ರಾಘವೇ‍ಶ್ವರ ಶ್ರೀ ಪುರ ಪ್ರವೇಶ | ಹೊಸಗುಂದಕ್ಕೆ ಶೃಂಗೇರಿ ಶ್ರೀ | ಮಲ್ಲಾಪುರದಲ್ಲಿ ದೊಡ್ಡ ರಥೋತ್ಸವ

Ramachandrapura-mutt-swamiji-pura-pravesha-hosagunda-temple

SHIVAMOGGA LIVE NEWS | 16 APRIL 2024 ಪುರ ಪ್ರವೇಶಿಸಿದ ರಾಘವೇಶ್ವರ ಶ್ರೀ HOSANAGARA : ರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಿದರು. ಹೊಸನಗರದ ಹೊರವಲಯದ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನ ಬಳಿ ಸ್ವಾಮೀಜಿಯ‌ನ್ನು ಭಕ್ತರು ಸ್ವಾಗತಿಸಿದರು. ತೆರೆದ ರಥದಲ್ಲಿ ಮೆರವಣಿಗೆ ನಡೆಯಿತು. ನಂತರ ರಾಮಚಂದ್ರಪುರ ಮಠಕ್ಕೆ ತೆರಳಿದರು. ಬಸವೇಶ್ವರ ದೇವರ ದೊಡ್ಡ ರಥೋತ್ಸವ ANAVATTI : ಸೊರಬ ತಾಲೂಕು ಆನವಟ್ಟಿ ಸಮೀಪದ ಮಲ್ಲಾಪುರ ಗ್ರಾಮದ ಬಸವೇಶ್ವರ ದೇವರ … Read more

ಕಾಡಿನಲ್ಲಿ ಅಂದರ್‌ ಬಾಹರ್‌, ಪೊಲೀಸರಿಂದ ರೇಡ್‌, 11 ಮಂದಿ ಅರಸ್ಟ್‌

Police-Jeep-With-Light-New.

SHIVAMOGGA LIVE NEWS | 21 MARCH 2024 HOSANAGARA : ಕಾಡಿನಲ್ಲಿ ಇಸ್ಪೀಟ್‌ ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ. 12,400 ರೂ. ನಗದು ವಶಕ್ಕೆ ಪಡೆದಿದ್ದಾರೆ. ಹೊಸನಗರ ತಾಲೂಕು ಅಳಗೇರಿ ಮಂಡ್ರಿ ಗ್ರಾಮದ ಕಾಡಿನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾಡಿನಲ್ಲಿ ಜೂಜಾಟದ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಇನ್ಸ್‌ಪೆಕ್ಟರ್‌ ಗುರಣ್ಣ ಹೆಬ್ಬಾರ್‌ … Read more

ಹರಿದ್ರಾವತಿ, ಎಂ ಗುಡ್ಡೆಕೊಪ್ಪ ಭಾಗದಲ್ಲಿ ಪೊಲೀಸರ ದಾಳಿ, ಐದು ಲಾರಿಗಳು ವಶಕ್ಕೆ

Hosanagara-Police-Station-Board

SHIVAMOGGA LIVE NEWS | 14 FEBRUARY 2024 HOSANAGARA : ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಐದು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಹೊಸನಗರ ಪೊಲೀಸರು ತಾಲ್ಲೂಕಿನ ವಿವಿಧೆಡೆ ದಾಳಿ ನಡೆಸಿದರು. ಹರಿದ್ರಾವತಿ ಮತ್ತು ಎಂ. ಗುಡ್ಡೆಕೊಪ್ಪ ಭಾಗದಲ್ಲಿ ಐದು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ಸ್‌ಪೆಕ್ಟರ್‌ ಗುರಣ್ಣ ಹೆಬ್ಬಾಳ್, ಸಬ್‌ ಇನ್ಸ್‌ಪೆಕ್ಟರ್‌ ಶಿವಾನಂದ್ ಕೋಳಿ, ಸಿಬ್ಬಂದಿ ಅವಿನಾಶ್, ಗಂಗಾಧರ್ ಅವರ ತಂಡ ಕಾರ್ಯಾಚರಣೆ ನಡೆಸಿದೆ. ಇದನ್ನೂ ಓದಿ – ಜಮೀನಿನಲ್ಲಿ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ ಸೋಂಕು ಪಾಸಿಟಿವ್‌

