ಶಿಕಾರಿಪುರದ ಬೇಗೂರು, ಬೈರನಹಳ್ಳಿ ಸುತ್ತಮುತ್ತ ಚಿರತೆ ಭೀತಿ

201023-leopard-general-image.webp

SHIVAMOGGA LIVE NEWS | 28 NOVEMBER 2023 SHIKARIPURA : ತಾಲೂಕಿನ ಬೇಗೂರು ಮತ್ತು ಬೈರನಹಳ್ಳಿ ಗ್ರಾಮದ ನಡುವೆ ಚಿರತೆ (Leopard) ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ರೈತರು ಜಮೀನಿಗೆ ತೆರಳಲು ಕೂಡ ಹೆದರುತ್ತಿದ್ದಾರೆ. ಬೇಗೂರು ಕರೇಹಳ್ಳ ಭಾಗದಲ್ಲಿ ನವೆಂಬರ್‌ ತಿಂಗಳ ಆರಂಭದಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸುತ್ತಮುತ್ತಲು ಬೋನ್‌ ಇರಿಸಲಾಗಿದೆ. ಆದರೆ ಚಿರತೆ ಸುತ್ತಮುತ್ತಲು ಸಂಚರಿಸುತ್ತಿದೆ. ಇದರಿಂದ ಆತಂಕಕ್ಕೀಡಾದ ಗ್ರಾಮಸ್ಥರು ಜಮೀಗೆ … Read more

ಭದ್ರಾವತಿ ಕಾರೇಹಳ್ಳಿ ಬಳಿ ಬೋನಿಗೆ ಬಿತ್ತು ಚಿರತೆ

241123 Leopard Caught at Karehalli in BHADRAVATHI

SHIVAMOGGA LIVE NEWS | 24 NOVEMBER 2023 BHADRAVATHI : ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಗಂಡು ಚಿರತೆ ಸೆರೆಯಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿಯಲ್ಲಿ ಚಿರತೆ ಸೆರೆ ಸಿಕ್ಕಿದೆ‌. ಮಧ್ಯರಾತ್ರಿ ಚಿರತೆ ಸೆರೆಯಾಗಿದೆ. ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು‌. ಈಚೆಗೆ ಕಾರೇಹಳ್ಳಿಯ ಧನಂಜಯ ಎಂಬುವವರ ಮನೆ ಬಳಿ ಸಾಕು ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿತ್ತು. ಚೈನ್ ಹಾಕಿ ಕಟ್ಟಲಾಗಿದ್ದ ನಾಯಿಯನ್ನು ಎಳೆದು ಸಾಯಿಸಿ ಅರ್ಧ ತಿಂದು ಬಿಟ್ಟು ಹೋಗಿತ್ತು. ಮಾಹಿತಿ : … Read more

ಕೆಲಸೂರಿನಲ್ಲಿ ಚಿರತೆಗಳು ಪ್ರತ್ಯಕ್ಷ, ಮನೆಯಿಂದ ಹೊರ ಬರಲು ಗ್ರಾಮಸ್ಥರಿಗೆ ಆತಂಕ

201023-leopard-general-image.webp

SHIVAMOGGA LIVE NEWS | 22 NOVEMBER 2023 THIRTHAHALLI : ಕಮ್ಮರಡಿ ಸಮೀಪದ ಕೆಸಲೂರು ಗ್ರಾಮದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲಸೂರು ಸಮೀಪದ ಅಕೇಶಿಯ ನೆಡುತೋಪಿನಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ಹಾಗಾಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ನಡೆದು ಹೋಗಲು ಮತ್ತು ತೋಟ, ಗದ್ದೆಗೆ ಹೋಗಲು ಜನರು ಭಯ ಪಡುತ್ತಿದ್ದಾರೆ. ಇನ್ನು, ಜಾನುವಾರುಗಳನ್ನು ಮೇಯಲು ಕೊಟ್ಟಿಗೆಯಿಂದ ಹೊರ ಬಿಡಲಾಗದೆ ಚಿಂತೆಗೀಡಾಗಿದ್ದಾರೆ. ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್‌ ಅವರ … Read more

