ಸಾಗರದ ಪ್ರತಿಷ್ಠಿತ ಎಂ.ಡಿ.ಎಫ್ಗೆ ನೂತನ ಅಧ್ಯಕ್ಷರ ಆಯ್ಕೆ
ಸಾಗರ : ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (ಎಂ.ಡಿ.ಎಫ್) ನೂತನ ಅಧ್ಯಕ್ಷರಾಗಿ (President) ಬಿ.ಆರ್.ಜಯಂತ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಎಂ.ಡಿ.ಎಫ್ನ 59ನೇ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜು ಆವರಣದ ಕಂಚಿಕೈ ದೇವಪ್ಪ ಸಭಾಂಗಣದಲ್ಲಿ ಮಹಾಸಭೆ ನಡೆಯಿತು. ಎಂ.ಹರನಾಥರಾವ್ ಮತ್ತಿಕೊಪ್ಪ ಅವರು ಈವರೆಗೂ ಎಂ.ಡಿ.ಎಫ್ನ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ » ‘ಸರಿಯಾಗಿ ಕರೆಂಟ್ ಕೊಡ್ತಿಲ್ಲʼ, ಮೆಸ್ಕಾಂ ಕಚೇರಿ ಮುಂದೆ ಕುಳಿತು ಬಳಕೆದಾರರ ಆಕ್ರೋಶ