MONKEY-FEVER-KFD-IN-SHIMOGA

SHIVAMOGGA LIVE NEWS | 5 FEBRUARY 2024 SHIMOGA : ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಪಾಸಿಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೆಎಫ್‌ಡಿ ಸಕ್ರಿಯ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 11 ಸೋಂಕಿತರ ಪೈಕಿ 3 ಮಂದಿ ತೀರ್ಥಹಳ್ಳಿ, 8 ಮಂದಿ ಹೊಸನಗರ ತಾಲೂಕಿನವರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸದ್ಯ 13 ಸಕ್ರಿಯ ಪ್ರಕರಣಗಳಿವೆ. ಈವರೆಗೂ … Read more

25 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌

Shimoga District Court

SHIVAMOGGA LIVE NEWS | 3 FEBRUARY 2024 SHIMOGA : 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆ 25 ವರ್ಷದ ಯುವಕನಿಗೆ ಇಲ್ಲಿನ ತ್ವರಿತ ವಿಶೇಷ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣದ ಹಿನ್ನೆಲೆ 2022ರಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ನೊಂದ ಬಾಲಕಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಹೊಸನಗರ … Read more

ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದ ಬಳಿಕ ಮಂಗನ ಕಾಯಿಲೆಗೆ ಮೊದಲ ಬಲಿ, ನಗರ ಹೋಬಳಿಯಲ್ಲಿ ಆತಂಕ

MONKEY-FEVER-KFD-IN-SHIMOGA

SHIVAMOGGA LIVE NEWS | 9 JANUARY 2024 HOSANAGARA : ಮೂರು ವರ್ಷದ ಬಳಿಕ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ (ಕೆಎಫ್‌ಡಿ) ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಹೊಸನಗರ ತಾಲೂಕು ಬಪ್ಪನಮನೆ ಗ್ರಾಮದ ಅನನ್ಯಾ (18) ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅನನ್ಯಾಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ. ಆಕೆ ಸಾವನ್ನಪ್ಪಿದ್ದಾಳೆ. ಹತ್ತು ದಿನದಿಂದ ಜ್ವರ ಬಳಲುತ್ತಿದ್ದಳು ಅನನ್ಯಾಳಿಗೆ ಹತ್ತು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೊಸನಗರದ ಆಸ್ಪತ್ರೆಗೆ ದಾಖಲಾಗಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ … Read more

ಗೋ ಪೂಜೆ ಸಂದರ್ಭ ಚಿನ್ನದ ಸರ ನುಂಗಿದ ಹಸು, ಶಸ್ತ್ರಚಿಕಿತ್ಸೆ

Cow-Swallows-Gold-chain-in-Hoasanagara.webp

SHIVAMOGGA LIVE NEWS | 28 NOVEMBER 2023 HOSANAGARA : ಗೋಪೂಜೆ ಸಂದರ್ಭ ಹಸುವೊಂದು (Cow) ಚಿನ್ನದ ಸರ ನುಂಗಿದ್ದು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ. ಹೊಸನಗರ ತಾಲೂಕು ಮತ್ತಿಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ವಿನಾಯಕ ಉಡುಪ ಅವರ ಸಹೋದರ ಶ್ಯಾಮ್‌ ಉಡುಪ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಈಚೆಗೆ ಗೋ ಪೂಜೆ ಸಂದರ್ಭ ಪೂಜೆಗೆ ಇಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು. ಎಲ್ಲಡೆ ಹುಡುಕಿದ ಬಳಿಕ ಮನೆಯಲ್ಲಿನ ಹಸು (Cow) ನುಂಗಿದೆ ಎಂದು ಕುಟುಂಬದವರು ಖಚಿತಪಡಿಸಿಕೊಂಡಿದ್ದರು. ಇದನ್ನೂ … Read more

ಆರು ವರ್ಷದಿಂದ ಪ್ರೀತಿಸುತ್ತಿದ್ದ ಯುವಕನ ಹೆಸರು ಹೇಳಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ, ಕಾರಣವೇನು?

