ಹೆಚ್ಚುವರಿ ಬಡ್ಡಿಗೆ ಆಗ್ರಹ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ, ಕುಟುಂಬದ ವಿರುದ್ಧ ಕೇಸ್
ಶಿವಮೊಗ್ಗ | ಬಡ್ಡಿ ಸಹಿತ ಸಾಲ (LOAN) ತೀರಿಸಿದ್ದರೂ ಹೆಚ್ಚುವರಿ ಬಡ್ಡಿ (INTEREST) ಹಣ ನೀಡುವಂತೆ ಒತ್ತಾಯಿಸಿ, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪ ಸಂಬಂಧ ಕುಟುಂಬವೊಂದರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆಯು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಶೋಕ ಎಂಬವವರಿಂದ 20 ಸಾವಿರ ರೂ. ಸಾಲ ಪಡೆದಿದ್ದರು. ಬಡ್ಡಿ ಸಹಿತ ಸಾಲವನ್ನು ಹಿಂತಿರುಗಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. … Read more