ಶಿವಮೊಗ್ಗದ ವಂದನಾ ಟಾಕೀಸ್ ಬಳಿ ರಾತ್ರಿ ತಂದು ನಿಲ್ಲಿಸಿದ್ದ RX135 ಬೆಳಗ್ಗೆ ಇಲ್ಲ
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆ ಮುಂದೆ ನಿಲ್ಲಸಿದ್ದ ಆರ್.ಎಕ್ಸ್ 135 ಬೈಕ್ ಕಳ್ಳತನವಾಗಿದೆ. ರಾತ್ರಿ ವೇಳೆ ಕಳವು ಮಾಡಡಲಾಗಿದೆ. ಶಿವಮೊಗ್ಗದ ವಂದನಾ ಟಾಕೀಸ್ ಸಮೀಪ ಕುಂಬಾರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಗಣೇಶ್ ಶೇಟ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನ ಮಾಡಲಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳಗೆದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಕಳ್ಳತನವಾಗಿರುವುದು ಖಚಿತವಾಗಿದೆ. … Read more