ಕಾರ್ಗಲ್‌ನಲ್ಲಿ ಹೆಣ್ಣು ಚಿರತೆಯ ಮೃತದೇಹ ಪತ್ತೆ, ಕುತ್ತಿಗೆ ಬಳಿ ಮೂರು ಹಲ್ಲಿನ ಗುರುತು ಗೋಚರ

KARGAL-SAGARA-NEWS-1.jpg

SHIVAMOGGA LIVE NEWS | 18 NOVEMBER 2023 KARGAL : ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ತೆರಳುವ ರಸ್ತೆಯಲ್ಲಿ ಹೆಣ್ಣು ಚಿರತೆಯ (Leopard) ಶವ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶವ ಪರೀಕ್ಷೆ ವೇಳೆ ಚಿರತೆಯ ಕುತ್ತಿಗೆ ಬಳಿ ಹಲ್ಲಿನ ಗುರುತು ಕಂಡು ಬಂದಿದೆ. ಎರಡು ಚಿರತೆಗಳ ಮಧ್ಯೆ ಕಾದಾಟದಲ್ಲಿ ಹೆಣ್ಣು ಚಿರತೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಶವ ಪರೀಕ್ಷೆಯ ವರದಿ ಬಳಿಕ ಸಾವಿಗೆ … Read more

ಡಾಬರ್‌ ಮ್ಯಾನ್‌ ನಾಯಿ ಎಳೆದೊಯ್ದು ಅರೆಬರೆ ತಿಂದ ಚಿರತೆ

201023-leopard-general-image.webp

SHIVAMOGGA LIVE NEWS | 20 OCTOBER 2023 BHADRAVATHI : ಮನೆ ಮುಂದೆ ಕಟ್ಟಿದ್ದ ಡಾಬರ್‌ ಮ್ಯಾನ್‌ ನಾಯಿಯನ್ನು ಎಳೆದೊಯ್ದಿರುವ ಚಿರತೆಯೊಂದು (Leopard) ಅರೆಬರೆ ತಿಂದು ಪರಾರಿಯಾಗಿದೆ. ಭದ್ರಾವತಿ ತಾಲೂಕು ಕಾರೇಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಧನಂಜಯ ಎಂಬುವವರ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಇದನ್ನೂ ಓದಿ- ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್‌ ಏನು? ಡಾಬರ್‌ ಮ್ಯಾನ್‌ ನಾಯಿಯನ್ನು ಚೈನ್ ಹಾಕಿ ಮನೆ … Read more

ಗೆಜ್ಜೇನಹಳ್ಳಿ ಬಳಿ ಅರಣ್ಯ ಇಲಾಖೆ ಬೋನಿಗೆ ಬಿತ್ತು ಚಿರತೆ

070923-Leapord-Caught-at-Gejjenahalli-in-Shimoga.webp

SHIVAMOGGA LIVE NEWS | 7 SEPTEMBER 2023 HOLEHONNURU : ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆಯೊಂದು (Leopard) ಸೆರೆ ಸಿಕ್ಕಿದೆ. ಗೆಜ್ಜೇನಹಳ್ಳಿ ಗ್ರಾಮದಲ್ಲಿ ಚಿರತೆಯನ್ನು ಸಿಕ್ಕಿದ್ದು, ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಇದನ್ನೂ ಓದಿ – ಶಿವಮೊಗ್ಗದಿಂದ ಕನೆಕ್ಟಿಂಗ್ ವಿಮಾನ ಹಾರಾಟಕ್ಕೆ ಗ್ರೀನ್‌ ಸಿಗ್ನಲ್‌, ಕೆಲವೆ ತಿಂಗಳಲ್ಲಿ ಬರಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗಜ್ಜೇನಹಳ್ಳಿ, ಬನ್ನಿಕೆರೆ, ಕೊಮ್ಮನಾಳು, ಕುಂಚೇನಹಳ್ಳಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಜನರ ಆಗ್ರಹದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ … Read more

ಶಿವಮೊಗ್ಗದಲ್ಲಿ ಬೋನಿಗೆ ಬಿತ್ತು ಚಿರತೆ, ಸೆರೆ ಹಿಡಿಯಲು ಮೈಸೂರಿನಿಂದ ಬಂದಿತ್ತು ಟಾಸ್ಕ್‌ ಫೋರ್ಸ್‌

