ತ್ಯಾವರೆಕೊಪ್ಪ ಮೃಗಾಲಯದ ಮತ್ತೊಂದು ಹುಲಿ ಸಾವು, ಈ ವರ್ಷದಲ್ಲಿ ಎರಡನೇ ಟೈಗರ್ ಕೊನೆಯುಸಿರು
ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಏಕೈಕ ಗಂಡು ಹುಲಿ (Tiger) ವಿಜಯ್ ಇಂದು ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಜನಿಸಿದ್ದ ವಿಜಯ್ (17), ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಳೆದ ಒಂದು ತಿಂಗಳಿಂದ ವಿಜಯ್ ನಿಯಮಿತವಾಗಿ ಆಹಾರ ಸೇವಿಸುತ್ತಿರಲಿಲ್ಲ. ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗಿತ್ತು ಎಂದು ತಿಳಿಸಲಾಗಿದೆ. ಮೃಗಾಲಯದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು ವಿಜಯ್ ಹುಲಿ. ಇಡೀ ಜೀವನ ಪ್ರಕೃತಿ ಶಿಕ್ಷಣ ಉದ್ದೇಶಕ್ಕೆ ಮೀಸಲಾಗಿತ್ತು. ವಿಜಯ್ ಸಾವಿನಿಂದ ಮೃಗಾಲಯಕ್ಕೆ ದೊಡ್ಡ … Read more