BREAKING NEWS – ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಮೊದಲ ಕಂಬಳ ರದ್ದು, ಯಾಕೆ? ಮುಂದೆ ನಡೆಯುತ್ತಾ?

Kambala-to-be-organized-in-Shimoga.

ಶಿವಮೊಗ್ಗ : ಮಲೆನಾಡಿನಲ್ಲಿ ನಿಗದಿಯಾಗಿದ್ದ ಮೊದಲ ಕಂಬಳ ರದ್ದಾಗಿದೆ. ಪ್ರಾಣಿ ದಯ ಸಂಘಟನೆ ಕೋರ್ಟ್‌ ಮೊರೆ ಹೋಗಿರುವ ಹಿನ್ನೆಲೆ ಶಿವಮೊಗ್ಗ ಕಂಬಳ (Kambala) ರದ್ದುಗೊಳಿಸಲಾಗಿದೆ. ಕೋರ್ಟ್‌ ತೀರ್ಪಿನ ನಂತರ ತೀರ್ಮಾನ ಕೈಗೊಳ್ಳಲು ಕಂಬಳ ಸಮಿತಿ ನಿರ್ಧರಿಸಿದೆ. ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಏಪ್ರಿಲ್‌ 19 ಮತ್ತು 20ರಂದು ಕಂಬಳ ನಡೆಸಲು ನಿರ್ಧರಿಸಲಾಗಿತ್ತು. ಮೂಡುಬಿದಿರೆ ಮೀಟಿಂಗ್‌ನಲ್ಲಿ ನಿರ್ಧಾರ ಕಳೆದ ಬುಧವಾರ ಮೂಡುಬಿದಿರೆಯ ಸೃಷ್ಟಿ ಗಾರ್ಡನ್‌ನಲ್ಲಿ ಕಂಬಳ (Kambala) ಸಮಿತಿ ಸಭೆ ನಡೆಯಿತು. ಇಲ್ಲಿ ಶಿವಮೊಗ್ಗ ಕಂಬಳ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಏ.19ರಂದು … Read more

ಶಿವಮೊಗ್ಗದಲ್ಲಿ ಕಂಬಳ, ಟ್ರ್ಯಾಕ್‌ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಯಾವಾಗ? ಎಲ್ಲಿ ನಡೆಯುತ್ತೆ?

Press-meet-about-Shimoga-kambala.

SHIVAMOGGA LIVE NEWS, 6 FEBRUARY 2025 ಶಿವಮೊಗ್ಗ : ರಾಜ್ಯದಲ್ಲಿ 25 ಕಂಬಳ ನಡೆಯಲಿದೆ. ಶಿವಮೊಗ್ಗದಲ್ಲಿ ಕೊನೆಯ ಕಂಬಳ (Kambala) ಆಯೋಜಿಸಲಾಗುತ್ತಿದೆ. ಕಂಬಳದ ಟ್ರ್ಯಾಕ್‌ಗೆ ಫೆ.10ರಂದು ಮಧ್ಯಾಹ್ನ 3 ಗಂಟೆಗೆ ಭೂಮಿ ಪೂಜೆ ನಡೆಸಲಾಗುತ್ತದೆ ಎಂದು ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿ ಪ್ರಮುಖರು, ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿಯ ಜಯಲಕ್ಷ್ಮಿ ಪೆಟ್ರೋಲ್‌ ಬಂಕ್‌ ಹಿಂಭಾಗ 16 ಎಕರೆ ಜಾಗದಲ್ಲಿ ಕಂಬಳ ನಡೆಸಲಾಗುತ್ತಿದೆ. ಯಾರೆಲ್ಲ ಏನೆಲ್ಲ ಹೇಳಿದರು? … Read more

ಶಿವಮೊಗ್ಗದಲ್ಲಿಯು ನಡೆಯಲಿದೆ ಕರಾವಳಿಯ ಕಂಬಳ ಸ್ಪರ್ಧೆ, ದಿನಾಂಕ ಫಿಕ್ಸ್‌

Kambala-to-be-organized-in-Shimoga.

SHIMOGA, 11 AUGUST 2024 : ಕರಾವಳಿ ಭಾಗದ ಜನಪದ ಸ್ಪರ್ಧೆ ಕಂಬಳವನ್ನು ಇದೇ ಮೊದಲ ಬಾರಿ ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತಿದೆ. ಪ್ರಸಕ್ತ ಋತವಿನ ಕಂಬಳ ಸ್ಪರ್ಧೆಯ ವೇಳಾಪಟ್ಟಿಯನ್ನು (Time Table) ಕಂಬಳ ಸಮಿತಿ ಪ್ರಕಟಿಸಿದೆ. ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ ಈ ಬಾರಿ ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿಯು ಕಂಬಳ ಆಯೋಜಿಸಲಾಗುತ್ತಿದೆ. ಮೂಡುಬಿದರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ, ಆ.26 ರಿಂದ ಏಪ್ರಿಲ್‌ 19ರವರೆಗೆ ವಿವಿಧೆಡೆ 26 ಕಂಬಳ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. … Read more