ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ ಕುಸಿತ, ತಪ್ಪಿತು ದೊಡ್ಡ ಅನಾಹುತ

Building-centring-break-at-hosanagara

SHIVAMOGGA LIVE NEWS | 20 JUNE 2024 HOSANAGARA : ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ (Centering) ಕುಸಿದಿದೆ. ಅದೃಷ್ಟವಶಾತ್‌ ದೊಡ್ಡ ಅನಾಹುತ ತಪ್ಪಿದೆ. ಹೊಸನಗರದ ಖಾಸಗಿ ಬಸ್‌ ನಿಲ್ದಾಣ ಸಮೀಪದ ಘಟನೆ ಸಂಭವಿಸಿದೆ. ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿಯ ಸೆಂಟ್ರಿಂಗ್‌ ಕುಸಿದಿದೆ. ಘಟನೆಯಲ್ಲಿ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್‌ ದೊಡ್ಡ … Read more

ಹೊಸನಗರದಲ್ಲಿ ಕರೆಂಟ್‌ ಶಾಕ್‌, ಕಾರ್ಮಿಕನ ಸ್ಥಿತಿ ಗಂಭೀರ

Hosanagara taluk name Graphics

SHIVAMOGGA LIVE NEWS | 19 JUNE 2024 HOSANAGARA : ವಿದ್ಯುತ್‌ ಮಾರ್ಗ ದುರಸ್ಥಿ ವೇಳೆ ವಿದ್ಯುತ್ ತಗುಲಿ (Shock) ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಹೊಸನಗರ ನಿವಾಸಿ ವಾಸು ಪೂಜಾರಿ ಗಾಯಾಳು. ಗಂಭೀರವಾಗಿ ಗಾಯಗೊಂಡಿರುವ ವಾಸು ಪೂಜಾರಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕಿನ ಸಮಗೋಡು ಸಮೀಪ ದುರಸ್ಥಿ ವೇಳೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೂ ವಿದ್ಯುತ್‌ ತಗುಲಿರುವುದು ಅನುಮಾನ ಮೂಡಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯವೆ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಾರ್ಮಿಕರು ಮೆಸ್ಕಾಂ ಕಚೇರಿಗೆ … Read more

ಹೊಸನಗರದ ಬೆಕ್ಕೋಡಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

Hosanagara taluk name Graphics

SHIVAMOGGA LIVE NEWS | 17 JUNE 2024 HOSANAGARA : ಮೀನು (Fishing) ಹಿಡಿಯಲು ಸ್ನೇಹಿತರ ಜತೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹೊಸನಗರ ತಾಲೂಕಿನ ಬೆಕ್ಕೋಡಿ ಹಿನ್ನೀರು ಪ್ರದೇಶದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪಟ್ಟಣ ಸಮೀಪದ ಯಡಚಿಟ್ಟೆ ಗ್ರಾಮದ ಅಭಿಷೇಕ(25) ಮೃತ ಯುವಕ. ಶರಾವತಿ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ದಡದಲ್ಲಿದ್ದ. ಈ ವೇಳೆ ನೀರಿನಲ್ಲಿ ಮುಳುಗಿದವ ಮೇಲೇಳಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರಾಚರಣೆ ನಡೆಸಿ ಮೃತದೇಹ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಪಟ್ಟಣದ ಪೊಲೀಸ್‌ … Read more

ಲಾಡ್ಜ್‌ನಲ್ಲಿ ವ್ಯಕ್ತಿ ನೇಣಿಗೆ ಶರಣು | ತೀರ್ಥಹಳ್ಳಿ, ಹೊಸನಗರದ ಫಟಾಫಟ್‌ ಸುದ್ದಿ | ಎಲ್ಲೆಲ್ಲಿ ಏನೇನಾಯ್ತು?

THIRTHAHALLI-HOSANAGARA-FATAFAT-NEWS-THUMBNAIL

SHIVAMOGGA LIVE NEWS | 16 JUNE 2024 FATAFAT NEWS : ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ (Taluk) ವಿವಿಧೆಡೆಯ ಫಟಾಫಟ್‌ ಸುದ್ದಿಗಳು ಇಲ್ಲಿದೆ. ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ THIRTHAHALLI : ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಸಾರ್ವಜನಿಕರ ಸಹಕಾರದ ಅಗತ್ಯ. ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೋಮು ಪ್ರಚೋದನೆ ಮಾಡುವ ಹಾಗೂ ನೈತಿಕ ಪೋಲಿಸ್‌ ಗಿರಿ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ … Read more

