BREAKING NEWS | ಕಲ್ಲಗಂಗೂರು ಸ್ಪೋಟ ಕೇಸ್, ಪೀಸ್ ಪೀಸ್ ಆಗಿದ್ದ ಮೃತದೇಹದ ಗುರುತು ಏಳು ತಿಂಗಳ ಬಳಿಕ ಪತ್ತೆ

Breaking News Plate

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021 ಶಿವಮೊಗ್ಗ ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರಿ ಸ್ಪೋಟದಲ್ಲಿ ಮೃತಪಟ್ಟಿದ್ದ ಆರನೆ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಪ್ರಕರಣ ಸಂಭವಿಸಿ ಏಳೂವರೆ ತಿಂಗಳ ಬಳಿಕ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಯಾರಿದು ಆರನೇ ವ್ಯಕ್ತಿ? ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಐವರ ಗುರುತು ಪತ್ತೆಯಾಗಿ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿತ್ತು. ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿತ್ತು. ಹಾಗಾಗಿ ಆತನ ಗುರುತು ಪತ್ತೆಯಾಗಿರಲಿಲ್ಲ. ಈಗ … Read more

SHIMOGA | ಆರನೆ ವ್ಯಕ್ತಿಯ ದೇಹ ಹತ್ತು ಭಾಗ, ಗುರುತು ಪತ್ತೆಗೆ 52 ಮಂದಿಯ ಡಿಎನ್ಎ ಮಾದರಿ ಸಂಗ್ರಹ

220121 Blast At Mattodu Mining 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021 ಕಲ್ಲಗಂಗೂರು ಸ್ಪೋಟ ಕೇಸ್‍ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಗುರುತು ಈತನಕ ಪತ್ತೆಯಾಗಿಲ್ಲ. ಸ್ಪೋಟದಿಂದ ದೇಹ ಛಿದ್ರ ಛಿದ್ರವಾಗಿದ್ದು, ಹತ್ತು ಭಾಗ ಸಿಕ್ಕಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ಇದನ್ನೂ ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಕ್ರಷರ್ ಜಾಗದ ಮಾಲೀಕ, ಆತನ ಮಗ ಅರೆಸ್ಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಸ್ಪೋಟದಲ್ಲಿ ಅರು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಐವರ ಗುರುತು ಸಿಕ್ಕಿದೆ. ಮತ್ತೊಬ್ಬ … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್, ಕ್ರಷರ್ ಜಾಗದ ಮಾಲೀಕ, ಆತನ ಮಗ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021 ಕಲ್ಲಗಂಗೂರು ಸ್ಪೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಕ್ರಷರ್ ಜಾಗದ ಮಲೀಕರನ್ನು ಬಂಧಿಸಲಾಗಿದೆ. ಜಾಗದ ಮಾಲೀಕ ಮತ್ತು ಆತನ ಪುತ್ರನನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಂಕರಗೌಡ ಕುಲಕರ್ಣಿ (76) ಮತ್ತು ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಸ್ಪೋಟಕ ಪರೈಕೆ … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್, ಸ್ಪೋಟಕ ಪೂರೈಕೆ ಮಾಡಿದ್ದ ಅಪ್ಪ, ಮಗ ಮುಂಬೈನಲ್ಲಿ ಅರೆಸ್ಟ್

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021 ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ ಸ್ಪೋಟಕ ಪೂರೈಕೆ ಮಾಡಿದ್ದ ಆಂಧ್ರ ಪ್ರದೇಶದ ಆರೋಪಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಆಂಧ್ರ ಪ್ರದೇಶದ ಅನಂತಪುರದ ಪಿ.ಶ್ರೀರಾಮುಲು (68), ಆತನ ಪುತ್ರ ಪಿ.ಮಂಜುನಾಥ ಸಾಯಿ (36), ಕಲ್ಲಗಂಗೂರಿನ ಕ್ರಷರ್ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ (76), ಆತನ ಪುತ್ರ ಅವಿನಾಶ್ ಕುಲಕರ್ಣಿ (43) ಬಂಧಿತರು. ಮುಂಬೈನಲ್ಲಿ ಸಿಕ್ಕಿಬಿದ್ದ … Read more

