆಗೆ ಕೇಂದ್ರ ಸಚಿವೆ ಭೇಟಿ, ಗುತ್ತಿಗೆದಾರರನ್ನು ಬ್ಲಾಕ್‌ ಲಿಸ್ಟ್‌ಗೆ ಹಾಕುವ ಎಚ್ಚರಿಕೆ one drowned while fishing

ಶಿವಮೊಗ್ಗದಲ್ಲಿ ಮೀನುಗಾರರಿಂದ ಅರ್ಜಿ ಆಹ್ವಾನ

SHIMOGA-NEWS-UPDATE

ಶಿವಮೊಗ್ಗ: ಮೀನುಗಾರಿಕೆ ಇಲಾಖೆಯು ಜಿಲ್ಲಾ ವಲಯ ಯೋಜನೆಯಡಿ ಮೀನುಗಾರಿಕೆ (Fishing) ಸಲಕರಣೆ, ಕಿಟ್‌, ಫೈಬರ್ ಗ್ಲಾಸ್, ಹರಿಗೋಲು ವಿತರಣೆ, ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿ, ಮೀನುಮರಿ ಖರೀದಿಗೆ ಸಹಾಯ ಯೋಜನೆ ಮತ್ತು ಕೆರೆ ಅಂಚಿನ ಕೊಳಗಳಲ್ಲಿ ಮೀನುಮರಿ ಪಾಲನೆಗೆ ಸಹಾಯ – ಇತ್ಯಾದಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದು, ಇದಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನಿಸಿದೆ. ತಾಲ್ಲೂಕು ಮಟ್ಟದ ಕಚೇರಿಗಳನ್ನು ಸಂಪರ್ಕಿಸಿ, ನೇರವಾಗಿ ಅರ್ಜಿ ಪಡೆದು ಅಥವಾ ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ http://shimoga.nic.in ಮತ್ತು ರಾಜ್ಯ ವಲಯ ಯೋಜನೆಗಳಿಗೆ … Read more

ಶಿವಮೊಗ್ಗದಲ್ಲಿ ಮೀನುಗಾರಿಕೆ ನಿಷೇಧ, ಕಾರಣವೇನು?

Shimoga-News-update

ಶಿವಮೊಗ್ಗ: ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳು (Fishing) ವಂಶಾಭಿವೃದ್ದಿ ಚಟುವಟಿಕೆಗಳು ನಡೆಸಲಿವೆ. ಆದ್ದರಿಂದ ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರಾದ ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

ಹೊಸನಗರದ ಬೆಕ್ಕೋಡಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

Hosanagara taluk name Graphics

SHIVAMOGGA LIVE NEWS | 17 JUNE 2024 HOSANAGARA : ಮೀನು (Fishing) ಹಿಡಿಯಲು ಸ್ನೇಹಿತರ ಜತೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹೊಸನಗರ ತಾಲೂಕಿನ ಬೆಕ್ಕೋಡಿ ಹಿನ್ನೀರು ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪಟ್ಟಣ ಸಮೀಪದ ಯಡಚಿಟ್ಟೆ ಗ್ರಾಮದ ಅಭಿಷೇಕ(25) ಮೃತ ಯುವಕ. ಶರಾವತಿ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ದಡದಲ್ಲಿದ್ದ. ಈ ವೇಳೆ ನೀರಿನಲ್ಲಿ ಮುಳುಗಿದವ ಮೇಲೇಳಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರಾಚರಣೆ ನಡೆಸಿ ಮೃತದೇಹ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಪಟ್ಟಣದ ಪೊಲೀಸ್‌ … Read more

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ವ್ಯಕ್ತಿ ಸಾವು

sagara graphics

SHIVAMOGGA LIVE NEWS | INSTAGRAM | 9 ಏಪ್ರಿಲ್ 2022 ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಕಣಿಕೆ ಗ್ರಾಮದ ಯಲ್ಲಪ್ಪ (55) ಎಂದು ಗುರುತಿಸಲಾಗಿದೆ. ಸಿಗಂದೂರು ಸಮೀಪದ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಯಲ್ಲಪ್ಪ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುತ್ತಿದ್ದಾಗ ತೆಪ್ಪ ಮಗುಚಿಕೊಂಡು, ಯಲ್ಲಪ್ಪ ಮುಳುಗಿ ಸಾವನ್ನಪ್ಪಿದ್ದಾರೆ. ಯಲ್ಲಪ್ಪ ಅವರಿಗಾಗಿ ಶೋಧ ಕಾರ್ಯ ನಡೆಸಲಾಯಿತು. ಶುಕ್ರವಾರ ಅವರ ಮೃತದೇಹ ತೇಲಿ ಬಂದಿದೆ. ಸಾಗರ ಗ್ರಾಮಾಂತರ … Read more