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಅತಿ ಹೆಚ್ಚು ಮಳೆಯಾದ ಟಾಪ್‌ 10 ಸ್ಥಳಗಳ ಪಟ್ಟಿ ಇಲ್ಲಿದೆ

Rain-at-Shimoga-Kote-Road

SHIVAMOGGA LIVE NEWS | 10 JUNE 2024 RAINFALL NEWS : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ ಜೋರಾಗಿದೆ. ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಮಳೆ ಅಬ್ಬರಿಸುತ್ತಿದೆ. ಜೂ.9ರ ಬೆಳಗ್ಗೆ 8.30ರಿಂದ ಜೂ.10ರಿಂದ ಬೆಳಗ್ಗೆ 8.30ರವರೆಗಿನ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ (Heavy Rain) ಪಟ್ಟಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿದೆ. ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ? ತೀರ್ಥಹಳ್ಳಿಯ ಹೊನ್ನೇತಾಳು – 84 ಮಿ.ಮೀ, ಹೊಸಹಳ್ಳಿ – 41.5 ಮಿ.ಮೀ, ಆರಗ … Read more

ಮೊಬೈಲ್‌ ನೆಟ್‌ವರ್ಕ್‌ಗಾಗಿ ಟವರ್‌ ಏರಿದ ಗ್ರಾಮಸ್ಥರು, ಅಧಿಕಾರಿಗಳು ಸ್ಥಳಕ್ಕೆ ದೌಡು, ಫಿಕ್ಸ್‌ ಆಯ್ತು ಗಡುವು

Protest-for-mobile-network-at-Hosanagara

SHIVAMOGGA LIVE NEWS | 28 MAY 2024 HOSANAGARA : ಬಿಎಸ್‌ಎನ್‌ಎಲ್‌ ಮೊಬೈಲ್‌ ನೆಟ್‌ವರ್ಕ್‌ (NETWORK) ಸಮಸ್ಯೆ ಖಂಡಿಸಿ ಗ್ರಾಮಸ್ಥರು ಟವರ್‌ ಏರಿ ಪ್ರತಿಭಟನೆ ನಡೆಸಿದರು. ಹೊಸನಗರ ತಾಲೂಕು ಮತ್ತಿಮನೆ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿರುವ ಬಿಎಸ್‌ಎನ್‌ಎಲ್‌ ಟವರ್‌ ಏರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು? ಮತ್ತಿಮನೆ, ನಗರ, ಸಂಪೇಕಟ್ಟೆ, ನಿಟ್ಟೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸರಿಯಾಗಿ ಲಭಿಸುತ್ತಿಲ್ಲ. ಕರೆಂಟ್‌ ಹೋದರೆ ನೆಟ್‌ವರ್ಕ್‌ ಕೂಡ ಹೋಗಲಿದೆ. ವಿದ್ಯುತ್‌ ಜನರೇಟರ್‌ ಹಾಳಾಗಿದ್ದರು ಸರಿಪಡಿಸಿಲ್ಲ. … Read more

ನಡು ದಾರಿಯಲ್ಲೆ ಡಿಸೇಲ್‌ ಖಾಲಿಯಾಗಿ ನಿಂತ KSRTC ಬಸ್‌, ಮಳೆಯಲ್ಲಿ ಪ್ರಯಾಣಿಕರ ಪರದಾಟ

KSRTC-Bus-stopped-without-diesel-near-mastikatte.

SHIVAMOGGA LIVE NEWS | 23 MAY 2024 HOSANAGARA : ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ KSRTC ಬಸ್‌ನಲ್ಲಿ ಡಿಸೇಲ್‌ ಖಾಲಿಯಾಗಿ ಮಾರ್ಗ ಮಧ್ಯದಲ್ಲೆ ನಿಂತಿದೆ. ಬುಧವಾರ ಸಂಜೆ ಘಟನೆಯಾಗಿದೆ. ಇದರಿಂದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡುವಂತಾಯಿತು. ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಹೊಸನಗರ ತಾಲೂಕು ಮಾಸ್ತಿಕಟ್ಟೆ ಬಳಿ ಬಸ್‌ನಲ್ಲಿ ಡಿಸೇಲ್‌ ಖಾಲಿಯಾಗಿದೆ. ಸಾರಿಗೆ ನಿಗಮ ಡಿಸೇಲ್‌ಗೆ ವ್ಯವಸ್ಥೆ ಮಾಡದಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮಹಿಳೆಯರು, ಮಕ್ಕಳು, ವೃದ್ಧರು ಮಳೆಯಲ್ಲಿ ನಿಂತು ಖಾಸಗಿ ಬಸ್‌ … Read more

ಕಾರಣಗಿರಿಯಲ್ಲಿ ವೈಭವದ ಸಿದ್ಧಿವಿನಾಯಕ ಸ್ವಾಮಿ ರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

Karanagiri-Siddivinayaka-temple-rathotsava-in-Hosanagara.

