ಕೆಲಸೂರಿನಲ್ಲಿ ಚಿರತೆಗಳು ಪ್ರತ್ಯಕ್ಷ, ಮನೆಯಿಂದ ಹೊರ ಬರಲು ಗ್ರಾಮಸ್ಥರಿಗೆ ಆತಂಕ
SHIVAMOGGA LIVE NEWS | 22 NOVEMBER 2023 THIRTHAHALLI : ಕಮ್ಮರಡಿ ಸಮೀಪದ ಕೆಸಲೂರು ಗ್ರಾಮದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲಸೂರು ಸಮೀಪದ ಅಕೇಶಿಯ ನೆಡುತೋಪಿನಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಹಾಗಾಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ನಡೆದು ಹೋಗಲು ಮತ್ತು ತೋಟ, ಗದ್ದೆಗೆ ಹೋಗಲು ಜನರು ಭಯ ಪಡುತ್ತಿದ್ದಾರೆ. ಇನ್ನು, ಜಾನುವಾರುಗಳನ್ನು ಮೇಯಲು ಕೊಟ್ಟಿಗೆಯಿಂದ ಹೊರ ಬಿಡಲಾಗದೆ ಚಿಂತೆಗೀಡಾಗಿದ್ದಾರೆ. ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್ ಅವರ … Read more