ಸಂಘದ ಮೀಟಿಂಗ್‌ಗೆ ತೆರಳಿದ್ದ ಮಹಿಳೆ, ಕಾಲೇಜಿನಿಂದ ಮನಗೆ ಬಂದ ಮಗಳು, ಕಾದಿತ್ತು ಆಘಾತ

Agumbe Ghat Home Stay Forest

SHIVAMOGGA LIVE NEWS | 9 JANUARY 2025 ತೀರ್ಥಹಳ್ಳಿ : ಮನೆಯಲ್ಲಿ ಯಾರೂ ಇಲ್ಲದಾಗ ಚಿನ್ನಾಭರಣ (Gold), 200 ರೂ. ನಗದು ಕಳ್ಳತನ ಮಾಡಲಾಗಿದೆ. ಆಗುಂಬೆ ಸಮೀಪದ ಮೇಗರವಳ್ಳಿಯ ಬಾವಿಕೇರಿಯ ಭಾರತಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಭಾರತಿ ಅವರು ಸ್ವಸಹಾಯ ಸಂಘದ ಮೀಟಿಂಗ್‌ಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಮಗಳು ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೆ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮನೆಯಲ್ಲಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌, … Read more

ಹೊಸನಗರದಲ್ಲಿ ಮನೆ ಹಿಂಬದಿ ಬಾಗಿಲು ಮುರಿದು ಕಳವು

Hosanagara-Police-Station-Board

HOSANAGARA NEWS, 10 OCTOBER 2024 : ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ (Gold) ಕಳವು ಮಾಡಲಾಗಿದೆ. ಹೊಸನಗರ ತಾಲ್ಲೂಕಿನ ವರಕೋಡು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ಮಂಡಕ್ಕಿ ವ್ಯಾಪಾರಿ ಹನುಮಂತ ಕಾಮತ್ ಅವರು ವ್ಯಾಪಾರಕ್ಕೆ ಹೋಗಿದ್ದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಕಳ್ಳರು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 56 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಉಂಗುರ ಮತ್ತು 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ … Read more

ನಡುರಾತ್ರಿ ಮನೆಗೆ ಬಂದ ಕುಟುಂಬ, ಕೊಠಡಿಯಲ್ಲಿ ಅಡ್ಡಡ್ಡ ಬಿದ್ದಿತ್ತು ಬೀರು

crime name image

SORABA NEWS, 22 SEPTEMBER 2024 : ಕುಟುಂಬದವರೆಲ್ಲ ಈದ್‌ ಮಿಲಾದ್‌ ಮೆರವಣಿಗೆ ನೋಡಲು ತೆರಳಿದ್ದಾಗ ಮನೆಯ ಬಾಗಿಲಿನ ಚಿಲಕ ಮುರಿದು ಕಳ್ಳತನ ಮಾಡಲಾಗಿದೆ. ಕೊಠಡಿಯಲ್ಲಿದ್ದ (ROOM) ಬೀರುವನ್ನು ಅಡ್ಡಲಾಗಿ ಬೀಳಿಸಿ, ಬಾಗಿಲನ್ನು ಮೀಟಿ ತೆಗೆದು ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ತಲಗಡ್ಡೆ ಗ್ರಾಮದ ಮೊಹಮದ್‌ ಸಾದಿಕ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿದ್ದ 70 ಸಾವಿರ ರೂ. ನಗದು, ಚಿನ್ನದ ಸರ, ಉಂಗುರುಗಳು ಸೇರಿ 75 ಸಾವಿರ ರೂ. ಮೌಲ್ಯದ … Read more

ತೀರ್ಥಹಳ್ಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಕಾದಿತ್ತು ಶಾಕ್

Thirthahalli-Police-Station

THIRTHAHALLI NEWS, 20 SEPTEMBER 2024 : ಯಾರೂ ಇಲ್ಲದ ವೇಳೆ ಹಿಂಬಾಗಿಲು ಮುರಿದು ಮನೆಯೊಳಗೆ (House) ನುಗ್ಗಿದ ಕಳ್ಳರು ನಗದು ಮತ್ತು ಬಂಗಾರದ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ಬೈಲುಕೊಪ್ಪದ ಮದನ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮದನ್‌ ಅವರು ಮರಗೆಲಸಕ್ಕೆ ತೆರಳಿದ್ದರು. ಅವರ ತಾಯಿ ಕೂಡ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಯ ಹಿಂಬದಿ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ರೂಮ್‌ನಲ್ಲಿದ್ದ ಬೀರುವಿನ ಬಾಗಿಲನ್ನು ತೆಗೆದು 20 ಸಾವಿರ ರೂ. ನಗದು, … Read more