SHIMOGA | ಹುಣಸೋಡು ಸ್ಪೋಟ ಕೇಸ್, ಹಾನಿಯಾದ ಮನೆಗಳಿಗೆ ಬರ್ತಾನೆ ಇಲ್ಲ ಅಧಿಕಾರಿಗಳು, ಸಿಕ್ಕಿಲ್ಲ ಪರಿಹಾರ

030221 Nava Karnataka Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021 ಹುಣಸೋಡು ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಲ್ಲಿಕ್ರಶರ್, ಕಲ್ಲುಕ್ವಾರಿ ಸಮೀಪದಲ್ಲೇ ಇರುವ ಹುಣಸೋಡು, ಹೊಸೂರು, ಅಬ್ಬಲಗೆರೆ, ಬಸವನಗಂಗೂರು, ಗೆಜ್ಜೇನಹಳ್ಳಿ, ಹನುಮಂತ ನಗರ, ಜಕಾತಿಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಕೆಲ ಮನೆಗಳ ಛಾವಣಿ ಹಾಳಾಗಿದ್ದು, ಕೆಲವು ಮನೆಗಳ ಟೀವಿ, ಎಲೆಕ್ಟ್ರಾನಿಕ್ ಉಪಕರಣ ಸ್ಪೋಟದಿಂದ ಹಾನಿಗೊಳಗಾಗಿವೆ … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್ ತನಿಖೆ ಕಂದಾಯ ಇಲಾಖೆ ಕಾರ್ಯದರ್ಶಿ ಹೆಗಲಿಗೆ, ಸಿದ್ದರಾಮಯ್ಯ ವಿರೋಧ

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021 ಕಲ್ಲಗಂಗೂರು ಸ್ಪೋಟ ಪ್ರಕರಣದ ತನಿಖೆಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಹೆಗಲಿಗೆ ವಹಿಸಲಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ  ರಾಜ್ಯ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಸರ್ಕಾರದ ನಡೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಧಾನಸಭೆಯಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಇಲಾಖೆ ಕಾರ್ಯದರ್ಶಿಯಿಂದ ತನಿಖೆ ನಡೆಸಲಾಗುತ್ತದೆ. ಇದರ ಜೊತೆಗೆ ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆಯನ್ನು ಮಟ್ಟ … Read more

SHIMOGA | ‘ಕಲ್ಲು ಕ್ವಾರಿಗಳಲ್ಲಿ ಪ್ರಭಾವಿಗಳಿದ್ದಾರೆ, ರಾಜಕಾರಣಿಗಳನ್ನೆ ಆಟ ಆಡಿಸುತ್ತಿದ್ದಾರೆ’

010221 MLC Prasanna Kumar Speaking at Council 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ಕಲ್ಲು ಕ್ವಾರಿಗಳಲ್ಲಿ ಪ್ರಭಾವಿಗಳು ಹೆಚ್ಚಾಗಿದ್ದಾರೆ. ರಾಜಕಾರಣಿಗಳನ್ನೆ ಅವರು ಆಟ ಆಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಆರೋಪಿಸಿದರು. ಕಲ್ಲಗಂಗೂರು ಸ್ಪೋಟ ಪ್ರಕರಣ ಸಂಬಂಧ ವಿಧಾನ ಪರಿಷತ್‍ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಪ್ರಸನ್ನಕುಮಾರ್, ಕಲ್ಲು ಕ್ವಾರಿಯವರು ಎಷ್ಟು ಪ್ರಭಾವಿಗಳಾಗಿದ್ದಾರೆ ಅಂದರೆ, ಈ ಹಿಂದೆ ಜಿಯಾಲಾಜಿಸ್ಟ್ ಒಬ್ಬರನ್ನು ವರ್ಗಾಯಿಸಲಾಗಿತ್ತು. ಆದರೆ ಅವರು ಅಧಿಕಾರ ಬಿಟ್ಟುಕೊಡಲು ಒಂದು ವರ್ಷ ತೆಗೆದುಕೊಂಡಿದ್ದರು. ಅಲ್ಲಿಯ ತನಕ ಅವರು ಅಧಿಕಾರ … Read more

