ಹೊಸನಗರದಲ್ಲಿ ಮನೆ ಹಿಂಬದಿ ಬಾಗಿಲು ಮುರಿದು ಕಳವು

Hosanagara-Police-Station-Board

HOSANAGARA NEWS, 10 OCTOBER 2024 : ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ (Gold) ಕಳವು ಮಾಡಲಾಗಿದೆ. ಹೊಸನಗರ ತಾಲ್ಲೂಕಿನ ವರಕೋಡು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ಮಂಡಕ್ಕಿ ವ್ಯಾಪಾರಿ ಹನುಮಂತ ಕಾಮತ್ ಅವರು ವ್ಯಾಪಾರಕ್ಕೆ ಹೋಗಿದ್ದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಕಳ್ಳರು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 56 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಉಂಗುರ ಮತ್ತು 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ … Read more

ಸದಾ ನೈತಿಕತೆ ಪಾಠ ಹೇಳುತ್ತಿದ್ದರು, ಈಗ ರಾಜೀನಾಮೆ ನೀಡಲಿ

Home-Minister-Araga-Jnanendra-Press-meet-in-Shimoga.

HOSANAGARA NEWS, 21 SEPTEMBER 2024 : ಸದಾ ನೈತಿಕತೆ ಪಾಠ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ರಾಜೀನಾಮೆ (Resign) ನೀಡಿ ನೈತಿಕತೆ ಪ್ರದರ್ಶಿಸಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ. ಇನ್ನಾದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ಪ್ರಕರಣ ರಾಜ್ಯಪಾಲರ ಬಳಿ ಹೋಗಿ ವಿಚಾರಣೆ ಅನುಮತಿ ಕೊಡುವುದಕ್ಕಿಂತ ಮೊದಲೇ ರಾಜೀನಾಮೆ ನೀಡಿದಿದ್ದರೆ ಅವರ ಇಮೇಜ್ ಹೆಚ್ಚುತ್ತಿತ್ತು. ಆದರೆ ಈಗ … Read more

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಣೆಯಾಗಿದ್ದ ಪತಿ ಹೆಣವಾಗಿ ಪತ್ತೆ

pataguppa-bridge

HOSANAGARA, 6 SEPTEMBER 2024 : ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪತಿ (Husband) ಅತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಹೊಸನಗರ ತಾಲೂಕು ಪಟಗುಪ್ಪ ಸೇತುವೆ ಸಮೀಪ ಇವತ್ತು ಪತಿಯ ಮೃತದೇಹ ಪತ್ತೆಯಾಗಿದೆ. ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರುಳಿಕೊಪ್ಪ ಗ್ರಾಮದ ಸದಾನಂದ ಭಟ್‌ ಅವರ ಮೃತದೇಹ ಪಟಗುಪ್ಪ ಸೇತುವೆ ಸಮೀಪ ಪತ್ತೆಯಾಗಿದೆ. ಹೊಸನಗರ ಪೊಲೀಸರು ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪಟಗುಪ್ಪ ಸೇತುವೆ ಬಳಿ ಕಾರು … Read more

BREAKING NEWS – ಹುಲಿಕಲ್‌ನಲ್ಲಿ ಅಪಘಾತ, ಟ್ರಾಫಿಕ್‌ ಜಾಮ್

trucks-mishap-in-hulikal-ghat-at-hosanagara.

HOSANAGARA, 29 AUGUST 2024 : ಹುಲಿಕಲ್‌ ರಸ್ತೆಯಲ್ಲಿ ಎರಡು ಲಾರಿಗಳು ಅಪಘಾತಕ್ಕೀಡಾಗಿವೆ (MISHAP). ಇದರಿಂದ ಈ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಲಾರಿಗಳು ಅಪಘಾತಕ್ಕೀಡಾಗಿ ರಸ್ತೆ ಮಧ್ಯದಲ್ಲೇ ನಿಂತಿವೆ. ಬೆಳಗ್ಗೆ 5 ಗಂಟೆಯಿಂದ ಈ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸರತಿಯಲ್ಲಿ ನಿಂತಿವೆ. ಇನ್ನು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.‌ ಇದನ್ನೂ ಓದಿ ⇒ ಶಿವಮೊಗ್ಗದ ವಿವಿಧ ಠಾಣೆಯ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, … Read more

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ, ಹೊಸನಗರದಲ್ಲಿ ಹೃದಯವಿದ್ರಾವಕ ಘಟನೆ

Hosanagara-Champakapura-well-issue.