ಪುರಲೆಯಿಂದ ಫೋನ್‌ ಕಾಲ್‌‌, ಹೊನ್ನಾಳಿಗೆ ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್‌, ಕೂಡಲೆ ಶಿವಮೊಗ್ಗಕ್ಕೆ ದೌಡು

crime name image

SHIVAMOGGA LIVE NEWS | 25 APRIL 2024 SHIMOGA : ಮನೆಯೊಂದರ ಬಾಗಲಿನ ಬೀಗ ಒಡೆದು ನಗದು, ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಪುರಲೆಯ ಒಕ್ಕಲಿಗ ರಸ್ತೆಯ ನಿವಾಸಿ ಸುರೇಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸುರೇಶ್‌ ಅವರು ಕುಟುಂಬದೊಂದಿಗೆ ಹೊನ್ನಾಳಿಯ ಸಂಬಂಧಿ ಮನೆಗೆ ತೆರಳಿದ್ದರು. ಆಗ ಮನೆಯ ಬಾಗಿಲಿನ ಲಾಕ್‌ ಮುರಿಯಲಾಗಿದೆ. ರೂಂನಲ್ಲಿದ್ದ ಬೀರುವಿನ ಬೀಗ ಮುರಿದು 25 ಸಾವಿರ ರೂ. ನಗದು, 10 ಗ್ರಾಂ ತೂಕದ ಬಂಗಾರದ ಸರ, 5 ಗ್ರಾಂ ತೂಕದ ಒಂಗಾರದ … Read more

ಹಾರನಹಳ್ಳಿಯಲ್ಲಿ ಮನೆ ಬಾಗಿಲಿನ ಬೀಗ ಮುರಿದ ಕಳ್ಳರು

Kumsi-Police-Station-Shimoga

SHIVAMOGGA LIVE NEWS | 1 DECEMBER 2023 KUMSI : ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲಿನ ಬೀಗ ಒಡೆದು ಚಿನ್ನಾಭರಣ (jewellery) ಕಳ್ಳತನ ಮಾಡಲಾಗಿದೆ. ಹಾರನಹಳ್ಳಿಯ ಶಶಿಧರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಕುಟುಂಬದವರು ದಾವಣಗೆರೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುವಷ್ಟರಲ್ಲಿ ಕೃತ್ಯ ನಡೆದಿದೆ. ನ.23ರಂದು ಸಂಜೆ 4.30ಕ್ಕೆ ಮನೆಯಿಂದ ತೆರಳಿದ್ದು ಸಂಜೆ 7.30ಕ್ಕೆ ಶಶಿಧರ್‌ ಅವರ ಕುಟುಂಬದವರು ಹಿಂತಿರುಗಿದ್ದಾರೆ. ಆಗ ಮನೆ ಬಾಗಿಲಿನ ಬೀಗ ಒಡೆದಿರುವುದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗಿ 3.20 … Read more

ಒಂದೇ ತಿಂಗಳಲ್ಲಿ ಎರಡು ಬಾರಿ ಬೀರುವಿನಲ್ಲಿದ್ದ ಚಿನ್ನಾಭರಣ ಮಾಯ, ಮಹಿಳೆಗೆ ನಾಲ್ವರ ಮೇಲೆ ಅನುಮಾನ

