ಬೈಕ್ ಮಾಸ್ಕ್’ನಲ್ಲಿ ಮೂರುವರೆ ಅಡಿ ಉದ್ದದ ಹಸಿರು ಹಾವು

Green Snake resuced by snake kiran

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಿವಮೊಗ್ಗದ ಸರ್ಜಿ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್’ನಲ್ಲಿ ಹಾವು ಕಾಣಿಸಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಮೂರುವರೆ ಅಡಿ ಉದ್ದದ ಹಸಿರು ಹಾವನ್ನು ರಕ್ಷಣೆ ಮಾಡಿದ್ದಾರೆ. ಸಹಕಾರ ನಗರದ ವಾಸಿ ಪ್ರವೀಣ್ ಜವಳಿ ಎಂಬುವವರು ಸರ್ಜಿ ಆಸ್ಪತ್ರೆ ಬಳಿ ಬಂದಾಗ ಬೈಕ್’ನಲ್ಲಿ ಹಾವು ಸೇರಿಕೊಂಡಿರುವುದು ಗೊತ್ತಾಗಿದೆ. ಕೂಡಲೆ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಬೈಕ್’ನ ಮುಂಬದಿಯ ಮಾಸ್ಕ್’ನಲ್ಲಿ ಹಾವು ಅವಿತಿತ್ತು. ಮೆಕಾನಿಕ್ ನೆರವಿನಲ್ಲಿ … Read more

ಇವತ್ತಿನ ಅಡಕೆ ಧಾರಣೆ | 16 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಮಾರುಕಟ್ಟೆಯಲ್ಲಿ ಇವತ್ತನ ಅಡಕೆ ಧಾರಣೆ ಹೀಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 34249 ಬೆಟ್ಟೆ 46058 51200 ರಾಶಿ 43096 46099 ಸರಕು 51009 74570 ಶಿರಸಿ ಮಾರುಕಟ್ಟೆ ಚಾಲಿ 30539 40800 ಬೆಟ್ಟೆ 25696 45381 ಬಿಳೆ ಗೋಟು 20099 33878 ರಾಶಿ 43208 46899 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 30789 33389 ಕೋಕ 20299 28012 … Read more

ಶಿವಮೊಗ್ಗ ನಗರದಲ್ಲಿ ಎರಡು ದಿನ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ

Water Tap image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಫೆ.17 ಮತ್ತು 18ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ತಿಳಿಸಿದ್ದಾರೆ. ಮೆಸ್ಕಾಂ ವತಿಯಿಂದ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಕೃಷ್ಣರಾಜೇಂದ್ರ ಜಲ ಶುದ್ಧೀಕರಣ … Read more

ಶಾಲೆ ಒಳಗೆ ಮಾಧ್ಯಮಗಳನ್ನು ಬಿಡದಂತೆ ಶಿವಮೊಗ್ಗದಲ್ಲಿ ಆಗ್ರಹ

SDPI shimoga unit workers submit memorandum

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಾಲೆ ಮಕ್ಕಳನ್ನು ಮಾಧ್ಯಮದ ವರದಿಗಾರರು ಅಪರಾಧಿಗಳ ಹಾಗೆ ಬಿಂಬಿಸುತ್ತಿದ್ದಾರೆ. ಹಾಗಾಗಿ ಮಾಧ್ಯಮ ಪ್ರತಿನಿಧಿಗಳು ಶಾಲೆ ಆವರಣ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು ಎಂದು SDPI ಜಿಲ್ಲಾ ಘಟಕ ಆಗ್ರಹಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ SDPI ಕಾರ್ಯಕರ್ತರು, ಮಾಧ್ಯಮದವರು ಶಾಲೆ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆ. ಅಪರಾಧಿಗಳ ಹಾಗೆ ಚಿತ್ರಿಸಿ ಪ್ರಸಾರ ಮಾಡುತ್ತಿದ್ದಾರೆ. ಇದಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿದರು. ಹಿಜಾಬ್ ಕುರಿತ ಹೈಕೋರ್ಟ್ … Read more

ದುರ್ಗಿಗುಡಿಯಲ್ಲಿ ದಂತ ವೈದ್ಯರ ಮೇಲೆ ಹಲ್ಲೆ, ಕಾರಿನ ಗ್ಲಾಸ್ ಪುಡಿ ಪುಡಿ

jayanagara police station in shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ದಂತ ವೈದ್ಯರೊಬ್ಬರ ಮೇಲೆ ಶಿವಮೊಗ್ಗದ ದುರ್ಗಿಗುಡಿಯಲ್ಲಿ ಹಲ್ಲೆ ನಡೆಸಲಾಗಿದೆ. ದೊಣ್ಣೆಯಿಂದ ಅವರ ಕಾರಿನ ಗಾಜು ಒಡೆದು ಹಾಕಲಾಗಿದೆ. ಕೆಲಸ ಮುಗಿಸಿ ರಾತ್ರಿ ದಂತ ವೈದ್ಯರೊಬ್ಬರು ಕಾರು ತಂದು ಮನೆ ಬಳಿ ನಿಲ್ಲಿಸಿ ನಡೆದು ಹೋಗುತ್ತಿದ್ದರು. ಈ ಸಂದರ್ಭ ಸಮೀಪದ ಮನೆಯ ವ್ಯಕ್ತಿಯೊಬ್ಬರು ವೈದ್ಯರನ್ನು ತಡೆದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನಾಯಿಯನ್ನು ತಮ್ಮ ಮನೆ ಬಳಿ ಕಟ್ಟದಂತೆ ಎಚ್ಚರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ … Read more