SHIVAMOGGA LIVE NEWS | 12 MAY 2024 HOSANAGARA : ಪುರಾಣ ಪ್ರಸಿದ್ಧ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸ್ವಾಮಿ ಮಹಾರಥೋತ್ಸ ಸಂಭ್ರಮದಿಂದ ನಡೆಯಿತು. ಶನಿವಾರ ಅಭಿಜನ್ ಮುಹೂರ್ತದಲ್ಲಿ ದೇವರ ಅದ್ಧೂರಿ ಮಹಾರಥೋತ್ಸವ ನಡೆಯಿತು. ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವರ ರಜತ ರಥೋತ್ಸವ ಮತ್ತು ಮನ್ಮಹಾರಥೋತ್ಸವದಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಜನರು ಆಗಮಿಸಿದ್ದರು. ರಥೋತ್ಸವದ ಹಿನ್ನೆಲೆ ದೇವರ ಉತ್ಸವವು ಪ್ರತಿ ದಿನವೂ ಒಂದೊಂದು ಊರಿಗೆ ಹೋಗಿ ಅಲ್ಲಿ ವಸಂತ ಪೂಜೆ … Read more

ಹೊಟ್ಟೆನೋವು ಅಂತಾ ಸಾಗರದ ಆಸ್ಪತ್ರೆಗೆ ಬಂದ ಮಹಿಳೆಗೆ 2 ಗಂಟೆ ಶಸ್ತ್ರಚಿಕಿತ್ಸೆ, ಹೊರ ಬಂತು ಕೆ.ಜಿ.ಗಟ್ಟಲೆ ಗೆಡ್ಡೆ

Operation-Theater-AI-Image-Medical-Purpose

SHIVAMOGGA LIVE NEWS | 25 APRIL 2024 SAGARA : ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 7 ಕೆ.ಜಿ ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಹೊಸನಗರ ತಾಲೂಕು ಜಯನಗರ ನಿವಾಸಿ ಶಶಿಕಲಾ ಎಂಬುವವರಿಗೆ ಸಾಗರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರು 2 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದರು. ಶಶಿಕಲಾ ಅವರು ಕೆಲವು ಸಮಯ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವುದು ಗೊತ್ತಾಗಿದೆ. ವೈದ್ಯರಾದ ನಾಗೇಂದ್ರಪ್ಪ, ಪ್ರತಿಮಾ, ಶರ್ಮಿತಾ, ಬಿ.ಜಿ.ಸಂಗಮ್, … Read more

ಮೂಲೆಗದ್ದೆ ಮಠ ಬಸ್‌ ಸ್ಟಾಪ್‌ ಬಳಿ ಹಿಟ್‌ ಅಂಡ್‌ ರನ್‌ ಅಪಘಾತ, ಹೇಗಾಯ್ತು ಘಟನೆ?

Hosanagara-Police-Station-Board

SHIVAMOGGA LIVE NEWS | 20 APRIL 2024 HOSANAGARA : ಮದುವೆ ಸಮಾರಂಭಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಗೆ ಪಿಕಪ್‌ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ಹೊಡೆದ ಪಿಕಪ್‌ ವಾಹನ ನಿಲ್ಲಿಸಿದೆ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಟ್ಟೆಮಲ್ಲಪ್ಪ – ಹೊಸನಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸಾಗರದ ಬಡಿಯಪ್ಪ ಮತ್ತು ಹೊಸನಗರದ ಬಿಲಗೋಡಿನ ದಾನಪ್ಪ ಗಾಯಗೊಂಡಿದ್ದಾರೆ. ಮುಂಬಾರಿನಲ್ಲಿ ಸಂಬಂಧಿಯ ಮದುವೆಗೆ ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು. ಮೂಲೆಗದ್ದೆ ಮಠ ಬಸ್‌ ನಿಲ್ದಾಣದ ಬಳಿ ಹಿಂಬದಿಯಿಂದ ಬಂದ ಪಿಕಪ್‌ ವಾಹನ … Read more