ಗದ್ದೆಯಲ್ಲಿ ಹಾವು ಕಚ್ಚಿ ರೈತ ಸಾವು

Hosanagara-News-Update

ಹೊಸನಗರ: ಹುಲ್ಲು ಕೊಯ್ಯುವಾಗ ಹಾವು ಕಚ್ಚಿ (Snake Bite) ರೈತರೊಬ್ಬರು ಮೃತಪಟ್ಟಿದ್ದಾರೆ. ಹೊಸನಗರ ತಾಲೂಕು ಮುತ್ತೂರು ಗ್ರಾಮದ ಗದ್ದೆಯಲ್ಲಿ ಘಟನೆ ಸಂಭವಿಸಿದೆ. ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರಿನ ರೈತ ಹುಚ್ಚನಾಯ್ಕ (65) ಸಾವಿಗೀಡಾದವರು. ದನಗಳಿಗೆ ಹುಲ್ಲು ಕೊಯ್ದು ತರಲು ಗದ್ದೆಗೆ ಹೋದಾಗ ಹಾವು ಕಚ್ಚಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ ಅಬ್ಬರ, ಇಡೀ ದಿನ ಹೇಗಿರಲಿದೆ ವಾತಾವರಣ? ಗಾಳಿ, ಗುಡುಗು ಇರುತ್ತಾ?

ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ, ಈಶ್ವರ್‌ ಮಲ್ಪೆ ನೇತೃತ್ವದ ಕಾರ್ಯಾಚರಣೆ

Poornesh-found-in-the-lake-by-eshwar-malpe-team

ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ (Youth) ಶವವಾಗಿ ಪತ್ತೆಯಾಗಿದ್ದಾರೆ. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ. ಉಕ್ಕಡ ಮಗುಚಿ ಪೂರ್ಣೇಶ್‌ (22) ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ ಮೃತದೇಹ ಹೊರ ತೆಗೆಯಲಾಗಿದೆ. ಮೃತದೇಹ ಕಂಡು ಪೂರ್ಣೇಶ್‌ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಸನಗರ ತಾಲೂಕು ಬಂಟೋಡಿಯಲ್ಲಿ ಉಕ್ಕಡ ಮಗುಚಿ ಪೂರ್ಣೇಶ್ ನಾಪತ್ತೆಯಾಗಿದ್ದರು. ಶರತ್‌ ಮತ್ತು ರಂಜನ್‌ ಪಾರಾಗಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ … Read more

ಹೊಸನಗರದಲ್ಲಿ ಉಕ್ಕಡ ಮಗುಚಿ ಯುವಕ ನಾಪತ್ತೆ, ಸರ್ಕಾರದ ವಿರುದ್ಧ ಸ್ಥಳೀಯರು ಗರಂ, ಹೇಗಾಯ್ತು ಘಟನೆ?

Hosanagara-Sampekatte-Ukkada-incident

ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ಯುವಕ ನೀರುಪಾಲಾಗಿದ್ದಾನೆ (Tragedy). ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೊಸನಗರ ತಾಲೂಕು ಬಂಟೋಡಿಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದ ಮೂವರು ಯುವಕರು ತೆರಳುತ್ತಿದ್ದ ಉಕ್ಕಡ ಮಗುಚಿದೆ. ಪೂರ್ಣೇಶ (22) ಎಂಬ ಯುವಕ ನೀರು ಪಾಲಾಗಿದ್ದಾರೆ. ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು, ನೀರುಪಾಲಾದ ಯುವಕನ ಶೋಧ … Read more

70 ಕಿ.ಮೀ ದೂರದಿಂದ ಬಂದು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಕಾರಣವೇನು?

