ಒಂದೇ ಒಂದು ವಾಟ್ಸಪ್‌ ಮೆಸೇಜ್‌ನಿಂದಾಗಿ ₹3,65,892 ಹಣ ನಾಪತ್ತೆ, ಆಗಿದ್ದೇನು?

whatsapp-general-image

ಶಿವಮೊಗ್ಗ: ಟ್ರಾಫಿಕ್ ಚಲನ್ (Traffic Challan) ಪಾವತಿಸುವ ನೆಪದಲ್ಲಿ ಮೊಬೈಲ್‌ಗೆ ಎಪಿಕೆ (APK) ಫೈಲ್ ಕಳುಹಿಸಿ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ನಿವೃತ್ತ ಉದ್ಯೋಗಿಯ ವಾಟ್ಸಾಪ್ ನಂಬರ್‌ಗೆ ಅಪರಿಚಿತ ನಂಬರ್‌ನಿಂದ Traffic Challan ಹೆಸರಿನ ಪಿಡಿಎಫ್ ಮಾದರಿಯ ಎಪಿಕೆ ಫೈಲ್ ಬಂದಿತ್ತು. ಚಲನ್ ಮಾಹಿತಿಗಾಗಿ ದೂರುದಾರರು ಆ … Read more

ಮೆಗ್ಗಾನ್‌ ಆಸ್ಪತ್ರೆ ಎಮರ್ಜನ್ಸಿ ವಾರ್ಡ್‌ ಮುಂದೆ ಸುಸ್ತಾಗಿ ಬಿದ್ದ ವ್ಯಕ್ತಿ ಸಾವು, ಪತ್ತೆಯಾಗದ ಗುರುತು

160125 mc gann hospital general image

ಶಿವಮೊಗ್ಗ: ಡಿಸೆಂಬರ್‌ 28ರಂದು ಮೆಗ್ಗಾನ್ ಆಸ್ಪತ್ರೆಯ (McGann Hospital) ಎಮರ್ಜನ್ಸಿ ವಾರ್ಡ್ ಎದುರು ಸುಸ್ತಾಗಿ ಬಿದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.   ಅಂದಾಜು 35 ವರ್ಷದ ವ್ಯಕ್ತಿಯು ಮೆಗ್ಗಾನ್‌ ಆಸ್ಪತ್ರೆಯ ಎಮರ್ಜನ್ಸಿ ವಾರ್ಡ್‌ ಮುಂಭಾಗ ಸುಸ್ತಾಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪರಿಶೀಲಿಸಿದಾಗ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವ್ಯಕ್ತಿಯು 5.5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಮೈಮೇಲೆ ತಿಳಿಹಸಿರು ಕಂದು ಮಿಶ್ರಿತ ಅರ್ಧ ತೋಳಿನ ಶರ್ಟ್ ಹಾಗೂ … Read more

ಸಿಗಂದೂರಿನಲ್ಲಿ ಪೊಲೀಸ್‌ ಠಾಣೆ ಸ್ಥಾಪನೆಗೆ MLA ಆಗ್ರಹ, ಸದನದಲ್ಲಿ ಗೃಹ ಸಚಿವರು ಹೇಳಿದ್ದೇನು?

MLA-Beluru-Gopalakrishna-Demands-for-new-police-station-to-sigandur.

ವಿಧಾನಸಭೆ (ಬೆಳಗಾವಿ): ಸಿಗಂದೂರು (Sigandur) ವ್ಯಾಪ್ತಿಯಲ್ಲಿ ಹೊಸದಾಗಿ ಪೊಲೀಸ್‌ ಠಾಣೆ (Police Station) ಸ್ಥಾಪಿಸುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು. ಇದಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಉತ್ತರ ನೀಡಿದ್ದಾರೆ. ವಿಧಾನಸಭೆಯಲ್ಲಿ ಎಂಎಲ್‌ಎ ಪ್ರಸ್ತಾಪಿಸಿದ್ದೇನು? ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣವಾದ ನಂತರ, ಪ್ರಖ್ಯಾತ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಸಾವಿರಾರು ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗಿರುವ ಕಾರ್ಗಲ್ ಠಾಣೆಯ 80 ಕಿ.ಮೀ. ದೂರದಲ್ಲಿದೆ. ಯಾವುದೇ ಸಮಸ್ಯೆ ಉಂಟಾದರೆ ತಕ್ಷಣಕ್ಕೆ ಸ್ಪಂದಿಸಲು ಕಷ್ಟವಾಗುತ್ತದೆ. … Read more