Leopard-Caught-at-Bikkonahalli-near-Kunchenahalli-Forest-range

SHIVAMOGGA LIVE NEWS | 19 AUGUST 2023 SHIMOGA : ಗಂಡು ಚಿರತೆಯೊಂದು (Leopard) ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಇಲ್ಲಿಗೆ ಸಮೀಪದಲ್ಲಿ ಹತ್ತು ದಿನದ ಹಿಂದೆ ಚಿರತೆ ದಾಳಿಗೆ ಮಹಿಳೆ ಸಾವನ್ನಪ್ಪಿದ್ದರು. ಲೆಪರ್ಡ್‌ ಟಾಸ್ಕ್‌ ಫೋರ್ಸ್‌ (Task Force) ಮತ್ತು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ (Kunchenahalli) ಮೀಸಲು ಅರಣ್ಯ ವ್ಯಾಪ್ತಿಯ ಬಿಕ್ಕೋನಹಳ್ಳಿ (Bikkonahalli) ಗ್ರಾಮದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು. ಸುಮಾರು … Read more

BREAKING NEWS – ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿ, ಗ್ರಾಮಸ್ಥರಲ್ಲಿ ಆತಂಕ

Leopard-attack-at-Bikkonahalli-in-Shimoga-Taluk

SHIVAMOGGA LIVE NEWS | 8 AUGUST 2023 SHIMOGA : ಚಿರತೆಯೊಂದು ಮಹಿಳೆ ಮೇಲೆ ದಾಳಿ (Attack) ಮಾಡಿದೆ. ಇಂದು ಸಂಜೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.  42 ವರ್ಷದ ಯಶೋದಮ್ಮ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಬಿಕೋನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯಶೋದಮ್ಮ ಬಹು ಹೊತ್ತಾದರು ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಅವರಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ … Read more

ಉರುಳಿಗೆ ಸಿಲುಕಿ ಚಿರತೆ ಸಾವು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡು

leopard-found-at-agaradahalli-in-Bhadravathi.

SHIVAMOGGA LIVE NEWS | 8 AUGUST 2023 BHADRAVATHI : ಉರುಳಿಗೆ ಸಿಲುಕಿ ಗಂಡು ಚಿರತೆಯೊಂದು (leopard) ಸಾವನ್ನಪ್ಪಿದೆ. ಬೆಳಗ್ಗೆ ಚಿರತೆ ಉರುಳಿಗೆ ಸಿಲುಕಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದನ್ನೂ ಓದಿ – ನಡು ರಸ್ತೆಯಲ್ಲಿ ಕೆಂಪು ಧ್ವಜ ನೆಟ್ಟು ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ವಿಭಿನ್ನ ರೀತಿಯ ಹೋರಾಟ ಭದ್ರಾವತಿ ತಾಲೂಕು ಅಗರದಹಳ್ಳಿಯಲ್ಲಿ ಚಿರತೆ ಉರುಳಿಗೆ ಸಿಲುಕಿದೆ. ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ … Read more

ಭದ್ರಾವತಿ VISL ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ, ಕಾರ್ಮಿಕರಲ್ಲಿ ಆತಂಕ

Leopard-Found-in-VISL-at-Bhadravathi

SHIVAMOGGA LIVE | 25 JULY 2023 BHADRAVATHI : ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕಾರ್ಮಿಕರು ಚಿರತೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಚಿರತೆ (Leopard) ಪ್ರತ್ಯಕ್ಷವಾಗಿರುವ ವಿಚಾರ ತಿಳಿದು ಕಾರ್ಮಿಕರು ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ತುಂಗಾ ನದಿ ಹೊಸ ಸೇತುವೆ ಮೇಲಿಂದ ಜಿಗಿದು ಯುವಕನ ಹುಚ್ಚಾಟ, ವಿಡಿಯೋ ವೈರಲ್‌ ಕಾರ್ಖಾನೆಯ ಬಿಜಿ ವೇಯಿಂಗ್‌ ಬ್ರಿಡ್ಜ್‌ ಸಮೀಪ ಚಿರತೆ (Leopard) ಕಾಣಿಸಿಕೊಂಡಿದೆ. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ … Read more