ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾವು
SHIVAMOGGA LIVE NEWS | 25 JULY 2024 ಶಿವಮೊಗ್ಗ ಲೈವ್.ಕಾಂ : ಸರ್ಕಾರಿ ಬಸ್ ನಿಲ್ದಾಣದ (Bus Stand) ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಗುರುತು ಪತ್ತೆಯಾಗದ ಹಿನ್ನೆಲೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ವ್ಯಕ್ತಿಗೆ 45 ರಿಂದ 50 ವರ್ಷ ವಯಸ್ಸಾಗಿದೆ. ಮೃತ ವ್ಯಕ್ತಿಯು 5.06 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕಿಬ್ಬೊಟ್ಟೆಯ ಮೇಲೆ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. … Read more