Hosanagara-Police-Station-Board

SHIVAMOGGA LIVE NEWS | 28 NOVEMBER 2023 HOSANAGARA : ಪ್ರೀತಿಸಿದ್ದ ಯುವಕ (youth) ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಮಾತ್ರೆಗಳನ್ನು ನುಂಗಿ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೊಸನಗರದ ಯುವತಿ ಮತ್ತು ಯುವಕ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಯುವಕ ಸಲುಗೆಯಿಂದ ಇದ್ದ. ಈಗ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ- ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ರಸ್ತೆ ತಡೆ, ಮಾತು ತಪ್ಪಿದ ವಿವಿ ಆಡಳಿತದ … Read more

ರಾಮಚಂದ್ರಾಪುರದಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

crime name image

SHIVAMOGGA LIVE NEWS | 18 NOVEMBER 2023 HOSANAGARA : ಅನಾರೋಗ್ಯದಿಂದ (ill health) ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ರಾಮಚಂದ್ರಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೆ.ಲಕ್ಷ್ಮಣ್‌ (67) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹು ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ್‌ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಖೆ ಮುಂದುವರೆದಿದೆ. ಇದನ್ನೂ ಓದಿ-ಕಾರ್ಮಿಕನ ಕಾಲಿನ 2 ಬೆರಳು ಕಟ್‌, 2 ಕೈ ಕತ್ತರಿಸಲು … Read more

ವೇಗವಾಗಿ ಬಂದು ದಿಢೀರ್‌ ಬ್ರೇಕ್‌ ಹಾಕಿ, ತಿರುಗಿ ನಿಂತ ಕಾರು, ಬೈಕ್‌ಗೆ ಡಿಕ್ಕಿಯಾಗಿ ಸವಾರರಿಗೆ ಗಾಯ

Hosanagara-Police-Station-Board

SHIVAMOGGA LIVE NEWS | 11 NOVEMBER 2023 HOSANAGARA : ಕಾರು (car) ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಗಾಯಗೊಂಡಿದ್ದಾರೆ. ಚಾಲಕ ಅತಿ ವೇಗವಾಗಿ ಕಾರು ಚಲಾಯಿಸಿ ದಿಢೀರ್‌ ಬ್ರೇಕ್‌ ಹಾಕಿದ್ದು, ಕಾರು ತಿರುಗಿ ನಿಂತಿದೆ. ಈ ಸಂದರ್ಭ ಕಾರಿನ ಹಿಂಬದಿಯ ಭಾಗ ಬೈಕ್‌ಗೆ ಡಿಕ್ಕಿಯಾಗಿದೆ. ಹೊಸನಗರದ ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೈಕ್‌ ಸವಾರರಾದ ಮಳವಳ್ಳಿ ಮತ್ತಿಕೊಪ್ಪದ ‍ಶ್ರೀಕಾಂತ್‌ ಮತ್ತು ತಿಮ್ಮಪ್ಪ ಎಂಬುವವರು ಗಾಯಗೊಂಡಿದ್ದಾರೆ. ‍ಬೈಕ್‌ ಸವರಾರರು ಹೊಸನಗರ ಪಟ್ಟಣದಿಂದ ಮನೆಗೆ ಮರಳುತ್ತಿದ್ದರು. ಬಟ್ಟೆಮಲ್ಲಪ್ಪ ಕಡೆಯಿಂದ ರಸ್ತೆಯ ಬಲ … Read more