Tunga-Nagara-Police-Station-Shimoga

SHIVAMOGGA LIVE NEWS | 1 DECEMBER 2023 SHIMOGA : ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದ್ದು (Theft) ಮನೆಗೆ ಪೇಂಟ್‌ ಮಾಡಲು ಬಂದಿದ್ದವರ ಮೇಲೆ ಅನುಮಾನವಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ವಿವೇಕಾನಂದ ಬಡಾವಣೆಯ ಚಂದ್ರಾವತಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನ.9ರಂದು ಬೀರುವಿನಲ್ಲಿದ್ದ ಬಂಗಾರದ ಚೈನ್‌ ಮತ್ತು ಉಂಗುರ ನಾಪತ್ತೆಯಾಗಿತ್ತು. ನ.11ರಂದು ಬಂಗಾರದ ಬಳೆಗಳು, ಚೈನ್‌ ಮತ್ತು ಕಿವಿ ಓಲೆಗಳು ಕಳುವಾಗಿತ್ತು((Theft)). ಚಂದ್ರಾವತಿ ಅವರ … Read more

ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

Tunga-Nagara-Police-Station-Shimoga

SHIVAMOGGA LIVE NEWS | 30 OCTOBER 2023 SHIMOGA : ಕೌಟುಂಬಿಕ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದ್ದ ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ (lecturer) ಒಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ನಗರದ ಎಂ.ಸಿ.ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ. ಸಹ್ಯಾದ್ರಿ ಕಾಲೇಜು ಪ್ರೊಫೆಸರ್‌ ಪವಿತ್ರಾ ಅವರು ತಮ್ಮ ಕುಟುಂಬದ ಕಾರ್ಯಕ್ರಮಕ್ಕಾಗಿ ಅ.24ರಂದು ಮೈಸೂರಿಗೆ ತೆರಳಿದ್ದರು. ಅ.26ರಂದು ಎದುರು ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲು ತೆರೆದುಕೊಂಡಿದೆ. ಆಯುಧದಿಂದ ಮೀಟಿದಂತೆ ಕಾಣುತ್ತಿದೆ ಎಂದು ತಿಳಿಸಿದ್ದರು. ತಾವು ಬರುವವರೆಗೆ ಬಾಗಿಲಿಗೆ ಬೀಗ ಹಾಕಿರುವಂತೆ ಪವಿತ್ರಾ … Read more

ವಿದ್ಯಾನಗರದಲ್ಲಿ ಡಾಕ್ಟರ್‌ ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿದ ಕಳ್ಳರು

Vidyanagara-Smart-city-board

SHIVAMOGGA LIVE NEWS | 30 OCTOBER 2023 SHIMOGA : ವೈದ್ಯರೊಬ್ಬರ (Doctor) ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ನಗದು ಮತ್ತು ಸಿಸಿಟಿವಿ ಕ್ಯಾಮರಾದ ಡಿವಿಆರ್‌ ಕಳ್ಳತನ (Theft) ಮಾಡಿ ಪರಾರಿಯಾಗಿದ್ದಾರೆ. ವಿದ್ಯಾನಗರದಲ್ಲಿ ಘಟನೆ ಸಂಭವಿಸಿದ್ದು ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾನಗರದಲ್ಲಿರುವ ಡಾ. ವಿನಯ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಹಿಂಬದಿಯ ಕಬ್ಬಿಣದ ಗೇಟ್‌ ಮೂಲಕ ಕಳ್ಳರು ಒಳ ನುಗ್ಗಿದ್ದಾರೆ. ಹಿಂಬದಿಯ ಬಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಸುಳಿದ್ದಾರೆ. ಬೆಡ್‌ … Read more

ಮನೆ ಬಾಗಿಲು ಹಾಕಿದಂತೆಯೇ ಇತ್ತು, ರೂಮಿಗೆ ಹೋದಾಗ ಮಾಲೀಕನ ಕುಟುಂಬಕ್ಕೆ ಕಾದಿತ್ತು ಶಾಕ್

Crime-News-General-Image

SHIVAMOGGA LIVE NEWS | 5 MAY 2023 SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (THEFT) ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಶರಾವತಿ ನಗರದ ಮಂಜುನಾಥ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಂಜುನಾಥ ಅವರು ಕುಟುಂಬ ಸಹಿತ ತಮ್ಮ ಸಹೋದರನ ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರಸೀಕೆರೆಗೆ ತೆರಳಿದ್ದರು. ಈ ವೇಳೆ ಕಳ್ಳತನವಾಗಿದೆ (THEFT). … Read more