ಜಮೀನು ಉಳುಮೆ ಮಾಡುವಾಗ ಪತ್ತೆಯಾಯ್ತು ವೀರಗಲ್ಲು, ಏನಿದೆ ಅದರಲ್ಲಿ?
ಶಿಕಾರಿಪುರ: ಹಿರೇಜಂಬೂರು ಗ್ರಾಮದ ಪ್ರಭಣ್ಣ ಕೊಂಡೇರ ಅವರ ಜಮೀನಿನಲ್ಲಿ ಉಳುಮೆ ಮಾಡುವಾಗ 12ನೇ ಶತಮಾನದ ವೀರಗಲ್ಲು (Hero Stone) ಪತ್ತೆಯಾಗಿದೆ. 150 ಸೆಂಟಿ ಮೀಟರ್. ಎತ್ತರ, 9 ಸೆಂ.ಮೀ. ಅಗಲವಿದೆ. ಮೂರು ಹಂತದ ಕೆತ್ತನೆ ಒಳಗೊಂಡಿದೆ. ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗೋವುಗಳು ಮತ್ತು ಸ್ತ್ರೀಯರನ್ನು ರಕ್ಷಿಸಿ ವೀರಮರಣ ಹೊಂದಿದವನಿಗೆ ವೀರಗಲ್ಲು ಮೇಲಿನ ಪಟ್ಟಿಕೆಯಲ್ಲಿ ಆರು ಸಾಲಿನ ಶಾಸನ ಪಾಠವಿರುವುದು ಕಂಡು ಬಂದಿದೆ. ಕಳಚೂರಿಯ ಚಕ್ರವರ್ತಿ ಬಿಜ್ಜಳ ದೇವನ ಆಡಳಿತ … Read more