HOSANAGARA, 9 AUGUST 2024 : ಇಬ್ಬರು ಮಕ್ಕಳನ್ನು (Children) ಬಾವಿಗೆ ತಳ್ಳಿ ತಾನು ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ರಾಜೇಶ್‌ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆಗೆ ನಿಖರ ಕಾರಣ … Read more

ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಮೊದಲ ಬಾಗಿನ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

bagina-for-chakra-and-savehaklu.

HOSANAGARA, 1 AUGUST 2024 : ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಬಾಗಿನ (Bagina) ಅರ್ಪಿಸಿದರು. ನಾಲ್ಕು ದಶಕದಲ್ಲಿ ಇದೇ ಮೊದಲ ಬಾರಿ ಇವರೆಡು ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗಿದೆ. ಯಾರೆಲ್ಲ ಏನೇನು ಹೇಳಿದರು?   ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಡಾ. ಧನಂಜಯ ಸರ್ಜಿ, ತಹಶೀಲ್ದಾರ್ ರಶ್ಮೀ ಹಾಲೇಶ್, ವಾರಾಹಿ ಯೋಜನೆ ಕಾಮಗಾರಿ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಬ್ರಹ್ಮಾವರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಹೇಶ್ ಬಿ.ಸಿ, … Read more

ಭೂಮಿಯಲ್ಲಿ 200 ಮೀಟರ್‌ನಷ್ಟು ದೂರ ಬಿರುಕು, ಭೂಕುಸಿತದ ಭೀತಿ

landslide-fear-at-aramanekoppa-at-Hosanagara.

HOSANAGARA, 1 AUGUST 2024 : ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್ಲು ಭಾಗದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಭಾಗದ ಜನರಲ್ಲಿ ಭೂ ಕುಸಿತದ  (Landslide) ಭೀತಿ ಉಂಟಾಗಿದೆ. ಸುಮಾರು 200 ಮೀಟರ್‌ನಷ್ಟು ದೂರದವರೆಗೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೆ ಭೂಮಿ ಕುಸಿಯುತ್ತಿದೆ. ಒಂದು ವೇಳೆ ಭೂಮಿ ಕುಸಿತ ಉಂಟಾದರೆ ಈ ಭಾಗದ ಜನರು ತಮ್ಮೂರಿನಿಂದ ಹೊರ ಬರುವುದೇ ಕಷ್ಟವಾಗಲಿದೆ. ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕೂಡಲೆ ಈ ಕುರಿತು ಗಮನ ಹರಿಸಬೇಕು ಎಂದು … Read more

ಚಕ್ರಾದಲ್ಲಿ ಒಂದೇ ದಿನ 200 ಮಿ.ಮೀ ಮಳೆ, ಹೊಸನಗರದಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳ ಒಳ ಹರಿವು ಎಷ್ಟಿದೆ?

