ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು
ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ (Grama Panchayat) ಅಧ್ಯಕ್ಷ ಅಗಸಾಡಿ ಶಾಮಪ್ಪ ವಿರುದ್ದ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಒಟ್ಟು 10 ಸದಸ್ಯ ಬಲದ ಗ್ರಾ.ಪಂ. ಆಡಳಿತದಲ್ಲಿ 9 ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿದ್ದರು. ಬುಧವಾರ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಅವರು ಅವಿಶ್ವಾಸ ನಿರ್ಣಯ ಕುರಿತು ನಡೆಸಿದ ಸಭೆಗೆ 6 ಸದಸ್ಯರು ಹಾಜರಾಗಿ 4 ಸದಸ್ಯರು ಗೈರಾಗಿದ್ದರು. ನಿಯಮದಂತೆ ಅವಿಶ್ವಾಸ ನಿರ್ಣಯ ಸ್ವೀಕಾರಕ್ಕೆ 7 ಸದಸ್ಯರ ಬೆಂಬಲ ಅಗತ್ಯವಾಗಿತ್ತು. 6 ಸದಸ್ಯರು ಮಾತ್ರ ಸಭೆಗೆ … Read more