Hosanagara-Students-protest-in-Shimoga

ಶಿವಮೊಗ್ಗ: ಕನ್ನಡ ಶಿಕ್ಷಕರನ್ನು ಒದಗಿಸಿ ಎಂದು ಆಗ್ರಹಿಸಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು (Students) 70 ಕಿ.ಮೀ ದೂರದಿಂದ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕನ್ನಡ, ಇಂಗ್ಲೀಷ್‌ ಬರೆಯಲು ಬಾರದ ಉರ್ದು ಶಿಕ್ಷಕರಿಂದ ಕನ್ನಡ ಪಾಠ ಮಾಡಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸನಗರದ ಜೂನಿಯರ್‌ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳ ಮನವಿಯಲ್ಲಿ ಏನಿದೆ? ಶಾಲೆಯಲ್ಲಿ 365 ವಿದ್ಯಾರ್ಥಿಗಳು ಇದ್ದೇವೆ. ಇಬ್ಬರು ಕನ್ನಡ … Read more

ಮನೆಗೆ ನುಗ್ಗಿ ಮಹಿಳೆಯ ಅತ್ಯಾಚರಕ್ಕೆ ಯತ್ನ, ಆರೋಪಿ ಅರೆಸ್ಟ್‌

Crime-News-General-Image

ರಿಪ್ಪನ್‌ಪೇಟೆ: ಮನೆಗೆ ನುಗ್ಗಿ ಮಹಿಳೆಯೊಬ್ಬರ (woman) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ರಿಪ್ಪನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೆ ಗ್ರಾಮದ ಪ್ರಕಾಶ್ (48) ಬಂಧಿತ. ಮಹಿಳೆ ನೀಡಿದ ದೂರಿನ ಅನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಇದನ್ನೂ ಓದಿ » ಕುವೆಂಪು ವಿವಿ ಸ್ನಾತಕೋತ್ತರ ವಿಭಾಗಕ್ಕೆ ಸೇರುವವರಿಗೆ ಗುಡ್‌ ನ್ಯೂಸ್‌ attempt on woman a man arrested

ಶಿವಮೊಗ್ಗ ಜಿಲ್ಲೆಯ ಮತ್ತೊಂದು ಡ್ಯಾಮ್‌ ಭರ್ತಿ, 7 ವರ್ಷದ ಬಳಿಕ ಗೇಟ್‌ಗಳು ಓಪನ್‌

Mani-dam-gates-opened-at-hosanagara.

ಹೊನಸಗರ: ಮಾನಿ ಜಲಾಶಯ (DAM) ಭರ್ತಿಯಾಗಿದ್ದು ಕ್ರಸ್ಟ್‌ ಗೇಟುಗಳನ್ನು ಮೇಲೆತ್ತಿ ನೀರು ಹೊರ ಬಿಡಲಾಯಿತು. 37 ವರ್ಷದಲ್ಲಿ ಇದು 5ನೇ ಬಾರಿ ಡ್ಯಾಮ್‌ ಭರ್ತಿಯಾಗಿದೆ. ಜಲಾಶಯದ ಪೂರ್ಣ ಮಟ್ಟ 594.36 ಮೀಟರ್‌. ಬುಧವಾರ ಬೆಳಗ್ಗೆ ನೀರಿನ ಮಟ್ಟ 594.23 ಮೀಟರ್‌ಗೆ ತಲುಪಿದ ಹಿನ್ನೆಲೆ ಮೂರು ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡಲಾಯಿತು. 2500 ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಲಾಯಿತು. 5ನೇ ಬಾರಿ ಡ್ಯಾಮ್‌ ಬಿಡುಗಡೆ ವಿದ್ಯುತ್‌ ಉತ್ಪಾದನೆಗೆ ಸೀಮಿತವಾಗಿ 1988ರಲ್ಲಿ ಮಾನಿ ಜಲಾಶಯ ನಿರ್ಮಿಸಲಾಗಿದೆ. ಈ … Read more

48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರು ಅರೆಸ್ಟ್‌, ಲಕ್ಷ ಲಕ್ಷದ ಚಿನ್ನಾಭರಣ ಸೀಜ್‌, ಎಲ್ಲೆಲ್ಲಿ ಕದ್ದಿದ್ದರು?