Maani-Dam-in-Hosanagara-Taluk

HOSANAGARA, 31 JULY 2024 : ಹೊಸನಗರ ತಾಲೂಕಿನ ವಿವಿಧೆಡೆ ಮಂಗಳವಾರ ಮಳೆ ಅಬ್ಬರ ಜೋರಾಗಿತ್ತು. ನಗರ ಹೋಬಳಿ ವ್ಯಾಪ್ತಿಯ ಹಲವು ಕಡೆ ಎಡೆಬಿಡದೆ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮಳೆ? ಕಳೆದ 24 ಗಂಟೆಯಲ್ಲಿ ಚಕ್ರಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಚಕ್ರಾ ವ್ಯಪ್ತಿಯಲ್ಲಿ 201 ಮಿ.ಮೀ ಮಳೆಯಾಗಿದೆ. ಮಾನಿ 185 ಮಿ.ಮೀ, ಯಡೂರು 188 ಮಿ.ಮೀ, ಹುಲಿಕಲ್‌ 189 ಮಿ.ಮೀ, ಮಾಸ್ತಿಕಟ್ಟೆ 186 ಮಿ.ಮೀ, ಸಾವೇಹಕ್ಲು 155 ಮಿ.ಮೀ ಮಳೆಯಾಗಿದೆ. ಜಲಾಶಯಗಳ ಒಳ ಹರಿವು ಎಷ್ಟಿದೆ? … Read more

ಹೊಸನಗರದಲ್ಲಿ ಬಿಡುವು ಕೊಡದ ಮಳೆ, ಮನೆ, ತೋಟ, ದೇಗುಲ ಜಲಾವೃತ, ಶಾಲಾ – ಕಾಲೇಜಿಗೆ ರಜೆ

Hosanagara-Heavy-rainfall.

HOSANAGARA, 30 JULY 2024 : ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ (Heavy Rain). ಬಿಡುವು ನೀಡದೆ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಮೂಡಿದೆ. ನಗರದಲ್ಲಿ ನಿರಂತರ ಮಳೆ ನಗರ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ಜನರಲ್ಲಿ ಭಯ ಆವರಿಸಿದೆ. ಜನರು ಮನೆಯಿಂದ ಹೊರ ಬರಲಾಗದಷ್ಟು ರಭಸವಾಗಿ ಮಳೆ ಸುರಿಯುತ್ತಿದೆ. ನಗರ ಹೋಬಳಿ ಸದ್ಯ ನೆರೆಗೆ ತುತ್ತಾಗಿದೆ. ದ್ವೀಪದಂತಾದ ಮನೆ, ದೇಗುಲ ಜಲಾವೃತ ನಗರ ಭಾಗದಲ್ಲಿ ಭಾರಿ ಮಳೆಯಿಂದಾಗಿ … Read more

ರಾತ್ರಿ 3 ಗಂಟೆಗೆ ಕೇಳಿತು ಶಬ್ದ, ಹೊರಗಿನಿಂದ ಲಾಕ್‌ ಆಗಿತ್ತು ಮನೆ ಬಾಗಿಲು, ಕಾರು ಹತ್ತಿ ಹೊರಟವರಿಗೆ ಕಾದಿತ್ತು ಆಘಾತ

Police-Van-Jeep-at-Shimoga-Nehru-Road

SHIKARIPURA, 26 JULY 2024  : ಕೊಟ್ಟಿಗೆಯಲ್ಲಿದ್ದ ದನಗಳನ್ನು (COW) ಕಳವು ಮಾಡುತ್ತಿದ್ದವರನ್ನು ಹಿಡಿಯಲು ಹೋದಾಗ ಕಾರು ಅಪಘಾತಕ್ಕೀಡಾಗಿ ನಾಲ್ವರು ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕು ನೆಲವಾಗಿಲು ಸಮೀಪದ ಹೊಸನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ದನಗಳ್ಳತನಕ್ಕೆ ಯತ್ನ ವೀರಭದ್ರಯ್ಯ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ದನಗಳು ಕೂಗಲು ಆರಂಭಿಸಿದ್ದವು. ವೀರಭದ್ರಯ್ಯ ಅವರು ಮನೆ ಬಾಗಿಲು ತೆರಯಲು ಹೋದಾಗ ಮುಂಬಾಗಿಲು ಹೊರಗಿನಿಂದ ಲಾಕ್‌ ಆಗಿತ್ತು. ಹಿಂಬಾಗಿಲ ಮೂಲಕ ಹೊರ ಹೋದಾಗ … Read more