‘ನಾವೇನಾದರೂ ಕೊಲೆ ಮಾಡಲು ಬಂದಿದ್ದೇವಾ?’ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರ ಆಕ್ರೋಶ

shimoga hijab controversy at ATNC college

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಲೇಜು ತರಗತಿಗಳು ಪುನಾರಂಭವಾಗಿವೆ. ಸಣ್ಣಪುಟ್ಟ ಗೊಂದಲ ಹೊರತು ಜಿಲ್ಲೆಯಲ್ಲಿ ತರಗತಿಗಳು ಸುಗಮವಾಗಿ ನಡೆದವು. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ತರಗತಿ ಪ್ರವೇಶಿಸದೆ ಹೊರ ನಡೆದಿದ್ದಾರೆ. ನಗರದ ಎರಡು ಖಾಸಗಿ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಬುರ್ಖಾ ಮತ್ತು ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ಹಿಂತಿರುಗಿದರು. ಡಿವಿಎಸ್ ಕಾಲೇಜಿನಲ್ಲಿ ಗೊಂದಲ ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ … Read more

ಶಿವಮೊಗ್ಗ ಜಿಲ್ಲೆಯ ಶಾಲೆ, ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ, ಮೂರು ಕಾಲೇಜಿಗೆ ಇವತ್ತೂ ರಜೆ

Police Bus at Shimoga BH Road

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಇವತ್ತಿನಿಂದ ಪುನಾರಂಭವಾಗಲಿದೆ. ಎಲ್ಲಾ ಶಾಲೆ, ಕಾಲೇಜುಗಳ ಬಳಿ ನಿಷೇಧಾಜ್ಞೆ ಮುಂದುವರೆಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ. ಈ ನಡುವೆ ಮೂರು ಕಾಲೇಜುಗಳಿಗೆ ಇವತ್ತು ಕೂಡ ರಜೆ ನೀಡಲಾಗಿದೆ. ಹಿಜಾಬ್, ಕೇಸರಿ ಶಾಲೆ ವಿವಾದ ಹಿನ್ನೆಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇವತ್ತು ಕಾಲೇಜು ತರಗತಿಗಳು ಪುನಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾಲೇಜು … Read more

BREAKING NEWS | ಶಿವಮೊಗ್ಗ ಸಿಟಿಯಲ್ಲಿ ಮತ್ತೆ ನಿಷೇಧಾಜ್ಞೆ, ಎಷ್ಟು ದಿನ? ಏನೆಲ್ಲ ನಿರ್ಬಂಧವಿದೆ?

breaking news graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಹಿಜಾಬ್, ಕೇಸರಿ ಶಾಲು ಸಂಘರ್ಷದ ಬಳಿಕ ಶಿವಮೊಗ್ಗದಲ್ಲಿ ಕಾಲೇಜುಗಳು ಪುನಾರಂಭವಾಗುತ್ತಿವೆ. ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಡಾ.ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದಾದ್ಯಂತ ಫೆಬ್ರವರಿ 16ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 19ರ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೈಕೋರ್ಟ್ ಮಧ್ಯಂತರ ತೀರ್ಪು ಪಾಲಿಸಿ » ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ, ಧರ್ಮ ಸೂಚಕ … Read more

ಸಂಸದರ ಭೇಟಿಗೂ ಮುಂಚೆ ತುಂಗಾ ನದಿ ಹೊಸ ಸೇತುವೆ ಮೇಲಿನ ಗುಂಡಿಗಳು ಮಾಯ

Tunga Bridge Pot holes cleared

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲಿನ ಗುಂಡಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸೇತುವೆ ಮೇಲಿನ ಗುಂಡಿಗಳಿಗೆ ತೇಪೆ ಹಾಕಲಾಗಿದೆ. ಸದ್ಯ ವಾಹನ ಸವಾರರು ನಿರ್ಭೀತಿಯಿಂದ ಸಂಚರಿಸಬಹುದಾಗಿದೆ. ತುಂಗಾ ನದಿ ಹೊಸ ಸೇತುವೆ ಮೇಲೆ ದೊಡ್ಡ ಗಾತ್ರದ ಗುಂಡಿಗಳಿದ್ದವು. ಇದು ವಾಹನ ಸವಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಗುಂಡಿಗಳಿಂದಾಗಿಯೇ ತುಂಗಾ ನದಿ ಹೊಸ ಸೇತುವೆ ಮೇಲೆ ಅಪಘಾತ ಸಂಭವಿಸುತ್ತಿತ್ತು. ಶಿವಮೊಗ್ಗ ಲೈವ್’ನಲ್ಲಿ ವರದಿ ಪ್ರಕಟ ತುಂಗಾ … Read more

ನಾಳೆಯಿಂದ ಕಾಲೇಜುಗಳು ಪುನಾರಂಭ, ಹೇಗಿದೆ ಸಿದ್ಧತೆ? ಎಷ್ಟಿದೆ ಬಂದೋಬಸ್ತ್?

Police Bus at Shimoga BH Road

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಲೇಜುಗಳು ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯು ರಜೆ ಘೋಷಿಸಲಾಗಿತ್ತು. ಸಂಘರ್ಷದ ಬಳಿಕ ಕಾಲೇಜುಗಳು ಪುನಾರಂಭ ಆಗುತ್ತಿದೆ. ಇದಕ್ಕೆ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಗಲಾಟೆ, ಕಲ್ಲು ತೂರಾಟದ ಹಿನ್ನೆಲೆ ಕಾಲೇಜುಗಳು ಕಟ್ಟುನಿಟ್ಟು ಕ್ರಮ ಕೈಗೊಂಡಿವೆ. ಖಾಸಗಿ ಶಾಲೆ, ಕಾಲೇಜು ಕ್ಯಾಂಪಸ್’ಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಏನೆಲ್ಲ ಕ್ರಮ … Read more