SHIMOGA |ಕಲ್ಲಗಂಗೂರು ಸ್ಪೋಟ ಕೇಸ್, ಪರಿಷತ್‌ನಲ್ಲಿ ಆಯನೂರು ಮಂಜುನಾಥ್ ಖಡಕ್ ಚರ್ಚೆ

010221 Ayanur Manjunath In Vidhana Parishad 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ಎಲ್ಲೆಂದರಲ್ಲಿ ಸ್ಪೋಟಕ ಸಿಗುವಂತಾಗಿದೆ. ಒಂದು ವೇಳೆ ಆ ಸ್ಪೋಟಕವನ್ನು ಭಯೋತ್ಪಾದಕರು ಬಳಕೆ ಮಾಡಿಕೊಂಡಿದ್ದರೆ ಏನಾಗುತ್ತಿತ್ತು. ಶಿವಮೊಗ್ಗ ನಗರದಲ್ಲಿ ಎಲ್ಲಿಯಾದರೂ ಸ್ಪೋಟ ಸಂಭವಿಸಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ. ಕಲ್ಲಗಂಗೂರಿನ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಸಂಬಂಧ ವಿಧಾನ ಪರಿಷತ್‍ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಒಂದು ವೇಳೆ ಶಿವಮೊಗ್ಗ ನಗರದಲ್ಲಿ ಸ್ಪೋಟ ಸಂಭವಿಸಿದ್ದರೆ ಭಾರಿ ಅನಾಹುತವಾಗುತ್ತಿತ್ತು. … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್, ಸುಧಾಕರ್ ಗೆ ಹೆಸರಲ್ಲಿದ್ದ ಕ್ರಷರ್ ಪರವಾನಗಿ ರದ್ದು

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ಕಲ್ಲಗಂಗೂರು ಸ್ಪೋಟದ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯ ಕ್ರಷರ್ ಪರವಾನಗಿಯನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರದ್ದುಗೊಳಿಸಿದ್ದಾರೆ. ಕ್ರಷರ್‍ ಗೆ ಲೈಸೆನ್ಸ್ ಪಡೆದು, ಸುಧಾಕರ್ ಎಂಬುವವರು ಕ್ವಾರಿ ನಡೆಸುತ್ತಿದ್ದರು. ಇದೆ ಕ್ವಾರಿಯಲ್ಲಿ  ಸ್ಪೋಟ ಸಂಭವಿಸಿ, ಆರು ಮಂದಿ ಸಾವನ್ನಪ್ಪಿದ್ದಾರೆ. ಅವಿನಾಶ್ ಕುಲಕರ್ಣಿ ಎಂಬುವವರಿಂದ ಜಮೀನು ಲೀಸ್‍ಗೆ ಪಡೆದು ಕ್ರಷರ್ ಆರಂಭಿಸಿದ್ದ ಸುಧಾಕರ್, ಪಕ್ಕದಲ್ಲೇ ಅಕ್ರಮವಾಗಿ ಕ್ವಾರಿ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಧಾಕರ್ ಗೆ ನೀಡಲಾಗಿದ್ದ ಕ್ರಷರ್ ಪರವಾನಗಿಯನ್ನು … Read more

SHIMOGA | ಕಲ್ಲಗಂಗೂರು ಸ್ಪೋಟ ಕೇಸ್, ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

270121 Siddaramaiah Visit Shimoga Kallagangur Issue 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 JANUARY 2021 ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣವನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದಮರಾಮಯ್ಯ, ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆಗ ಮಾತ್ರ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯ  ಎಂದರು. ಹೆಚ್ಚುವರಿ ಪರಿಹಾರ ನೀಡಬೇಕು ಸ್ಪೋಟ ಪ್ರಕರಣದಲ್ಲಿ ಮೃತರಾದವರಿಗೆ ಸರ್ಕಾರ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. … Read more