Nagara-Police-nab-two-inter-district-thieves

ಹೊಸನಗರ: ಕಳ್ಳತನವಾದ 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು (Thieves) ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಮಗಾರ ಓಣಿಯ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತರು. ಲಕ್ಷ ಲಕ್ಷದ ಚಿನ್ನಾಭರಣ, ನಗದು ಕದ್ದಿದ್ದರು ಹೊಸನಗರದ ನಿಲ್ಸ್‌ಕಲ್‌ ಸಮೀಪದ ಕಬಳೆ ಗ್ರಾಮದ ರಿಚರ್ಡ್‌ ಡಿಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ … Read more

ಶಾರ್ಟ್‌ ಸರ್ಕಿಟ್‌, ಧಗಧಗ ಹೊತ್ತು ಉರಿದ ಲಕ್ಷಾಂತರ ಮೌಲ್ಯದ ವಸ್ತುಗಳು

Short-circuit-at-Hosanagara

ಹೊಸನಗರ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ (Short Circuit) ಮನೆಯೊಂದು ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಹೊಸನಗರ ತಾಲ್ಲೂಕು ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದ ಮನೆಯಲ್ಲಿ ಘಟನೆ ಸಂಭವಿಸಿದೆ. ಲಕ್ಷ್ಮಣ್ ಗೌಡ ಅವರ ಒಡೆತನದ ಮನೆಯಲ್ಲಿ ಶೇಷ ಪವನ್ ಮತ್ತು ಪ್ರತಿಭಾ ದಂಪತಿ ಬಾಡಿಗೆಗೆ ವಾಸವಾಗಿದ್ದರು. ದಂಪತಿ ಹೊರಗೆ ಹೋಗಿದ್ದಾಗ ಶಾರ್ಟ್ ಸರ್ಕಿಟ್ ಉಂಟಾಗಿ ಮನೆಗೆ ಬೆಂಕಿ ತಗುಲಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವ ವಿಮೆ ಬಗ್ಗೆ … Read more

ಹುಲಿಕಲ್‌, ಮಾಸ್ತಿಕಟ್ಟೆಯಲ್ಲಿ ಮಳೆಯೋ ಮಳೆ, ಹೊಸನಗರ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

hulikal-ghat-during-rainy-season.

ಹೊಸನಗರ: ತಾಲೂಕಿನಲ್ಲಿ ಪುನಃ ಮಳೆ ಬಿರುಸಾಗಿದೆ. ಕಳೆದ 24 ಗಂಟೆಯಲ್ಲಿ ಹೊಸನಗರದ ವಿವಿಧೆಡೆ ನೂರು ಮಿಲಿ ಮೀಟರ್‌ಗಿಂತಲು ಹೆಚ್ಚಿನ ಮಳೆಯಾಗಿದೆ (Rain). ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಇವತ್ತು ಆರೆಂಜ್‌ ಅಲರ್ಟ್‌, ಮೂರು ತಾಲೂಕಿನಲ್ಲಿ ಜೋರು ಮಳೆ, ಎಲ್ಲೆಲ್ಲಿ ಹೇಗಿದೆ ವಾತಾವರಣ? ಮಾನಿ ವ್ಯಾಪ್ತಿಯಲ್ಲಿ 160 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 127 ಮಿ.ಮೀ, ಹುಲಿಕಲ್‌ನಲ್ಲಿ 201 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 178 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 135 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 112 ಮಿ.ಮೀ ಮಳೆಯಗಿದೆ. ಇವತ್ತೂ ಜೋರು … Read more

ಹುಲಿಕಲ್‌ ಘಾಟಿಯಲ್ಲಿ ಡಿಸೇಲ್‌ ಖಾಲಿಯಾಗಿ ನಿಂತ KSRTC ಬಸ್‌, ಕೆಲಕಾಲ ಸಂಚಾರ ಅಸ್ತವ್ಯಸ್ತ

Bus-Stops-between-hulikal-ghat-traffic-jam

ಹೊಸನಗರ: ಡಿಸೇಲ್‌ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಹುಲಿಕಲ್‌ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಆಟೋಗಳಿಗೆ ನಿಷೇಧ, ಕಾರಣವೇನು? ಈಗ ಹೇಗಿದೆ ವ್ಯವಸ್ಥೆ? ಶಿವಮೊಗ್ಗ ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹುಲಿಕಲ್‌ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿ ನಿಂತಿತ್ತು. ಘಾಟಿ ರಸ್ತೆ ಕಿರಿದಾಗಿದ್ದು ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರು, ಸಣ್ಣ ಗೂಡ್ಸ್‌ … Read more