ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOSANAGARA NEWS, 21 SEPTEMBER 2024 : ಸದಾ ನೈತಿಕತೆ ಪಾಠ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ರಾಜೀನಾಮೆ (Resign) ನೀಡಿ ನೈತಿಕತೆ ಪ್ರದರ್ಶಿಸಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಸವಾಲು ಹಾಕಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ. ಇನ್ನಾದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ಪ್ರಕರಣ ರಾಜ್ಯಪಾಲರ ಬಳಿ ಹೋಗಿ ವಿಚಾರಣೆ ಅನುಮತಿ ಕೊಡುವುದಕ್ಕಿಂತ ಮೊದಲೇ ರಾಜೀನಾಮೆ ನೀಡಿದಿದ್ದರೆ ಅವರ ಇಮೇಜ್ ಹೆಚ್ಚುತ್ತಿತ್ತು. ಆದರೆ ಈಗ ಅವರ ಇಮೇಜ್ ನೆಲಕಚ್ಚಿದೆ ಎಂದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸುಸಂಸ್ಕೃತ, ಭವ್ಯ ಪರಂಪರೆ ಇರುವ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಕೂರಬಾರದು. ಕಳಂಕ ಹೊತ್ತು ಅಧಿಕಾರ ನಡೆಸುವುದು ಸರಿಯಲ್ಲ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ. ವಿಚಾರಣೆ ನಡೆದು ಶುದ್ದರಾಮಯ್ಯ ಆಗಿ ಹೊರಬಂದು ಮತ್ತೆ ಬೇಕಾದರೆ ಸಿಎಂ ಸ್ಥಾನ ಅಲಂಕರಿಸಲಿ ಎಂದರು.
ಇದನ್ನೂ ಓದಿ » ತಿರುಪತಿ ಲಡ್ಡು ವಿವಾದ, ರಾಜ್ಯದಲ್ಲಿ ಎಲ್ಲ ತುಪ್ಪದ ತಪಾಸಣೆ ಆರಂಭ